Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಆಕರ್ಷಣೆಗಳು » ಕಾಂಚ್ ಮಂದಿರ್

ಕಾಂಚ್ ಮಂದಿರ್, ಇಂದೋರ್

1

ಕಾಂಚ್ ಮಂದಿರ್ ಎಂಬುದು ಇಂದೋರಿನ ಒಂದು ನಯನ ಮನೋಹರವಾದ ದೇವಾಲಯವಾಗಿದೆ. ಈ ದೇವಾಲಯವನ್ನು ಮಧ್ಯಕಾಲೀನ ಕಾಲದ ಮಹಲ್ಲಿನ ಹೊರಭಾಗದಲ್ಲಿ ನಿರ್ಮಿಸಲಾಗಿದೆ. ಈ ಮಂದಿರವು ಒಂದು ಶಿಖರವನ್ನು ಹಾಗು ಛತ್ರವಿರುವ ಮೊಗಸಾಲೆಯನ್ನು ಹೊಂದಿದೆ. ಈ ಗುಡಿಯ ಒಳಭಾಗದಲ್ಲಿ ಹೊಳೆಯುವ ಗಾಜುಗಳಿಂದ ಕೂಡಿದ ರಚನೆಗಳನ್ನು ನಾವು ಕಾಣಬಹುದು. ಕಾಂಚ್ ಮಂದಿರ್ ಎಂಬುದು 20ನೇಯ ಶತಮಾನದ ಆರಂಭಕಾಲದಲ್ಲಿದ್ದ ಸೇಠ್ ಹುಕಮ್‍ಚಂದ್ ಎಂಬ ಹತ್ತಿಯ ವರ್ತಕನಿಂದ ನಿರ್ಮಿಸಲ್ಪಟ್ಟ ಜೈನ ದೇವಾಲಯವಾಗಿದೆ.

ಈ ದೇವಾಲಯದ ಒಳಗೆ ಗಾಜಿನಿಂದ ಮಾಡಿದ ಕುಸುರಿಕೆಲಸಗಳು ಅದನ್ನು ಮಾಡಿದ ಕಲಾವಿದನ ಕೈಚಳಕವನ್ನು ಸಾರಿ ಸಾರಿ ಹೇಳುತ್ತವೆ. ಈ ದೇವಾಲಯದಲ್ಲಿರುವ ಗೋಡೆಗಳು, ಛಾವಣಿ, ನೆಲ, ಸ್ತಂಭಗಳು, ಬಾಗಿಲುಗಳು ಎಲ್ಲವು ಗಾಜಿನಿಂದ ಮಾಡಲ್ಪಟಿವೆ ಇಲ್ಲವೇ ಗಾಜಿನಿಂದ ಅಥವಾ ಮೊಸಾಯಿಕ್‍ನಿಂದ ಮುಚ್ಚಲ್ಪಟ್ಟಿವೆ. ಈ ದೇವಾಲಯದಲ್ಲಿ ಬಳಸಲಾಗಿರುವ ಬಣ್ಣ ಬಣ್ಣದ ಗಾಜುಗಳು ಇಡೀ ಕಟ್ಟಡಕ್ಕೆ ಒಂದು ಬಗೆಯ ಮೋಹಕತೆಯನ್ನು ಒದಗಿಸಿವೆ.

ಇದರ ಜೊತೆಗೆ ಈ ದೇವಾಲಯದಲ್ಲಿ ಬಳಸಲಾಗಿರುವ ಲಾಂಧ್ರಗಳು ಮತ್ತು ಗೊಂಚಲು ದೀಪಗಳನ್ನು ಸಹ ಕತ್ತರಿಸಿದ ಗಾಜುಗಳಿಂದ ನಿರ್ಮಿಸಲಾಗಿದೆ. ಈ ದೀಪಗಳು ಒಟ್ಟಾರೆಯಾಗಿ ಈ ದೇವಾಲಯದ ಸೊಬಗನ್ನು ಇಮ್ಮಡಿಗೊಳಿಸಿವೆ. ಇಲ್ಲಿ ಮಹಾವೀರ ಮತ್ತು ಇತರ ತೀರ್ಥಂಕರರ ವಿಗ್ರಹಗಳನ್ನು ನಾವು ಕಾಣಬಹುದು. ಈ ದೇವಾಲಯಕ್ಕೆ ಜೈನ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಒಟ್ಟಿಗೆ ಭೇಟಿ ನೀಡುತ್ತಿರುತ್ತಾರೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri