Search
 • Follow NativePlanet
Share
ಮುಖಪುಟ » ಸ್ಥಳಗಳು» ಇಂದೋರ್

ಇಂದೋರ್: ಮಧ್ಯ ಪ್ರದೇಶದ ಹೃದಯ ಭಾಗ

28

ಪ್ರವಾಸಿಗರ ಮೈ ಮನಗಳನ್ನು ತಣಿಸುವ ಇಂದೋರ್ ಮಧ್ಯಪ್ರದೇಶದ ಮಾಳ್ವ ಭೂಪ್ರದೇಶದಲ್ಲಿ ನೆಲೆಗೊಂಡಿದೆ. ಈ ಪ್ರಾಂತ್ಯದಲ್ಲಿ ನೈಸರ್ಗಿಕ ಮತ್ತು ಮಾನವ ನಿರ್ಮಿತವಾದ ಆಕರ್ಷಣೆಗಳೆಲ್ಲವು ಸೇರಿ ಪ್ರವಾಸಿಗರನ್ನು ಸಂತೋಷಪಡಿಸುತ್ತವೆ. ಇದು ಆಯಕಟ್ಟಿನ ಸ್ಥಳದಲ್ಲಿ ನೆಲೆಗೊಂಡಿದ್ದು, ಮಧ್ಯಪ್ರದೇಶದ ಹೃದಯ ಭಾಗವೆಂಬ ಖ್ಯಾತಿಗೆ ಭಾಜನವಾಗಿದೆ. ಇಂದೋರಿನಲ್ಲಿ ಜುಳು ಜುಳು ಎಂದು ಹರಿಯುವ ನದಿಗಳು ಮತ್ತು ನಯನ ಮನೋಹರವಾದ ಬೆಟ್ಟ- ಗುಡ್ಡಗಳು ನೋಡುಗರ ಕಣ್ಮನ ತಣಿಸುತ್ತವೆ.

ಇಲ್ಲಿನ ನಯನ ಮನೋಹರವಾದ ಭೂಪ್ರದೇಶದಲ್ಲಿ, ಅಲ್ಲಲ್ಲಿ ಗತಕಾಲದ ಇತಿಹಾಸವನ್ನು ಸಾರಿ ಹೇಳುವಂತಹ ವಾಸ್ತುಶಿಲ್ಪಗಳು ಇಲ್ಲಿನ ಪರಿಸರಕ್ಕೆ ತಮ್ಮದೇ ಆದ ಕಳೆಯನ್ನು ನೀಡಿವೆ. ಈ ನಗರದಲ್ಲಿ ಖಾನ್ ಮತ್ತು ಸರಸ್ವತಿ ನದಿಗಳು ಕೂಡುವ ಸಂಗಮವಿದೆ. ಪ್ರಾಚೀನ ಮತ್ತು ಆಧುನಿಕತೆಯನ್ನು ಸರಿ ಸಮವಾಗಿ ಹೊಂದಿರುವ ಇಲ್ಲಿನ ಪ್ರಾಕೃತಿಕ ಅದ್ಭುತಗಳು ನೋಡುಗರ ಮನಸ್ಸನ್ನು ಸೂರೆಗೊಳ್ಳುವಂತಹ ಸೌಂದರ್ಯವನ್ನು ಹೊಂದಿವೆ. ಈ ಸಮ್ಮಿಶ್ರತೆಯು ಇಲ್ಲಿನ ರಾಚನಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಇಂದೋರ್, ಪ್ರವಾಸಿಗರ ವಲಯದಲ್ಲಿ ಜನಪ್ರಿಯಗೊಂಡಿದೆ.

ಇಂದೋರ್: ಗತಕಾಲದ ಇತಿಹಾಸದ ಉತ್ತುಂಗ ಶಿಖರ

ಇಂದೋರ್ ಮಧ್ಯಪ್ರದೇಶದ ಅತ್ಯಂತ ದೊಡ್ಡ ನಗರ. ಈ ನಗರವು ತನ್ನ್ನದೇ ಆದ ಸಮೃದ್ಧ ಇತಿಹಾಸವನ್ನು ಹೊಂದಿರುವುದಷ್ಟೇ ಅಲ್ಲದೆ, ಅದನ್ನು ಇಂದಿಗೂ ಜತನದಿಂದ ಕಾಪಾಡಿಕೊಂಡು ಬಂದಿದೆ. ಈ ನಗರದಲ್ಲಿ 18ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಪ್ರಸಿದ್ಧ ಇಂದ್ರೇಶ್ವರ್ ದೇವಾಲಯವಿದೆ. ಇಂದೋರಿಗೆ ಈ ಹೆಸರು ಬರಲು ಈ ದೇವಾಲಯದಲ್ಲಿದ್ದು, ಇಂದು ಪಳೆಯುಳಿಕೆಯಾಗಿರುವ ಮುಖ್ಯದೇವರಾದ ಇಂದ್ರೇಶ್ವರ್ ಸ್ವಾಮಿಯೇ ಕಾರಣ ಎಂದು ಹೇಳುತ್ತಾರೆ. ಈ ನಗರವನ್ನು ರಾವ್ ನಂದ್‍ಲಾಲ್ ಚೌಧರಿ ನಿರ್ಮಿಸಿದನು. ಅಂದಿನಿಂದ ಇಂದಿನವರೆಗೂ ಈ ನಗರವು ಹಲವಾರು ರಾಜರನ್ನು, ರಾಜ ಮನೆತನ ಮತ್ತು ಆಡಳಿತಗಾರರನ್ನು ಕಂಡು ಇಂದಿಗೂ ಬೆಳೆಯುತ್ತಿದೆ. ಆದರೂ ಸಹ ಹೋಳ್ಕರ್ ಸಾಮ್ರಾಜ್ಯದ ರಾಜರು ಇಂದೋರಿಗೆ ಇತಿಹಾಸದ ಪುಟಗಳಲ್ಲಿ ಒಂದು ಮಹತ್ವದ ಸ್ಥಾನವನ್ನು ದೊರಕಿಸಿಕೊಡಲು ಕಾರಣಕರ್ತರಾಗಿದ್ದಾರೆ.

ಇಂದೋರ್ ಸುತ್ತ- ಮುತ್ತ ಇರುವ ಪ್ರವಾಸಿ ಆಕರ್ಷಣೆಗಳು ; ಮಂತ್ರ ಮುಗ್ಧಗೊಳಿಸುವ ತಾಣಗಳು

ಇಂದೋರ್ ಪ್ರವಾಸೋದ್ಯಮವು ಸುಂದರವಾದ ಅರಮನೆಗಳು, ಸ್ಮಾರಕಗಳು ಮತ್ತು ನಯನ ಮನೋಹರವಾದ ಧಾರ್ಮಿಕ ತಾಣಗಳಿಂದ ಕೂಡಿದೆ. ಈ ಎಲ್ಲಾ ಸ್ಥಳಗಳು ಸೇರಿ ಇಂದೋರನ್ನು ಭಾರತದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದನ್ನಾಗಿ ಮಾಡಿವೆ. ನೀವೇನಾದರೂ ಇಂದೋರಿಗೆ ಭೇಟಿ ನೀಡಿದ್ದಾದಲ್ಲಿ ಇಲ್ಲಿ ನೀವು ರಾಜ್‍ವಾಡ ಎಂಬ ಸುಂದರ ಅರಮನೆಯನ್ನು, ಕಾಂಚ್ ಮಂದಿರ್ ಎಂಬ ನಯನ ಮನೋಹರ ಗಾಜಿನ ದೇವಾಲಯವನ್ನು, ಬಿಜಸೆನ್ ಟೆಕ್ರಿ ಎಂಬ ಪಕ್ಷಿನೋಟವನ್ನೊದಗಿಸುವ ವೀಕ್ಷಣಾ ತಾಣವನ್ನು, ಲಾಲ್‍ಬಾಗ್ ಪ್ಯಾಲೆಸ್ ಎಂಬ ಹೋಳ್ಕರ್ ರಾಜರ ಜೀವನ ಶೈಲಿಯನ್ನು ನೆನಪಿಸುವ ಸ್ಮಾರಕವನ್ನು, ಪಾತಾಲ್‍ಪಾನಿ ಜಲಪಾತವೆಂಬ ಪ್ರಾಕೃತಿಕ ಅದ್ಭುತವನ್ನು, ಗೀತಾ ಭವನ್ ಎಂಬ ಧಾರ್ಮಿಕ ಕೇಂದ್ರವನ್ನು ಹಾಗು ಈ ನಗರದ ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಇಂದೋರ್ ವಸ್ತುಸಂಗ್ರಹಾಲಯವನ್ನು  ನೋಡಬಹುದು. ಇವುಗಳೆಲ್ಲದರ ಜೊತೆಗೆ ಪ್ರವಾಸಿಗರಿಗೆ ಮುದ ನೀಡುವ ಇನ್ನಿತರ ಆಕರ್ಷಣೆಗಳು ಇಲ್ಲಿವೆ.

