Search
 • Follow NativePlanet
Share
ಮುಖಪುಟ » ಸ್ಥಳಗಳು» ಖಾಂಡ್ವಾ

ಖಾಂಡ್ವಾ : ದೇಗುಲ ಮತ್ತು ಪುಷ್ಕರಣಿಗಳ ನಾಡು

14

ಮಧ್ಯಪ್ರದೇಶದ ಪೂರ್ವ ನಿಮಾರ್ ಜಿಲ್ಲೆಯಲ್ಲಿರುವ ಒಂದು ಸುಂದರ ಪಟ್ಟಣ ಖಾಂಡ್ವಾ. ಬಹಳಷ್ಟು ದೇಗುಲಗಳು, ಗೋಪುರಗಳು, ಕುಂಡ(ಪುಷ್ಕರಣಿ)ಗಳು ಇರುವ ಈ ಸ್ಥಳವನ್ನು ಪ್ರಾಚೀನಕಾಲದ ಪಟ್ಟಣ ಎಂದು ಪರಿಗಣಿಸಲಾಗಿದೆ. ಇಲ್ಲಿ ಬಹಳಷ್ಟು ಹಿಂದೂ ಮತ್ತು ಜೈನ ದೇಗುಲಗಳಿವೆ. ಹನ್ನೆರಡನೇ ಶತಮಾನದಲ್ಲಿ ಜೈನ ಧರ್ಮ ಉಚ್ಛ್ರಾಯ ಸ್ಥಿತಿಗೆ ತಲುಪಿದಾಗ ಖಾಂಡ್ವಾ ಜೈನ ಧರ್ಮೀಯರ ಕೇಂದ್ರವಾಗಿ ಮಾರ್ಪಾಟಾಗಿತ್ತು. ಕಾಲ ಬದಲಾದ ಹಾಗೆ ಖಾಂಡ್ವಾ ಸಹ ಬದಲಾಗುತ್ತ ಬಂದಿದೆ. ಬ್ರಿಟಿಷರ ಕಾಲದಲ್ಲಿ ನಿಮಾದ್ ಭಾಗದಲ್ಲಿ ಖಾಂಡ್ವಾ ವಾಣಿಜ್ಯ ನಗರಿಯಾಗಿ ಹೆಸರು ಪಡೆದಿತ್ತು. ಹಿಂದಿ ಚಿತ್ರರಂಗದ ಸುಪ್ರಸಿದ್ಧ ಹಿನ್ನೆಲೆ ಗಾಯಕ ಕಿಶೋರ್ ಕುಮಾರ್ ಅವರು ಹುಟ್ಟಿದ್ದು ಖಾಂಡ್ವಾದಲ್ಲಿಯೆ.

ಖಾಂಡ್ವಾ ಹಾಗು ಸುತ್ತಲಿನ ಪ್ರವಾಸಿ ತಾಣಗಳು

ಖಾಂಡ್ವಾ ಪ್ರವಾಸೋದ್ಯಮ ಪ್ರವಾಸಿಗರಿಗೆ ಬಹಳಷ್ಟು ಆಕರ್ಷಣೆಗಳನ್ನು ನೀಡಿದೆ. ನಗರದ ಹೃದಯಭಾಗದಲ್ಲಿರುವ ಘಂಟಾಘರ್ ಕಾಲದ ಹೊಡೆತಕ್ಕೆ ಸಿಲುಕಿ ನಿಂತ ನಗರಕ್ಕೆ ಕುರುಹಾಗಿ ನಿಂತಿದೆ. ಪುಷ್ಕರಣಿಗಳ ನಗರವಾಗಿರುವ ಖಾಂಡ್ವಾದ ಘಂಟಾಘರ್ ದಲ್ಲಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಕುಂಡಗಳಿವೆ. ಖಾಂಡ್ವಾದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿರುವ ಜಿಲ್ಲಾ ಕಲೆಕ್ಟರ್ ಕಟ್ಟಡದಲ್ಲಿ ಆಂಗ್ಲರ ಶೈಲಿಯ ವಿನ್ಯಾಸವನ್ನು ಕಾಣಬಹುದು. ಪ್ರವಾಸಿಗರು ಇಲ್ಲಿಗೊಮ್ಮೆ ಭೇಟಿ ನೀಡಲೇಬೇಕು. ಏಕೆಂದರೆ, ಇಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಕಲಾತ್ಮಕತೆಯ ಮಿಲನವಿದೆ.

ಖಾಂಡ್ವಾದಲ್ಲಿ ಪ್ರಾಚೀನ ಮಂದಿರಗಳು ಮತ್ತು ಮಸೀದಿಗಳಿವೆ. ಭವಾನಿ ಮಾತೆಯ ಮಂದಿರ ಹಿಂದೂಗಳಿಗೆ ಅತಿ ಮುಖ್ಯವಾದ ಪೂಜಾಸ್ಥಳ. ಮತ್ತೊಂದು ಗುಡಿ ಎಂದರೆ, ದಾದಾ ದರ್ಬಾರ್. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ನವ ಚಂಡಿ ದೇವಿ ಧಾಮಕ್ಕೆ ಪ್ರತಿವರ್ಷ ಭೇಟಿ ನೀಡುತ್ತಾರೆ.

ಓಂಕಾರೇಶ್ವರ ಮಂಢತ ಖಾಂಡ್ವಾದಿಂದ 75 ಕಿ.ಮೀ. ದೂರದಲ್ಲಿದ್ದು, ಹಿಂದೂ ಮತ್ತು ಜೈನರ ತೀರ್ಥಯಾತ್ರಾ ಸ್ಥಳವಾಗಿದೆ. ಸಿದ್ಧಾವರ ಕೂಟ ಜೈನರಿಗಾಗಿ ಮತ್ತು ಮಾಮಲೇಶ್ವರ ಹಿಂದೂಗಳಿಗೆ ಮುಖ್ಯ ಧಾರ್ಮಿಕ ಸ್ಥಳ ಎನಿಸಿಕೊಂಡಿದೆ.

ಐ ಆಫ್ ಡೆಕ್ಕನ್ ಅಂತ ಹೆಸರು ಪಡೆದಿರುವ ಅಸಿರ್ ಘರ್ ಕೋಟೆ ಖಾಂಡ್ವಾದ ಮತ್ತೊಂದು ಪ್ರಮುಖ ಆಕರ್ಷಣೆಗಳಲ್ಲೊಂದು. ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಈ ಕೋಟೆಯನ್ನು ನೋಡಲು ಆಗಮಿಸುತ್ತಾರೆ. ಇದು ಖಾಂಡ್ವಾ ಪ್ರವಾಸೋದ್ಯಮದ ಪ್ರಮುಖ ಅಂಗವೂ ಆಗಿದೆ. ಅಮರ ಗಾಯಕ ಕಿಶೋರ್ ಕುಮಾರ್ ಅವರ ಸ್ಮರಣಾರ್ಥ ನಿರ್ಮಿಸಲಾಗಿರುವ ಗೌರಿ ಕುಂಜಕ್ಕೂ ಪ್ರವಾಸಿಗರು ಭೇಟಿ ನೀಡುತ್ತಾರೆ.

ಇಲ್ಲಿ ಬಹಳಷ್ಟು ಅಣೆಕಟ್ಟುಗಳು ಕೂಡ ಇವೆ. ಅವುಗಳಲ್ಲಿ ಮುಖ್ಯವಾದದ್ದು ಇಂದಿರಾ ಸಾಗರ ಅಣೆಕಟ್ಟು ಹಾಗು ನಾಗಚುನ್ ಅಣೆಕಟ್ಟು. ಇವೆರಡು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ.

ಖಾಂಡ್ವಾಕ್ಕೆ ಪ್ರವಾಸ

ರಸ್ತೆ, ರೈಲು ಮತ್ತು ವಿಮಾನಗಳ ಮೂಲಕ ಖಾಂಡ್ವಾವನ್ನು ತಲುಪಬಹುದು. ಇಲ್ಲಿ ರೈಲು ನಿಲ್ದಾಣವೂ ಇದೆ. ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಇಲ್ಲಿ ಹವಾಮಾನ ಅತ್ಯಂತ ಹಿತಕರವಾಗಿರುತ್ತದೆ ಮತ್ತು ಪ್ರವಾಸ ಕೈಗೊಳ್ಳಲು ಸೂಕ್ತ ಸಮಯ. ಮತ್ತು ಈ ಸಮಯದಲ್ಲಿ ಹೆಚ್ಚು ಹಬ್ಬಗಳು ಕೂಡ ಇಲ್ಲಿ ಆಚರಿಸಲಾಗುತ್ತದೆ.

