Search
 • Follow NativePlanet
Share

ಅಜಂತಾ - ವಿಶ್ವದ ಒಂದು ಪಾರಂಪರಿಕ ತಾಣ

16

ಕ್ರಿ.ಪೂ 2 ನೇ ಶತಮಾನದಷ್ಟು ಹಿನ್ನೆಲೆಯುಳ್ಳ , ಅಜಂತಾ ಗುಹೆಗಳು ಹಿಂದು ಧರ್ಮ, ಬೌದ್ಧ ಮತ್ತು ಜೈನ್ ಧರ್ಮಗಳಿಗೆ, ಸಾಕ್ಷಿಯಾಗಿ ನಿಂತಿದೆ.  ಮಹಾರಾಷ್ಟ್ರ ರಾಜ್ಯದ ಪ್ರಮುಖ ನಗರವಾದ ಔರಂಗಾಬಾದಿನ ಹತ್ತಿರವಿರುವ ಐತಿಹಾಸಿಕ ತಾಣವಾದ ಎಲ್ಲೋರ ಗುಹೆಗಳ ಜೊತೆಗೆ ಅಜಂತ ಗುಹೆಗಳೂ ಸಹ ಪ್ರಪಂಚದ ಒಂದು ಪ್ರಸಿದ್ದ ಪಾರಂಪರಿಕ ಕ್ಷೇತ್ರವೆಂದು ಯುನೆಸ್ಕೋ ಸಂಸ್ಥೆಯಿಂದ ಘೋಷಿತವಾಗಿದೆ.

ಬುದ್ಧನ ಜೀವನ - ಬಿಡಿಸಿಟ್ಟ ಕಗ್ಗಂಟು

30 ಗುಹೆಗಳ ಗುಂಪಾಗಿರುವ ಅಜಂತಾವು, ಮೂರು ಧರ್ಮಗಳ ಚಿತ್ರಕಲೆ, ಶಿಲ್ಪಕಲೆ ಹಾಗು ಹಸಿಚಿತ್ರಗಳನ್ನು ನಿರೂಪಿಸುತ್ತದೆ. ಅಜಂತದ ಈ ರತ್ನದಂತಹ ಗುಹೆಗಳು ನಿರ್ಮಾಣಗೊಂಡಾಗ ಅದರ ಎಲ್ಲ ಗೋಡೆಗಳು ಕ್ರಿ.ಪೂ 2 ನೇ ಶತಮಾನದಿಂದ ಕ್ರಿ.ಪೂ 6 ಮತ್ತು 7ನೇ ಶತಮಾನದ ವಾಸ್ತವಿಕತೆಗೆ ಕಿಟಕಿಯಂತಿದೆ. ಇಲ್ಲಿನ ಎಲ್ಲ ಗುಹೆಗಳಲ್ಲೂ ಕಾಣುವ ಒಂದು ಸಾಮಾನ್ಯ ವಿಷಯವೆಂದರೆ, ಇವು ಬುದ್ದ ದೇವರು ಮೋಕ್ಷ ಪಡೆಯುವ ಪೂರ್ವದ ನಿಜವಾದ ಜೀವನವನ್ನು ಹೊರತರುತ್ತವೆ. ಇಲ್ಲಿನ ಗುಹೆಗಳು ಶ್ರೀಲಂಕಾದಲ್ಲಿ ಕಂಡು ಬರುವ ಸೀಗೆರಿಯ ಗುಹೆಗಳ ಹೋಲಿಕೆಯನ್ನು ತೋರುತ್ತವೆ.

ಈ ಗುಹೆಗಳು ಸಂಪೂರ್ಣಗೊಳ್ಳಲು ತೆಗೆದುಕೊಂಡದ್ದು ಅಚ್ಚರಿಪಡುವಂತಹ 800 ವರ್ಷಗಳು ಎಂದು ನಂಬಲಾಗಿದೆ. ಹಿಂದೆ 19 ನೇ ಶತಮಾನದಲ್ಲಿ, ಕೆಲವು ಬ್ರಿಟೀಷ್ ಸೈನಿಕರು ಬೇಟೆಯಾಡಲು ಬಂದ ಸಮಯದಲ್ಲಿ ಕುದುರೆ ಪಾದರಕ್ಷೆಯ ಆಕಾರದ ಕಲ್ಲನ್ನು ಅಕಸ್ಮಾತಾಗಿ ಕಂಡರು. ಇದರಿಂದ ಮನಸ್ಸೋತ ಅವರು ವನರಾಶಿಯ ಹಿಂದೆ ಅಡಗಿದ್ದ ಮತ್ತಷ್ಟು ಬೃಹತ್ ಸಂಖ್ಯೆಯ ಗುಹೆಗಳನ್ನು ಅನ್ವೇಷಿಸಲು ಹೊರಟರು. ತಕ್ಷಣವೆ, ಸರ್ಕಾರದಿಂದ ಆ ಗುಹೆಗಳನ್ನು ಗುಳಿಮಾಡಲು ಒಂದು ಪುರಾತತ್ವ ಶಾಸ್ತ್ರಜ್ಞರ ತಂಡವನ್ನು ನೇಮಿಸಲಾಯಿತು.

ಮುಂದೆ ನಡೆದ ಸಂಗತಿಗಳು ನಿಬ್ಬೆರಗಾಗಿಸುವಂತಹವು, ಬೌದ್ಧ ಸ್ಮಾರಕಗಳ ಹಲವು ಸ್ತೂಪಗಳು, ತಾರಗಳು, ದ್ವಾರಪಾಲಗಳು,ವಿಹಾರಗಳು ಮತ್ತು ಚೈತ್ಯಗಳು, ಜೊತೆಗೆ ಹಲವು ವರ್ಣಚಿತ್ರಗಳು ಮತ್ತು ವಿನ್ಯಾಸಗಳನ್ನು ಹೊರತರಲಾಯಿತು. ಈ ಎಲ್ಲಾ ವರ್ಣಚಿತ್ರಗಳು ಬೌದ್ಧ ಧರ್ಮದ ಪ್ರಭಾವವನ್ನು ಪ್ರದರ್ಶಿಸುವುದರ ಜೊತೆಗೆ ಬುದ್ಧನ ಜೀವನದ ಸುತ್ತ ಸುತ್ತುತ್ತದೆ.

ನೀವು ಅಲ್ಲಿಗೆ ಸಂದರ್ಶಿಸಿದಾಗ ಗುಹೆಗಳು ನಿಮಗೆ ನೀಡಬಲ್ಲ ಕೊಡುಗೆಗಳು

ಇಲ್ಲಿ ಒಟ್ಟು 29 ಗುಹೆಗಳಿದ್ದು ಇವು ಬುದ್ಧನ ಜೀವನಕ್ಕೆ ಸಂಬಂಧಿಸಿದ ಗಮನಾರ್ಹ ಕಥೆಗಳನ್ನು ಪ್ರದರ್ಶಿಸುತ್ತವೆ. ಪ್ರವಾಸಿಗರಿಗೆ ಮೊದಲು ಸಿಗುವ ಒಂದನೇ ಗುಹೆಯು 6 ರಿಂದ 7ನೇ ಶತಮಾನದ ಅವಧಿಯನ್ನು ವರ್ಣಿಸುತ್ತದೆ. ಗುಹೆಯುದ್ದಕ್ಕೂ ಅಗತ್ಯವಾದ ಚಿಹ್ನೆಗಳು ಮತ್ತು ವರ್ಣಚಿತ್ರಗಳು ಕಾಣುತ್ತವೆ. ಪ್ರವೇಶದಿಂದ ಹಾಗೆ ಕೆಳಮುಖವಾಗಿ ಬಂದರೆ, ಪ್ರತಿ ದೃಷ್ಟಿಯಲ್ಲು ವಿಭಿನ್ನವಾಗಿ ತೋರುವ ಬುದ್ಧನ ಮಾಹನ್ ಚಿತ್ರವೊಂದನ್ನು ನೋಡಬಹುದು. 20 ನೇ ಗುಹೆಯಲ್ಲಿರುವ ತತ್ವದ ಪ್ರಕಾರ ನಾಗರು ಇಲ್ಲಿನ ಪೋಷಕರು. ನೀವು ಮೇಲಿನ ಎಡ ಭಾಗದ ಮೂಲೆಯನ್ನು ನೋಡಿದಾಗ ಮಾತೃ ಭೂಮಿಯನ್ನು ಪ್ರತಿನಿಧಿಸುವ, ಒಂದು ದೇವತೆಯ ಆಕೃತಿಯನ್ನು ಕೆತ್ತಿರುವುದನ್ನು ಕಾಣಬಹುದು. ಈ ಮನೋಹರವಾದ ಚಿತ್ರವು ನೀರನ್ನು ಸಂಕೇತಿಸುತ್ತದೆ.

ಅಂಗೇಲಿಕ್ - ಇದು ಬುದ್ಧ ದೇವಾರಿಗಾಗಿ ತನ್ನ ಕೈಯಲ್ಲಿ ಸರ ಹಿಡಿದು ನಿಂತಿರುವ ಡ್ವಾರ್ಫ್. ಮಹಾ ಬುದ್ಧನ ಚಿತ್ರದ ಪಕ್ಕದಲ್ಲಿ, ಒಂದು ಕಡೆ ಕಮಲವನ್ನು ಹಿಡಿದಿರುವ ಪದ್ಮಪಾಣಿ ಅವೌಕಿತೇಶ್ವರ, ಇನ್ನೊಂದು ಕಡೆ ಸಿಡಿಲು ಹಿಡಿದಿರುವ ವಜ್ರಪಾಣಿ ಇದ್ದಾರೆ. ಇಬ್ಬರೂ ಬೋಧಿಸತ್ವದ ಭಾಗವಾಗಿದ್ದಾರೆ. ನಾಲ್ಕು ಜಿಂಕೆಗಳ ಶಿಲ್ಪಕಲೆ ವ್ಯಕ್ತಿತ್ವದಲ್ಲಿ ಭಿನ್ನವಾಗಿದೆ. ಇಲ್ಲಿನ ಎಲ್ಲಾ ನಾಲ್ಕು ಜಿಂಕೆಗಳು ಒಂದೇ ಮುಖವನ್ನು ಹಂಚಿಕೊಂಡಿವೆ. ಪ್ರೇಮಿಗಳು ಆಂಧ್ರಾದ ನಿಜವಾದ ರಾಜಕುಮಾರಿಯಿಂದ ಪ್ರೇರಿತವಾದ ಕತ್ತಲ ರಾಣಿ ಟಬೂಳನ್ನು ಲೈಂಗಿಕ ಬಯಕೆಯ ಬಹಿಷ್ಕಾರದ ಪ್ರತೀಕವಾಗಿ ತೋರಿಸುತ್ತಾರೆ. ಕಂಬಕ್ಕೆ ಒರಗಿ ನಿಂತಿರುವ ರಾಣಿ, ನರ್ತಕಿ, ದುಖಃದ ಸ್ಥಿತಿಯಲ್ಲಿರುವ ಕನ್ಯಾ ಮತ್ತು ಪರ್ಷಿಯನ್ ರಾಯಭಾರಿ ಈ ಗುಹೆಯಲ್ಲಿ ಕಾಣಬಹುದಾದ ಆಕರ್ಷಕ ಪ್ರದರ್ಶನಗಳಾಗಿವೆ. ಬಂಗಾರದ ಹೆಬ್ಬಾತುಗಳ ಚಿತ್ರಗಳು, ಗುಲಾಬಿ ಬಣ್ಣದ ಆನೆಗಳು ಮತ್ತು ಗೂಳಿ ಕಾಳಗ, ಜೀವಿಗಳ ಅಸ್ತಿತ್ವವನ್ನು ಪ್ರದರ್ಶಿಸಿಸುತ್ತವೆ.

2 ನೇ ಗುಹೆ ಸಹ ಸ್ಪಷ್ಟವಾಗಿ 1ನೇ ಗುಹೆಯಿಂದ ಸ್ಫೂರ್ತಿ ಪಡೆದಿದೆ. ಇಲ್ಲಿನ ಹೆಬ್ಬಾಗಿಲುಗಳು ಭಾರತದಲ್ಲಿ ಕಂಡುಬಂದ ಅನೇಕ ಪುರಾತನ ದೇವಾಲಯಗಳಿಂದ ಪ್ರಭಾವಿತವಾಗಿದೆ. ಇಲ್ಲಿನ ಮೇಲ್ಚಾವಣಿಗಳು ಜಟಿಲವಾದ ವಿನ್ಯಾಸದಿಂದ ಮತ್ತು ಸೊಂಪಾಗಿ ಸಿಂಗರಿಸಲಾಗಿರುತ್ತದೆ. ಇದರ ಗೋಡೆಗಳ ಒಳಗೆ ಬೆರಗುಗೊಳಿಸುವಂತಹ ವಿಸ್ತ್ರುತವಾದ ಬುದ್ದರ ಒಂದು ಸಾವಿರ ಚಿತ್ರಗಳು ಇವೆ. ಬಲಗಡೆಯ ಮೊಗಸಾಲೆಯಲ್ಲಿ ತೂಗುತ್ತಿರುವ ಅಪರಿಣಿತ ಹೆಣ್ಣನ್ನು ‘ವುಮೆನ್ ಆನ್ ಸ್ವಿಂಗ್’ ಎಂದು ಕರೆಯುತ್ತಾರೆ. ಇದು ಬುದ್ದನ ಆಲೋಚನೆಗಳನ್ನು ಎತ್ತಿಹಿಡಿಯುವ ಭೌತಿಕ ಶಕ್ತಿಯ ಪ್ರಕಾಶಕ್ಕೆ ಕಾರಣವಾಯಿತು.

4 ನೇ ಗುಹೆಯನ್ನು 17ನೇ ಗುಹೆಯ ಜೊತೆಗೆ ಮಾಡಲಾಯಿತು, ಆದರೆ ಅದು ಅಪೂರ್ಣವಾಗಿಯೆ ಉಳಿಯಿತು. ಒಂದು ದೊಡ್ಡ ಸಂಖ್ಯೆಯಲ್ಲಿ ಬುದ್ಧನ ಜೀವನದ ವರ್ಣಚಿತ್ರಗಳು ಅಪೂರ್ಣವಾಗಿ ಉಳಿದವು. ಒಂದು ಕ್ರೌಚಿಂಗ್ ಜಿಂಕೆ, ಕುಬ್ಜ ಹಾಡುಗಾರ ಮತ್ತು ಹೂವಿನ ಪ್ಲಾಸ್ಟರ್ ಈ ಗುಹೆಯಲ್ಲಿ ಕಂಡುಬರುವ ಅನೇಕ ವಸ್ತುಗಳಾಗಿವೆ.

6 ನೇ ಗುಹೆ ಮಹಾಯಾನ ಅವಧಿಯನ್ನು  ಪ್ರತಿನಿಧಿಸುತ್ತದೆ. ಹಾರಾಡುವ ಜೋಡಿ ದಂಪತಿಗಳು ಕುಳಿತಿರುವ ಬುದ್ಧನ ಚಿತ್ರದ ಸುತ್ತಲೂ ಇದೆ. ಈ ಗುಹೆಗಳಲ್ಲಿ ಆಧಾರ ಸ್ತಂಭಗಳು ಹಿಂದಿನ ಗುಹೆಗಳಿಗಿಂತ ಹೆಚ್ಚು ಉತ್ತಮವಾಗಿದೆ ಹಾಗೂ ಅಷ್ಟಭುಜಾಕೃತಿಯ ಆಕಾರದಲ್ಲಿವೆ. ಇದು ಕಮಲವನ್ನು ಹಿಡಿದಿರುವ ಭಿಕ್ಷುವಿನ ವರ್ಣಚಿತ್ರವನ್ನು ಹೊಂದಿದೆ.

9 ನೇ ಗುಹೆಯು ಸಭೆಗಾಗಿ ಚೈತ್ಯ ಸಭಾಂಗಣವನ್ನು ಒಳಗೊಂಡಿದೆ. ಇದು ಒಂದು ದೈತ್ಯ ಕುದುರೆಯ ಪಾದರಕ್ಷೆಯ ಆಕಾರದ ಕಿಟಕಿಯನ್ನು ಹೊಂದಿದೆ. ನಾಗರ ಭಕ್ತಾದಿಗಳು ಮತ್ತು ಪ್ರಾಣಿಗಳ ಗೋಡೆ ಚಿತ್ರಗಳು ಹಾಗು ದನ ಕಾಯುವವರ ಎರಡು ವರ್ಣಚಿತ್ರಗಳನ್ನು ಕಾಣಬಹುದಾಗಿದೆ.

10 ನೇ ಗುಹೆಯು ಹೆಚ್ಚು ಕಡಿಮೆ 9 ನೇ ಗುಹೆಯ ಶೈಲಿ ಮತ್ತು ವಾಸ್ತುಶಿಲ್ಪವನ್ನು ಹೋಲುತ್ತದೆ. ಇಲ್ಲಿ ನಿಮಗೆ ಬುದ್ಧ ಆನೆಯ ರೂಪದಲ್ಲಿ ಅವತರಿಸಿದ್ದ ಶಾದ-ದಾಂತ್ ಜಾತಕ ಕೂಡ ಇದೆ. ರಾಜ ಮತ್ತು ಅವನ ಸಹಚರರ ಹಾಗು ಶ್ಯಾಮ ಜಾತಕದ ಒಂದು ವರ್ಣನೆಯನ್ನು ಇಲ್ಲಿ ಕಾಣಬಹುದು. ರಾಜಕುಮಾರಿ ಮತ್ತು ದಂತ ಮತ್ತು ಒಂದು ಕಣ್ಣಿನ ಸನ್ಯಾಸಿಯ ಜೊತೆಗಿರುವ ಬುದ್ಧ ಇಲ್ಲಿರುವ ಇತರ ಎರಡು ವರ್ಣಚಿತ್ರಗಳು.

11 ನೇ ಗುಹೆಯು ಮುಖ್ಯವಾಗಿ ಹೀನಾಯಾನ ಅವಧಿಯಿಂದ ಮಹಾಯಾನ ಅವಧಿಗೆ ಆದ ಬದಲಾವಣೆಯನ್ನು ಸೂಚಿಸುತ್ತದೆ. ಇದು ಬೌದ್ಧ ಸ್ತೂಪಗಳನ್ನು ಒಳಗೊಂಡಿದೆ.

16 ನೇ ಗುಹೆಯ ಹೆಬ್ಬಾಗಿಲಿನ ದ್ವಾರಮಂಟಪ ಇತರೆ ಹೆಬ್ಬಾಗಿಲುಗಳಿಗೆ ಅಡಿಪಾಯವನ್ನು ನೀಡುತ್ತವೆ. ಈ ಗುಹೆಯು ಕೆಳಗೆ ಹರಿವ ನದಿಯ ಬೆರಗಾಗಿಸುವ ಸುಂದರ ನೋಟವನ್ನು ನೀಡುತ್ತದೆ. ಭಿಕ್ಷಾ ಪಾತ್ರೆಯನ್ನು ಹಿಡಿದಿರುವ ಬುದ್ಧನ ಬೃಹತ್ ಪ್ರತಿಮೆ, ಬಿಲ್ಲನ್ನು ಎಳೆದು ನಿಂತಿರುವ ಬುದ್ಧ ದೇವರು ಮತ್ತು ರಾಜ ಸಿದ್ದಾರ್ಥನ ಸಂತತಿಯನ್ನು ಹೊಂದಿದೆ. ತನ್ನ ಪತಿ ಸನ್ಯಾಸಿಯಾಗುತ್ತಾನೆ ಎಂದು ತಿಳಿದು ಆಘಾತಗೊಂಡ ರಾಣಿಯನ್ನು ಬಿಂಬಿಸುವ ‘ಡಯಿಂಗ್ ಪ್ರಿನ್ಸೆಸ್’ ಎಂಬ ವಿಶ್ವದ ಪ್ರಸಿದ್ಧ ಕಲೆ ಈ ಗುಹೆಯಲ್ಲಿದೆ. ಸುತಸಮ ಜಾತಕ ಸಹ ವೀಕ್ಷಿಸಬಹುದಾದ ಮತ್ತೊಂದು ಶಿಲ್ಪ.

17 ನೇ ಗುಹೆಯು  ಅಪ್ಸರೆಯರು ಮತ್ತು ಹಾರುವ ಆತ್ಮಗಳು ಮತ್ತು ಇಂದ್ರ ಮತ್ತು ಅಪ್ಸರೆಯರು ಹಾಗೆ, ಪ್ರೀತಿಯ ಸಾಂಕೇತಿಕವಾಗಿರುವ ವರ್ಣಚಿತ್ರಗಳನ್ನು ತೋರಿಸುತ್ತದೆ. ಅಪ್ಸರೆಯರು ಎಂದರೆ ದೇವಕನ್ಯೆಯರು ಎಂದರ್ಥ. ರಾಜ ಸಿದ್ಧಾರ್ಥ ಬಿಕ್ಷುಕನಾಗಿ ಮರಳಿ ಬಂದು ತನ್ನ ಪತ್ನಿ ಮತ್ತು ಮಕ್ಕಳನ್ನು ಸಂಧಿಸುವ ರೀತಿಯನ್ನು ಬುದ್ಧನ ಹಿಂತಿರುಗುವಿಕೆ ತೋರಿಸುತ್ತದೆ.

21 ನೇ ಗುಹೆಯು ಇತರೆ ಗುಹೆಗಳಿಗಿಂತ ಹೆಚ್ಚು ಸೂಕ್ಷ್ಮವಾಗಿ ಗೋಚರಿಸುತ್ತದೆ. ಈ ಪ್ರದೇಶವನ್ನು ವಿವೇಕದಿಂದ ಬಳಸಿ ಉತ್ತಮವಾದ ಕಂಬಗಳನ್ನು ಕಟ್ಟಲಾಗಿದೆ. ಒಂದು ಕಾಲದಲ್ಲಿ ಗೋಡೆಯ ಮೇಲೆ ನೇತು ಹಾಕಲಾಗಿದ್ದ ವರ್ಣಚಿತ್ರಗಳನ್ನು ಈಗ ಪ್ಲ್ಯಾಸ್ಟರ್ ಗಳ ಮೂಲಕ ಬದಲಾಯಿಸಲಾಗಿದೆ. ಇದು, ಮುಕ್ತ ನ್ಯಾಲಯವಾದ ಚೈತ್ಯ ಸಭಾಂಗಣವನ್ನು, ವರಾಂಡಾದ ಹತ್ತಿರದಲ್ಲಿ  ಹೊಂದಿದೆ. 26 ಕಂಬಗಳ ಆಧಾರವನ್ನು ಹೊಂದಿರುವ ಕಮಾನುಗಳ ಒಂದು ಸರಣಿಯ ರಚನೆಯು ಇಲ್ಲಿ ಕಂಡುಬರುತ್ತದೆ. ಈ ಗೋಡೆಯು ಶಿಲ್ಪಕಲೆಗಳನ್ನೂ ಒಳಗೊಂಡಿದೆ. ಸತ್ತ ಸ್ಥಿತಿಯಲ್ಲಿರುವ ಬುದ್ಧನ ಪ್ರತಿಮೆಯನ್ನು ವರಾಂಡದ ಹತ್ತಿರವಿರುವ ಗೋಡೆಯು ಹೊಂದಿದೆ. ನಿದ್ರಾ ರೂಪದಲ್ಲಿರುವ ಬುದ್ಧನ ಶಿಲ್ಪವನ್ನು ನೋಡಿ ಬೌದ್ಧರು, ಬುದ್ಧ ಇಲ್ಲಿ ಅವರ ಪರಿನಿರ್ವಾಣದಲ್ಲಿದ್ದಾರೆ ಎಂದು ನಂಬಿದ್ದಾರೆ. ಬುದ್ಧನ ಪರಿನಿರ್ವಾಣ ಸ್ಥಿತಿಯಲ್ಲಿರುವ ಪ್ರತಿಮೆಯನ್ನು ಹೊಂದಿರುವ ಗೋಡೆಯು, ಬುದ್ಧನ ಪ್ರೇರಣೆ ಎಂಬ ಶಿಲ್ಪಕ್ಕೂ ಸಹ ಮನೆಯಾಗಿದೆ.

ಕಂಬದ ಶೈಲಿ, ಗೋಡೆಯೊಂದಿಗೆ ಕೂಡಿಸಿರುವ ಚೌಕಸ್ಥಂಭ ಮತ್ತು ದ್ವಾರಮಂಟಪವಿರುವ ಹೆಬ್ಬಾಗಿಲುಗಳು 24 ನೇ ಗುಹೆಯಲ್ಲಿರುವ 3 ಅಂಗಗಳಾಗಿವೆ. ಈ ಗುಹೆಯಲ್ಲಿ ಕಂಡುಬರುವ ಅಪೂರ್ಣವಾದ ಕಂಬಗಳ ಶೈಲಿಗಳು, ಅದರ ಮೂಲದಿಂದಾಗಿ ಗಮನಾರ್ಹವಾಗಿವೆ. ಒರಟು ಮತ್ತು ಅಸಮವಾದ ಆಧಾರ ಸ್ತಂಭಗಳಿಂದ ಆರಂಭಗೊಂಡ ಇದು, ಮಹಾಯಾನ ಅವಧಿಯಲ್ಲಿ, ಅಷ್ಟಭುಜಾಕೃತಿಯ ಆಕಾರವನ್ನು ಪಡೆಯಿತು. ದ್ವಾರಮಂಟಪದ ಕೊನೆಯಲ್ಲಿ ಒಂದು ಸವಿವರವಾದ ಚೌಕಸ್ತಂಭವಿದೆ. ಆದಾಗ್ಯೂ 24 ನೇ ಗುಹೆಯು ಅಪೂರ್ಣವಾಗಿಯೆ ಉಳಿಯಿತು. 7 ನೇ ಶತಮಾನ ಮತ್ತು ಅದರ ಸುತ್ತಲಿನಲ್ಲಿ, ಮೇಲಿನ ಬಲಗಡೆಯ ಮೂಲೆಯಲ್ಲಿ ದ್ವಾರಮಂಟಪವಿದ್ದು, ಇದು ಟಿ ಆಕಾರದಲ್ಲಿ ಇದೆ.

26 ನೇ ಗುಹೆಯಲ್ಲಿ   ಶ್ರವಸ್ತಿ ಪರಮಾಶ್ಚರ್ಯ, ಕುಟುಂಬದ ಗುಂಪು, ಮತ್ತು ಗುಂಗುರು ಕೂದಲಿರುವ ಬುದ್ಧನ ತಲೆಯನ್ನು ಕಾಣಬಹುದು. ಗುಹೆಯ ಸುತ್ತವಿರುವ ಮಾರ್ಗಗಳಲ್ಲಿ ಬುದ್ಧ ತನ್ನ ಕಾಲದಲ್ಲಿ ನಿರ್ವಹಿಸಿದ ಪವಾಡಗಳನ್ನು ಕೆತ್ತನೆಗಳಲ್ಲಿ ತೋರಿಸಲಾಗಿದೆ. ಶ್ರವಸ್ತಿಯು ಬುದ್ಧನ ಎಲ್ಲ ರೂಪಗಳಿಗೆ ಸಾಕ್ಷಿಯಾಗಿರುವ ಒಂದು ಅದೃಷ್ಟದ ಹಳ್ಳಿ ಎಂದು ನಂಬಲಾಗಿದೆ. ಈ ಸಮೂಹವನ್ನು ಆ ಸಮಯದಲ್ಲಿನ ಒಂದು ಮಾದರಿ ಕುಟುಂಬವೆಂದು ಬಿಂಬಿಸಲಾಗಿದೆ. ಇದು ಪುಷ್ಪಭರಿತ ಅಲಂಕಾರವನ್ನು ಹೊಂದಿದೆ. ಗುಂಗುರು ಕೂದಲು ಮತ್ತು ದೊಡ್ಡ ಕಿವಿಗಳನ್ನು ಹೊಂದಿರುವ ಬುದ್ಧನ ತಲೆಯನ್ನು, ಗುಂಗುರು ಕೂದಲಿನ ಬುದ್ಧನ ತಲೆಯೆಂದು ವರ್ಣಿಸಲಾಗಿದೆ. ಬುದ್ಧನು ಕುಳಿತ ಕಮಲವನ್ನು ಕಾಸ್ಮಿಕ್ ಬ್ರಹ್ಮಾಂಡದ ಕೇಂದ್ರವೆಂದು ನಂಬಲಾಗಿದೆ. ನಾಗಾರು, ನಂದಾ ಮತ್ತು ಅನುಂಪಾನಂದ ಕಮಲದ ಕಾಂಡವನ್ನು ಹಿಡಿದಿದ್ದಾರೆ. ಚೈತ್ಯ ಸಭಾಂಗಣದಲ್ಲಿರುವ ಕುದುರೆಯ ಪಾದರಕ್ಷೆಯನ್ನು ಹೋಲುವ ಕಮಾನು ಅದ್ಭುತ ಚಿತ್ರಗಳ ಶಿಲ್ಪಕಲೆಯನ್ನು ಪ್ರದರ್ಶಿಸುತ್ತದೆ ಮತ್ತು 5 ನೇ ಶತಮಾನದ ಹಿಂದಕ್ಕೆ ಕರೆದೊಯ್ಯುತ್ತದೆ.