ಇಂದೋರ್; ಪ್ರಾಚೀನ ಮತ್ತು ಆಧುನಿಕತೆಯ ಸುಮಧುರ ಸಮ್ಮಿಲನ

ಇಂದೋರ್ ನಗರಕ್ಕೆ ಸಮೀಪದಲ್ಲಿ ಅತ್ಯಂತ ಸುಂದರವಾದ ಸ್ಮಾರಕಗಳು ಮತ್ತು ತಾಣಗಳು ನೆಲೆಗೊಂಡಿವೆ. ಇಲ್ಲಿ ಆಧುನಿಕತೆಯ ಭರಾಟೆಯ ನಡುವೆಯು ಭವ್ಯತೆಯನ್ನು ಉಳಿಸಿಕೊಂಡಿರುವ, ಎರಡು ಶತಮಾನಗಳಷ್ಟು ಹಳೆಯದಾದ ರಾಜ್‍ವಾಡೆ ಅರಮನೆಯನ್ನು ನಾವು ಇಲ್ಲಿ ನೋಡಬಹುದು. ಈ ಅದ್ಭುತವಾದ ಸ್ಮಾರಕಗಳಲ್ಲಿ ಫ್ರೆಂಚ್, ಮೊಘಲ್ ಮತ್ತು ಮರಾಠ ವಾಸ್ತುಶಿಲ್ಪಗಳ ಸೊಬಗನ್ನು ಕಾಣಬಹುದು. ಈ ಸ್ಮಾರಕಗಳು ಕೇವಲ ಪ್ರಾಚೀನತೆಯ ಪಳೆಯುಳಿಕೆಗಳಷ್ಟೆ ಅಲ್ಲದೆ ಈ ನೆಲದ ಸಂಸ್ಕೃತಿಯ ಜೀವಂತಿಕೆಯನ್ನು ಉಳಿಸಿಕೊಂಡು ಪ್ರವಾಸಿಗರಿಗೆ ಅದನ್ನು ಸವಿಯುವ ಭಾಗ್ಯವನ್ನು ಒದಗಿಸುವ ತಾಣಗಳಾಗಿವೆ.

ಇಂದೋರ್; ಕಲಾ ನೈಪುಣ್ಯತೆಯ ಅದ್ಭುತ ನಾಡು

ಇಂದೋರ್ ಎಂಬುದು ಅತ್ಯಂತ ಸುಂದರವಾದ, ವರ್ಣಮಯವಾದ ಮತ್ತು ಕಲಾ ನೈಪುಣ್ಯತೆಯನ್ನು ಅಡಿಗಡಿಗು ಪ್ರದರ್ಶಿಸುವ ಕುಶಲಕಲೆಯ ಕೈಗಾರಿಕೆಯ ನಾಡು. ಈ ಕೈಗಾರಿಕೆಯು ಸಾಂಪ್ರದಾಯಿಕವಾದ ಕಲೆಗಳನ್ನು ಮತ್ತು ಕೌಶಲ್ಯಗಳನ್ನು ಪ್ರದರ್ಶಿಸುತ್ತಿದೆ. ಅಷ್ಟೇ ಅಲ್ಲದೆ ಈ ಕಲೆಯು ಈ ನಗರಕ್ಕೆ ಒಂದು ಮಾನ್ಯತೆಯನ್ನು ತಂದು ನೀಡಿದೆ. ಈ ಊರಿನಲ್ಲಿ ಹ್ಯಾಂಡ್ ಬ್ಲಾಕ್ ಪ್ರಿಂಟಿಂಗ್, ಟೈ ಮತ್ತು ಡೈ ಅಥವಾ ಬಂಧೇಜ್, ಬತಿಕ್, ಸೆಣಬಿನ ಕೈಗಾರಿಕೆ ಮತ್ತು ಝರಿ ಕುಸುರಿ ಮುಂತಾದ ಕಲೆಗಳು ಇಲ್ಲಿ ನೆಲೆಯನ್ನು ಕಂಡು ಕೊಂಡಿವೆ.

ಇಂದೋರಿಗೆ ಭೇಟಿ ನೀಡಿದಾಗ

ಇಂದೋರ್ ಒಂದು ಪ್ರಸಿದ್ಧ ಪ್ರವಾಸಿ ತಾಣ. ನೀವು ಇಲ್ಲಿಗೆ ಭೇಟಿ ನೀಡಿದಾಗ ನಿಮಗೆ ಅನುಕೂಲವಾಗುವಂತಹ ಅನೇಕ ಹೋಟೆಲ್‍ಗಳು ಮತ್ತು ಸೌಕರ್ಯಗಳು ಸುಲಭವಾಗಿ ದೊರೆಯುತ್ತವೆ. ಅಲ್ಲದೆ ಈ ನಗರವು ಉತ್ತಮ ಸಾರಿಗೆ ಸಂಪರ್ಕವೊಂದಿದೆ. ಈಗಾಗಿ ಈ ನಗರಕ್ಕೆ ಭೇಟಿ ನೀಡಿದರೆ ನಿಮಗೆ ಉತ್ತಮ ಆತಿಥ್ಯ ದೊರೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಇಂದೋರ್ ಪ್ರಸಿದ್ಧವಾಗಿದೆ

ಇಂದೋರ್ ಹವಾಮಾನ

ಇಂದೋರ್
28oC / 82oF
 • Haze
 • Wind: W 15 km/h

ಉತ್ತಮ ಸಮಯ ಇಂದೋರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಇಂದೋರ್

 • ರಸ್ತೆಯ ಮೂಲಕ
  ಇಂದೋರ್ ಮಧ್ಯ ಪ್ರದೇಶದ ಇತರ ನಗರಗಳು ಮತ್ತು ದೇಶದ ಇನ್ನಿತರ ನಗರಗಳ ಜೊತೆಗೆ ಉತ್ತಮವಾದ ರಸ್ತೆ ಸಂಪರ್ಕಜಾಲವನ್ನು ಹೊಂದಿದೆ. ಹಲವಾರು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಇಂದೋರಿನ ಮೂಲಕ ಹಾದು ಹೋಗುತ್ತವೆ. ರಾ,ಹೆ-3, ರಾ,ಹೆ-69, ರಾ.ಹೆ-86 ಇಲ್ಲಿ ಹಾದು ಹೋಗುತ್ತದೆ. ಈ ರಸ್ತೆಗಳು ಮತ್ತು ಬಸ್ ಸೌಕರ್ಯಗಳು ಇಂದೋರಿಗೆ ಬರಲು ಉಪಯೋಗವಾಗುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಇಂದೋರಿಗೆ ದೇಶದ ಎಲ್ಲಾ ಮೂಲೆಗಳಿಂದ ರೈಲು ಸಂಪರ್ಕ ಉತ್ತಮವಾಗಿದೆ. ರಾಜೇಂದ್ರ ನಗರ್, ಲೋಕಮಾನ್ಯ ನಗರ್, ಸೈಫೀ ನಗರ್ ಮತ್ತು ಲಕ್ಷ್ಮೀಬಾಯಿ ನಗರ್ ಎಂಬ ನಾಲ್ಕು ರೈಲು ನಿಲ್ದಾಣಗಳು ಇಲ್ಲಿವೆ. ಈ ನಿಲ್ದಾಣಗಳು ಎಲ್ಲಾ ಸಣ್ಣ ಮತ್ತು ದೊಡ್ಡ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಒದಗಿಸುತ್ತವೆ. ಇಂದೋರಿನಿಂದ ನಾಲ್ಕು ಮಹಾನಗರಗಳಿಗೆ ರೈಲು ಸಂಪರ್ಕವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಇಂದೋರಿನಲ್ಲಿ ದೇವಿ ಅಹಿಲ್ಯಾಬಾಯಿ ಹೋಲ್ಕರ್ ವಿಮಾನ ನಿಲ್ದಾಣವಿದೆ. ಈ ವಿಮಾನ ನಿಲ್ದಾಣದಿಂದ ದೇಶದ ಪ್ರಮುಖ ನಗರಗಳಿಗೆ ಉತ್ತಮ ವಿಮಾನಯಾನ ಸಂಪರ್ಕವಿದೆ. ಇಂದೋರಿನಿಂದ ದೇಶದ ಮಹಾನಗರಗಳಿಗೆ ನೇರ ವಿಮಾನ ಸಂಪರ್ಕವಿದೆ. ಇಲ್ಲಿ ಉತ್ತಮ ಸೌಕರ್ಯಗಳಿದ್ದು, ಪ್ರಯಾಣಿಕ ಸ್ನೇಹಿ ವಾತಾವರಣವಿದೆ.
  ಮಾರ್ಗಗಳ ಹುಡುಕಾಟ

ಇಂದೋರ್ ಲೇಖನಗಳು

One Way
Return
From (Departure City)
To (Destination City)
Depart On
25 Sep,Fri
Return On
26 Sep,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 Sep,Fri
Check Out
26 Sep,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 Sep,Fri
Return On
26 Sep,Sat
 • Today
  Indore
  28 OC
  82 OF
  UV Index: 8
  Haze
 • Tomorrow
  Indore
  29 OC
  84 OF
  UV Index: 8
  Partly cloudy
 • Day After
  Indore
  28 OC
  83 OF
  UV Index: 8
  Partly cloudy