Search
 • Follow NativePlanet
Share
ಮುಖಪುಟ » ಸ್ಥಳಗಳು» ಇಟಾರ್ಸಿ

ಇಟಾರ್ಸಿ - ವ್ಯಾಪಾರಿ ನಗರ

12

ಜನಪ್ರಿಯ ರೈಲ್ವೇ ಜಂಕ್ಷನ್ ಜೊತೆಗೆ ವ್ಯಾಪಾರಿ ಕೇಂದ್ರವೂ ಆಗಿರುವ ಇಟಾರ್ಸಿ ಮಧ್ಯಪ್ರದೇಶದ ಹೋಶಂಗಾಬಾದ್ ಎಂಬಲ್ಲಿದೆ. ಈ ನಗರ ಪ್ರಮುಖ ಕೈಗಾರಿಕಾ ಕ್ಷೇತ್ರ ಎಂಬ ಹೆಗ್ಗುರುತಿನ ಮೂಲಕ  ಹೆಸರುವಾಸಿಯಾಗಿದೆ. ಮಧ್ಯಪ್ರದೇಶದ ಅತ್ಯಂತ ಹಳೆಯ ಮತ್ತು ದೊಡ್ಡ ರೈಲ್ವೇ ಜಂಕ್ಷನ್ ಹೊಂದಿರುವ ಈ ನಗರವು ಪ್ರದೇಶದ ವಾಣಿಜ್ಯ ಅಭಿವೃದ್ಧಿಗೆ ಕಾರಣವಾಗಿದೆ. ಇಟಾರ್ಸಿ ಕೈಮಗ್ಗದ ಬಟ್ಟೆಗಳಿಗೆ ಹೆಸರುವಾಸಿಯಾಗಿದೆ ಮತ್ತು ಪ್ರಾಚೀನ ಕಲೆ ಮತ್ತು ಕರಕುಶಲ ಕೈಗಾರಿಕೆಗಳನ್ನು ಇಲ್ಲಿ ಕಾಣಬಹುದು. ಇದು ಭೋಪಾಲ್ ನಿಂದ 90 ಕಿ ಮೀ ಅಂತರದಲ್ಲಿದೆ.

ಇಟಾರ್ಸಿ - ಇಟ್ಟಿಗೆ ಮತ್ತು ಹಗ್ಗದ ನಗರ

ಇಟಾರ್ಸಿ ಎಂಬ ಹೆಸರು ಇಟ್ಟಿಗೆ ಮತ್ತು ಹಗ್ಗ ಎಂಬುದರಿಂದ ಬಂದಿದೆ. ಇಂದು ಇಲ್ಲಿ ಪ್ಲೈವುಡ್ ಉದ್ಯಮವು ಮಂಚೂಣಿಯಲ್ಲಿದೆ. ಖನಿಜ ಸಮೃದ್ಧ ನಗರವಾದ ಇಟಾರ್ಸಿ ಭಾರತೀಯ ