Search
  • Follow NativePlanet
Share
ಮುಖಪುಟ » ಸ್ಥಳಗಳು» ಮಹೇಶ್ವರ

ಮಹೇಶ್ವರ - ಪರಂಪರೆ ಮತ್ತು ಕೈ ಮಗ್ಗಗಳ ಉತ್ಪನ್ನಗಳ ಮಿಶ್ರಣ

22

ಮಹೇಶ್ವರ ಇದೊಂದು ವಿಲಕ್ಷಣ ಮತ್ತು ಆಕರ್ಷಕ ನಗರವಾಗಿದ್ದು ಮಧ್ಯಪ್ರದೇಶ ರಾಜ್ಯದ ಖಾರ್ಗೋನ ಎಂಬ ಜಿಲ್ಲೆಯಲ್ಲಿ ನೆಲೆಸಿದೆ. ಈ ಸ್ಥಳವು ನಿಜವಾಗಿಯೂ ಸಮೃದ್ಧ ,ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅಷ್ಟೇ ಅಲ್ಲದೇ ತನ್ನ ಅತ್ಯುತ್ತಮ ಕೈಮಗ್ಗದ ಉತ್ಪನ್ನಗಳಿಗಾಗಿ ಜಗತಪ್ರಸಿದ್ಧಿಯನ್ನು ಪಡೆದಿದೆ. ಇದು ಮಹೇಶ್ವರದ ಪ್ರವಾಸೋದ್ಯಮವನ್ನು  ವೃದ್ಧಿಸಲು ಕಾರಣವಾಗಿದೆ. ಅಷ್ಟೇ ಅಲ್ಲ, ಈ ಸ್ಥಳವು ಮಧ್ಯಪ್ರದೇಶದ ಒಂದು ಪ್ರಮುಖ ಸಾಂಸ್ಕತಿಕ ನಗರವಾಗಿದೆ.

ಮಹೇಶ್ವರದ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ಮಹೇಶ್ವರದ ಪ್ರವಾಸೋದ್ಯಮ ಪ್ಯಾಕೆಜುಗಳು ಅನೇಕ ಪರಂಪರಾಗತ ಸ್ಥಳಗಳ ಆಕರ್ಷಣೆಯನ್ನು ಹೊಂದಿವೆ. ಮಹೇಶ್ವರ ನಗರದಲ್ಲಿ ಕೋಟೆಗಳು, ಘಾಟ್‍ಗಳು, ಅರಮನೆಗಳು, ದೇವಸ್ಥಾನಗಳು ಅಥವಾ ಇತರ ಸ್ಥಳಗಳು, ಹೀಗೆ ಅನೇಕ ಸ್ಥಳಗಳನ್ನು ನಾವು ಮಹೇಶ್ವರದಲ್ಲಿ ನೋಡುತ್ತೇವೆ. ಅಸಂಖ್ಯಾತ ಪ್ರವಾಸಿಗರು ಮಹೇಶ್ವರದ ಪ್ರವಾಸವನ್ನು ಮತ್ತು ಅಲ್ಲಿನ ವಾಸ್ತವ್ಯವನ್ನು ಆನಂದಿಸುತ್ತಾರೆ. ಸಾಮಾನ್ಯವಾಗಿ ಅಲ್ಲಿನ ವಿಶಿಷ್ಟ ವಾಸ್ತುಶಿಲ್ಪಶೈಲಿಯನ್ನು ನೋಡಿ ಮೂಕವಿಸ್ಮಿತರಾಗುತ್ತಾರೆ. ಮಹೇಶ್ವರದಲ್ಲಿ ಎಲ್ಲ ಕಡೆ ನಿರ್ಮಿತವಾದ ವಿವಿಧ ಪ್ರಮಾಣಗಳ ಪಾರಂಪರಿಕ ನಿರ್ಮಾಣಗಳು ಖಂಡಿತವಾಗಿಯೂ ಪ್ರವಾಸಿಗರನ್ನು ಸೆಳೆಯುತ್ತವೆ.

ಮಹೇಶ್ವರ - ದೈವಿಕ ಸಂಪರ್ಕಗಳು ಮತ್ತು ಆಚರಣೆಗಳು

ಮಹೇಶ್ವರವು ಹಲವಾರು ಶಿವನ ದೇವಾಲಯಗಳ ನೆಲೆಯಾಗಿದೆ. ಹೆಸರೇ ಸೂಚಿಸುವಂತೆ  ಇದು “ಈಶ್ವರನ ನೆಲೆಯಾಗಿದೆ”. ಮಹೇಶ ಮತ್ತು ಈಶ್ವರ ಇದು ಶಿವನ ಇತರ ಎರಡು ಹೆಸರುಗಳು. ಮಹೇಶ್ವರ ಎಂದರೆ ಶಿವನ ನಿವಾಸ ಎಂದು ಅರ್ಥ. ಈ ಪ್ರದೇಶವು ಅನಾದಿಕಾಲದಿಂದಲೂ ಸಾವಿರಾರು ಭಕ್ತರಿಗೆ ಪ್ರಮುಖ ಯಾತ್ರಾ ಕೇಂದ್ರವಾಗಿದೆ. ಈ ಪ್ರದೇಶದಲ್ಲಿರುವ ಪವಿತ್ರ ನರ್ಮದ ನದಿಯಲ್ಲಿ ಪವಿತ್ರ ಸ್ನಾನವನ್ನು ಮಾಡಿದಾಗ ಮತ್ತು ಮಹೇಶ್ವರದಲ್ಲಿರುವ ಎಲ್ಲ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಪ್ರವಾಸಿಗರು ನಿಜವಾದ ಅಧ್ಯಾತ್ಮಿಕತೆ ಭಾವನೆಯನ್ನು ಅನುಭವಿಸುತ್ತಾರೆ. ಇಲ್ಲಿ ಹಬ್ಬಗಳನ್ನು ನಿಸ್ಸಂದೇಹವಾಗಿ ಶ್ರಧ್ಧೆ , ಉತ್ಸಾಹ ಮತ್ತು ಸಂಭ್ರಮಗಳಿಂದ ಆಚರಿಸುತ್ತಾರೆ. ಮಹಾಮೃಂತ್ಯುಜಯ ರಥ ಯಾತ್ರಾ, ಗಣೇಶ ಹಬ್ಬ ಮತ್ತು ನವರಾತ್ರಿ ಇಲ್ಲಿ ಸಂಭ್ರಮದಿಂದ ಆಚರಿಸುವ ಕೆಲವು ಹಬ್ಬಗಳಾಗಿವೆ.

ಮಹೇಶ್ವರ ನಗರವನ್ನು ತಲುಪುವುದು ಹೇಗೆ?

ಇಂದೋರನಿಂದ ಮಹೇಶ್ವರಕ್ಕೆ ಬರಲು ಕೇವಲ ಮೂರು ಘಂಟೆಯ ಪ್ರಯಾಣ ಸಾಕು. ಮಧ್ಯಪ್ರದೇಶದ ಪ್ರಮುಖ ನಗರಗಳಿಂದ ಮಹೇಶ್ವರಕ್ಕೆ ಸಾಕಷ್ಟು ಬಸ ಸೌಲಭ್ಯಗಳ ಅನುಕೂಲಕರ ಆಯ್ಕೆಗಳು ಇವೆ. ಮಹೇಶ್ವರಕ್ಕೆ ಭೇಟಿ ನೀಡಲು ಉತ್ತಮವಾದ ರಜಾ ಸಮಯ ಎಂದರೆ ಚಳಿಗಾಲ. ಈ ಸಮಯದಲ್ಲಿ ನೀವು ಮಹೇಶ್ವರದಲ್ಲಿ ರಜೆಯ ಮಜವನ್ನು ಅನುಭವಿಸುವಾಗ ನಿಮ್ಮ ಗೆಳತಿ, ಪತ್ನಿಗಾಗಿ ಮಹೇಶ್ವರಿ ಕಾಟನ್ ಸೀರೆಯನ್ನು ತೆಗೆದುಕೊಳ್ಳಲು ಮರೆಯಬೇಡಿ.

ಮಹೇಶ್ವರ ಪ್ರಸಿದ್ಧವಾಗಿದೆ

ಮಹೇಶ್ವರ ಹವಾಮಾನ

ಉತ್ತಮ ಸಮಯ ಮಹೇಶ್ವರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಹೇಶ್ವರ

  • ರಸ್ತೆಯ ಮೂಲಕ
    ಮಧ್ಯಪ್ರದೇಶದ ಎಲ್ಲ ಪ್ರಮುಖ ನಗರಗಳಿಂದ ಮಹೇಶ್ವರಕ್ಕೆ ಹೋಗಲು ಉತ್ತಮವಾದ ಮತ್ತು ಸುಲಭವಾದ ರಸ್ತೆ ಸೌಲಭ್ಯ ಇದೆ. ಮಹೇಶ್ವರದಲ್ಲಿ ಬಸ ಸೌಲಭ್ಯವನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಪ್ರವಾಸಿಗರು ಮಧ್ಯ ಪ್ರದೇಶದ ಯಾವುದೇ ನಗರದಿಂದ ಮಹೇಶ್ವರಕ್ಕೆ ಸುಲಭವಾಗಿ ಸಾರ್ವಜನಿಕ ಬಸ್ಸುಗಳು ಅಥವಾ ಖಾಸಗಿ ಬಸ್ಸುಗಳ ಮೂಲಕ ತಲುಪಬಹುದು. ಟ್ಯಾಕ್ಸಿಗಳ ಸೇವಾ ಸೌಲಭ್ಯವು ಸಹ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಇಂದೋರ್ ರೇಲ್ವೆ ನಿಲ್ದಾಣ ಮಹೇಶ್ವರದ ಅತ್ಯಂತ ಹತ್ತಿರದ ರೇಲ್ವೆ ನಿಲ್ದಾಣ ಆಗಿದೆ. ಇದು ಮಹೇಶ್ವರದಿಂದ 66 ಕೀಮಿ ದೂರದಲ್ಲಿದೆ. ಇದು ಮುಖ್ಯ ನಿಲ್ದಾಣವಾದ್ದರಿಂದ ಇಲ್ಲಿ ಮಧ್ಯಪ್ರದೇಶದ ಪ್ರಮುಖ ನಗರಗಳಿಂದ ಉತ್ತಮ ರೇಲ್ವೆ ಸಂಪರ್ಕ ಮತ್ತು ಅನುಕೂಲ ಇದೆ. ಇಂದೋರನಿಂದ ಮಹೇಶ್ವರಕ್ಕೆ ತೆರಳಲು ಬಸ್ಸು ಮತ್ತು ಟ್ಯಾಕ್ಸಿಗಳ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಇಂದೋರ್ ವಿಮಾನ ನಿಲ್ದಾಣವು ಮಹೇಶ್ವರದಿಂದ 66 ಕೀ. ಮೀ ದೂರದಲ್ಲಿದೆ. ಇದು ತುಂಬಾ ಹತ್ತಿರದಲ್ಲಿರುವ ವಿಮಾನ ನಿಲ್ದಾಣವಾಗಿದೆ. ಪ್ರವಾಸಿಗರಿಗೆ ಮಹೇಶ್ವರ ಮತ್ತು ವಿಮಾನ ನಿಲ್ದಾಣಗಳ ನಡುವೆ ಪ್ರಯಾಣ ಮಾಡಲು ಸಾಕಷ್ಟು ಬಸ್ಸು ಮತ್ತು ಟ್ಯಾಕ್ಸಿಗಳ ಸೌಲಭ್ಯ ಇದೆ. ಆದ್ದರಿಂದ ಪ್ರವಾಸಿಗರು ಕೆಲವೇ ಗಂಟೆಗಳಲ್ಲಿ ಇಂದೋರದಿಂದ ಮಹೇಶ್ವರಕ್ಕೆ ಬರುತ್ತಾರೆ. ಅದೇ ರೀತಿ ಮಹೇಶ್ವರದಿಂದ ಇಂದೋರಕ್ಕೆ ಹೋಗುತ್ತಾರೆ. ಇಲ್ಲಿ ಬಸ್ಸು ಮತ್ತು ಟ್ಯಾಕ್ಸಿಗಳು ತುಂಬ ಅನುಕೂಲಕರವಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri

Near by City