ಚಿಕಲ್ದಾರಾ ಪಟ್ಟಣದಲ್ಲಿ ಪ್ರಮುಖವಾದ ಎರಡು ವಸ್ತು ಸಂಗ್ರಹಾಲಯಗಳಿವೆ. ಅವುಗಳೆಂದರೆ ಮೊದಲನೆಯದಾಗಿ ಮಹಾರಾಷ್ಟ್ರ ಫಾರೆಸ್ಟ್ ರೇಂಜರ್ ಕಾಲೇಜ್ ಹಾಗೂ ಮೇಲ್ಘಾಟ್ ಟೈಗರ್ ಪ್ರಾಜೆಕ್ಟ್.
ಮಹಾರಾಷ್ಟ್ರ ಫಾರೆಸ್ಟ್ ರೇಂಜರ್ ಕಾಲೇಜ್ ಬೇರೆ ಬೇರೆ ಕಾಡು ಮೃಗಗಳ ಜಾತಿಗಳನ್ನು ಹಾಗೂ ವಿವಿಧ ಜಾತಿಯ ಸಸ್ಯಗಳನ್ನು ಹೊಂದಿದ್ದು ಪ್ರವಾಸಿಗರಿಗೆ ನೋಡಲು ಸಿಗುತ್ತವೆ. ಜೊತೆಗೆ ಇದೊಂದು ಅಪರೂಪದ ಪಳಯುಳಿಕೆಯ ಸ್ಥಳವು ಕೂಡ ಆಗಿದೆ.
ಮೇಲ್ಘಾಟ್ ಟೈಗರ್ ಪ್ರಾಜೆಕ್ಟ್ ಇನ್ನೊಂದು ಮ್ಯೂಸಿಯಂ / ವಸ್ತು ಸಂಗ್ರಹಾಲಯವಾಗಿದ್ದು ನಶಿಸುತ್ತಿರುವ ಹುಲಿ ಸಂತತಿಯನ್ನು ಗಮನದಲ್ಲಿರಿಸಿಕೊಂಡು ನಿರ್ಮಿಸಲಾಗಿದೆ. ಇದು ಗುಗಲಂ ನ್ಯಾಷನಲ್ ಪಾರ್ಕ (ರಾಷ್ಟ್ರೀಯ ಉದ್ಯಾನ) ನ ಒಂದು ಭಾಗವಾಗಿದೆ. ಅಲ್ಲದೆ ಇದು ಯೋಗ ತರಬೇತಿ ಕೇಂದ್ರಕ್ಕೆ ಹತ್ತಿರದಲ್ಲಿದೆ.