ನಾಗಾ, ದ್ವಾರಪಾಲ ಮತ್ತು ದ್ವಾರಮಂಟಪ 27 ನೇ ಗುಹೆಯ ಎರಡು ಭಾಗಗಳಾಗಿವೆ. ನಾಗಾ ದ್ವಾರಪಾಲ ಬೌದ್ಧ ದೇವಾಲಯದ ಹೊರಾಂಗಣದಲ್ಲಿದೆ. ಈ ಗುಹೆಯು 20 ನೇ ಗುಹೆಯಿಂದ ಸ್ಪೂರ್ತಿ ಪಡೆದಿದೆ. 20 ನೇ ಗುಹೆಯಲ್ಲಿ ಕಂಡುಬಂದ ನಾಗಾ ಈ ಗುಹೆಯಲ್ಲಿನ ನಾಗಾನನ್ನು ಹೋಲುತ್ತದೆ ಆದರೂ ಅದು ಆಕರ್ಷಕವಾಗಿ ಕಾಣುವುದಿಲ್ಲ. ಏತನ್ಮದ್ಯೆ ದ್ವಾರಮಂಟಪವು 2 ನೇ ಗುಹೆಯಿಂದ ಸ್ಫೂರ್ತಿ ಪಡೆದಿದೆ.

ಅಜಂತಾ – ವರ್ಷದ ಎಲ್ಲ ಕಾಲದಲ್ಲೂ ಭೇಟಿನೀಡಬಹುದಾದ ಸ್ಥಳ

ಅಜಂತಾ ಗುಹೆಗಳಿಗೆ ಚಾಲ್ತಿಯಲ್ಲಿರುವ ಹವಾಮಾನ ಪರಿಸ್ಥಿತಿಗಳಿಂದಾಗಿ ಯಾವುದೇ ಪ್ರಭಾವವಿಲ್ಲ. ಈ ಸ್ಥಳಕ್ಕೆ ವರ್ಷದ ಎಲ್ಲಾ ಸಮಯದಲ್ಲೂ ಭೇಟಿ ನೀಡಬಹುದು. ಆದರು ಸ್ವಲ್ಪ ದೂರ ನಡೆಯ ಬೇಕಾಗಿರುವುದರಿಂದ, ಬಿಸಿಲಿನಿಂದಾಗಿ ತುಂಬಾ ಆಯಾಸವಾಗುವ ಕಾರಣ ಬೇಸಿಗೆಯಲ್ಲಿ ದೂರವಿರಲು ಸೂಚಿಸಲಾಗುತ್ತದೆ. ಮಳೆಗಾಲ ಈ ಅದ್ಭುತ ಸ್ಥಳಕ್ಕೆ ಭೇಟಿ ನೀಡಬಹುದಾದ ಸೂಕ್ತ ಸಮಯ. ಗುಹೆಗಳ ಕೆಳಗೆ ವೇಗವಾಗಿ ಹರಿಯುವ ನದಿ ಮತ್ತು ಅರಳಿದ ಹೂವುಗಳು ಹಾಗು ಹೇರಳವಾದ ಹಸಿರು, ಪರಿಪೂರ್ಣ ಸ್ಮರಣೀಯ ಅನುಭವವನ್ನು ಕೊಡುತ್ತದೆ.

ಅಜಂತಾ ಗುಹೆಗಳನ್ನು ವಾಯು, ರಸ್ತೆ ಮತ್ತು ರೈಲು ಮಾರ್ಗಗಳಲ್ಲಿ ಸುಲಭವಾಗಿ ತಲುಪಬಹುದು. ಔರಂಗಾಬಾದ್ ವಿಮಾನ ನಿಲ್ದಾಣ, 100 ಕಿ.ಮೀ ದೂರದಲ್ಲಿದ್ದು, ಅಜಂತಾ ಗುಹೆಗಳಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಅಜಂತಾ ಗುಹೆಗಳಿಗೆ ಹತ್ತಿರವಿರುವ ಎರಡು ನಗರಗಳಾದ ಔರಂಗಾಬಾದ್ ಮತ್ತು ಜಲಗಾಂವ್ ಗಳಿಗೆ, ಭಾರತದ ವಿವಿಧ ನಗರಗಳಿಂದ ರೈಲುಗಳ ಸೌಲಭ್ಯವಿದೆ. ರಸ್ತೆ ಮಾರ್ಗದಲ್ಲಿ ಪ್ರಯಾಣ ಬಯಸುವವರಿಗೆ ರಾಜ್ಯ ಸರ್ಕಾರ ಸಾರಿಗೆ ಅಥವಾ ಪ್ರವಾಸಗಳನ್ನು ನೀಡುವ ಅನೇಕ ಖಾಸಗಿ ಬಸ್ ಗಳ ಸೇವೆಯ ಸೌಲಭ್ಯವಿದೆ. ಔರಂಗಾಬಾದ್ ನಿಂದ ಅಜಂತಾ ಗುಹೆಗಳನ್ನು ತಲುಪಲು ಎರಡರಿಂದ ಮೂರು ತಾಸಿನ ದಾರಿಯಿದೆ.

