Search
  • Follow NativePlanet
Share
ಮುಖಪುಟ » ಸ್ಥಳಗಳು » ಯವತ್ಮಾಳ » ಹವಾಮಾನ

ಯವತ್ಮಾಳ ಹವಾಮಾನ

ವರ್ಷದ ಬಹುತೇಕ ಸಮಯ ಯವತ್ಮಾಳ ಬಿಸಿಲು ಹಾಗೂ ಚಳಿಯಿಂದ ಕೂಡಿರುತ್ತದೆ, ಮಳೆಯ ಪ್ರಮಾಣವೂ ಕಡಿಮೆ ಇರುತ್ತದೆ. ಮಳೆಗೂ ಮೊದಲು ಹಾಗೂ ಚಳಿಗಾಲದ ನಂತರ ಅಂದರೆ ಅಕ್ಟೋಬರ್ ನಿಂದ ಫೆಬ್ರುವರಿಯ ನಡುವಿನ ಅವಧಿಯಲ್ಲಿ ಪ್ರವಾಸಿಗರು ಯವತ್ಮಾಳಿಗೆ ಭೇಟಿ ಮಾಡಲು ಸೂಕ್ತ ಕಾಲವಾಗಿದೆ.

ಬೇಸಿಗೆಗಾಲ

ಬೇಸಿಗೆಕಾಲದಲ್ಲಂತೂ ಇಲ್ಲಿನ ವಾತಾವರಣವು ಶಾಖಮಯವಾಗಿರುತ್ತದೆ. ಈ ಅನುಭವವು ಮಾರ್ಚ್ ನಿಂದ ಹಿಡಿದು ಮೇ ತಿಂಗಳವರೆಗೆ ಇರುತ್ತದೆ. ಈ ದಿನಗಳಲ್ಲಿ ಇಲ್ಲಿಗೆ ಪ್ರವಾಸಕ್ಕೆ ಬರುವುದನ್ನು ತಡೆಹಿಡಿಯಿರಿ. ಬೇಸಿಗೆಯಲ್ಲಿ ತಾಪಮಾನ 45 ಡಿಗ್ರಿ ಸೆಲ್ಶಿಯಸ್ ಇದ್ದು ಬಿಸಿ ಗಾಳಿಯೆ ಮೈಗೆ ಬಡಿದ ಹಾಗಾಗುತ್ತದೆ.

ಮಳೆಗಾಲ

ಇಲ್ಲಿ ಸಾಧಾರಣ ಮಳೆಯಾಗುತ್ತದೆ. ವರ್ಷದಲ್ಲಿ ಸುಮಾರು ನಾಲ್ಕು ತಿಂಗಳ ಕಾಲ ಅಂದರೆ ಜೂನ್ ನಿಂದ ಸೆಪ್ಟೆಂಬರ್ ತಿಂಗಳವರೆಗೆ ಮಳೆ ಇದ್ದು ಜುಲೈ ತಿಂಗಳಲ್ಲಿ ಹೆಚ್ಚಾಗಿ ಮಳೆ ಬೀಳುತ್ತದೆ. ಮಳೆಯಲ್ಲಿ ಕುಣಿದು ಕುಪ್ಪಳಿಸ ಬೇಕೆಂದರೆ ಯವತ್ಮಾಳಿಗೆ ಬಂದರೆ ಒಳ್ಳೆ ಅನುಭವ ಕೂಡ ಸಿಗುತ್ತದೆ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರುವರಿ ತಿಂಗಳವರೆಗೂ ಇಲ್ಲಿ ಚಳಿಗಾಲ. ಯವತ್ಮಾಳ ಪಟ್ಟಣದಲ್ಲಿ ಚಳಿಗಾಲದಲ್ಲಿ ತಾಪಮಾನ ಅತ್ಯಂತ ಕಡಿಮೆ ಎಂದರೆ 5 ಡಿಗ್ರಿ ಸೆಲ್ಶಿಯಸಿಗೆ ಕುಸಿದಿರುತ್ತದೆ. ಬೆಳಗಿನ ಸಮಯದಲ್ಲೂ ಕೂಡ ಬಹಳ ತಂಪಾಗಿದ್ದು ರಾತ್ರಿಯಲ್ಲಿ ವಿಪರೀತ ಚಳಿ ಇರುತ್ತದೆ. ಚಳಿಗಾಲಕ್ಕೆ ಬೇಕಾದ ಬಟ್ಟೆಬರೆಗಳನ್ನು ತೆಗೆದುಕೊಂಡು ಹೋಗಲೆ ಬೇಕು.