ಖಾಂಡ್ವಾ ಪ್ರಸಿದ್ಧವಾಗಿದೆ

ಖಾಂಡ್ವಾ ಹವಾಮಾನ

ಖಾಂಡ್ವಾ
33oC / 91oF
 • Partly cloudy
 • Wind: WNW 23 km/h

ಉತ್ತಮ ಸಮಯ ಖಾಂಡ್ವಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಖಾಂಡ್ವಾ

 • ರಸ್ತೆಯ ಮೂಲಕ
  ಸಾರ್ವಜನಿಕ ಸಾರಿಗೆಗಳಾದ ಬಸ್ ಮತ್ತು ಟ್ಯಾಕ್ಸಿಗಳ ಮುಖಾಂತರ ಖಾಂಡ್ವಾ ಪಟ್ಟಣವನ್ನು ತಲುಪಬಹುದು. ಸಾಕಷ್ಟು ಬಸ್ ಗಳು ಮಧ್ಯಪ್ರದೇಶದ ಮುಖ್ಯ ನಗರಗಳಿಂದ ಖಾಂಡ್ವಾಗೆ ಸಂಚರಿಸುತ್ತವೆ. ಇಂದೋರಿನಿಂದ ಖಾಂಡ್ವಾಗೆ ರಸ್ತೆ ಸಾರಿಗೆ ಮೂಲಕ ಪ್ರಯಾಣಿಸಿದರೆ ಉತ್ತಮ. ಇಂದೋರಿನಿಂದ 3 ಗಂಟೆಯಲ್ಲಿ ಖಾಂಡ್ವಾ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಖಾಂಡ್ವಾಗೆ ರೈಲು ಸಂಪರ್ಕ ಅನುಕೂಲಕರವಾಗಿದೆ. ಮಧ್ಯಪ್ರದೇಶದ ಭೋಪಾಲ್, ಇಂದೋರ್ ಸೇರಿದಂತೆ ಎಲ್ಲ ಪ್ರಮುಖ ಸ್ಥಳಗಳಿಗೆ ಇಲ್ಲಿಂದ ರೈಲು ಸಂಪರ್ಕವಿದೆ. ದೇಶದ ಮಹಾನಗರಗಳಾದ ಮುಂಬೈ, ಕೋಲ್ಕತಾ, ಕೊಚಿನ್, ಬೆಂಗಳೂರು, ಹೈದರಾಬಾದ್, ಜಮ್ಮು, ಪಟ್ನಾ ಮತ್ತಿತರ ನಗರಗಳಿಗೆ ಕೂಡ ಇಲ್ಲಿಂದ ಹೆಚ್ಚು ರೈಲು ಸಂಚರಿಸುತ್ತವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ನಾಗಚುನ್ ರಸ್ತೆಯಲ್ಲಿ ವಿಮಾನ ಇಳಿಯುವ ಪಥ ನಿರ್ಮಿಸಲಾಗಿದ್ದರೂ ಆಗಾಗ ಮಾತ್ರ ವಿಮಾನಗಳು ಇಲ್ಲಿ ಇಳಿಯುತ್ತವೆ. ಅಲ್ಲದೆ, ಇದನ್ನು ಬಳಸುವುದು ಕೂಡ ತೀರ ಅಪರೂಪ. ಇಲ್ಲಿ ವಿಮಾನಗಳು ಬರುವುದೂ ಇಲ್ಲ. ಖಾಂಡ್ವಾಗೆ ಸಮೀಪದ ವಾಣಿಜ್ಯ ವಿಮಾನ ನಿಲ್ದಾಣ ಇಂದೋರಿನ ದೇವಿ ಅಹಿಲ್ಯಬಾಯಿ ಹೋಲ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇಂದೋರಿನಿಂದ ಖಾಂಡ್ವಾಗೆ ತಲುಪಲು ಇರುವ ಅಂತರ 110 ಕಿ.ಮೀ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 May,Thu
Return On
24 May,Fri
 • Today
  Khandwa
  33 OC
  91 OF
  UV Index: 9
  Partly cloudy
 • Tomorrow
  Khandwa
  32 OC
  89 OF
  UV Index: 9
  Partly cloudy
 • Day After
  Khandwa
  31 OC
  88 OF
  UV Index: 9
  Partly cloudy