ಈ ಗುಹೆಗಳ ಬಗ್ಗೆ ಓದಿ ತಿಳಿದುಕೊಳ್ಳುವುದಕ್ಕಿಂತ ವೈಯಕ್ತಿಕವಾಗಿ ಭೇಟಿ ನೀಡುವುದು ಉತ್ತಮ. ವಿಶಾಲತೆ ಮತ್ತು ಭವ್ಯತೆಯನ್ನು ಹೊಂದಿರುವ ಈ ಪಾರಂಪರಿಕ ತಾಣಗಳು, ಸಾಯುವ ಮೊದಲು ಭೇಟಿ ನೀಡಲೇಬೇಕಾದ ವಿಶ್ವದ ಕೆಲವು ತಾಣಗಳಲ್ಲಿ ಒಂದಾಗಿದೆ. ಯಾವುದೇ ಕಾರಣಕ್ಕಾಗಿ ಈ ಅದ್ಭುತವನ್ನು ವೀಕ್ಷಿಸುವ ಅವಕಾಶವನ್ನು ಕೈಚೆಲ್ಲಬೇಡಿ. ಮೋಡಿಗೊಳಿಸುವ ಈ ಗುಹೆಗಳು ನಿಮ್ಮನ್ನು ನಿಬ್ಬೆರಗಾಗಿಸುತ್ತವೆ.

ಅಜಂತಾ ಪ್ರಸಿದ್ಧವಾಗಿದೆ

ಅಜಂತಾ ಹವಾಮಾನ

ಉತ್ತಮ ಸಮಯ ಅಜಂತಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಅಜಂತಾ

 • ರಸ್ತೆಯ ಮೂಲಕ
  ಮುಂಬೈ, ಪುಣೆ, ಶಿರಡಿ, ನಾಸಿಕ್ ಮತ್ತು ಹಲವಾರು ಪ್ರಮುಖ ನಗರಗಳಿಂದ ಅಜಂತಾ ಗುಹೆಗಳನ್ನು ಸಂಪರ್ಕಿಸುವ ಅತ್ಯುತ್ತಮ ರಸ್ತೆ ಮಾರ್ಗಗಳಿವೆ. ಇಲ್ಲಿ ಅನೇಕ ಬಸ್ಸುಗಳ ಸೌಲಭ್ಯವಿದೆ ಯಾವುದನ್ನಾದರು ಆರಿಸಿಕೊಳ್ಳಬಹುದು. ಅಜಂತಾದಿಂದ ಔರಂಗಾಬಾದ್ ಗೆ 2 ರಿಂದ 3 ತಾಸಿನ ಪ್ರಯಾಣ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ರೈಲು ಮಾರ್ಗದಲ್ಲಿ ಸಂಚರಿಸಲು ಬಯಸುವವರು ಔರಂಗಾಬಾದ್ ನಿಲ್ದಾಣದಲ್ಲಿ ಇಳಿದುಕೊಳ್ಳಬೇಕು. ಮುಂಬೈ ನಿಂದ ಔರಂಗಾಬಾದ್ ಗೆ ತಲುಪಲು ತಪೋವನ್ ಎಕ್ಸ್ ಪ್ರೆಸ್ಸ್ ಮತ್ತು ದೇವಗಿರಿ ಎಕ್ಸ್ ಪ್ರೆಸ್ಸ್ ಎಂಬ ಎರಡು ರೈಲುಗಳು ಇವೆ. ರೈಲು ಮಾರ್ಗದಲ್ಲಿ ಜಲಗಾಂವ್ ಮತ್ತೊಂದು ಆಯ್ಕೆಯಾಗಿದೆ; ಇದು ಭಾರತದ ಎಲ್ಲ ಪ್ರಮುಖ ನಗರಗಳಿಗೆ ಒಂದು ಕೇಂದ್ರ ಬಿಂದುವಾಗಿದೆ. ಇದು ಅಜಂತಾದಿಂದ 60 ಕಿಮೀ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಔರಂಗಾಬಾದ್ ವಿಮಾನ ನಿಲ್ದಾಣ 100 ಕಿಮೀ ದೂರವಿದ್ದು, ಅಜಂತಾಗೆ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಇದು ಪ್ರಮುಖ ವಿಮಾನ ನಿಲ್ದಾಣಗಳಾದ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದೆಹಲಿ ವಿಮಾನ ನಿಲ್ದಾಣಗಳಿಗೆ ದೈನಂದಿನ ವಿಮಾನಗಳ ಮೂಲಕ ಸಂಪರ್ಕ ಹೊಂದಿದೆ. ಜಲಗಾಂವ್ ಅಜಂತಾಗೆ ಹತ್ತಿರವಿರುವ ಮತ್ತೊಂದು ಸ್ಥಳವಾಗಿದ್ದು ಮತ್ತು ಅದರ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಕ್ರಿಯೆಯಲ್ಲಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Nov,Mon
Return On
30 Nov,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
29 Nov,Mon
Check Out
30 Nov,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
29 Nov,Mon
Return On
30 Nov,Tue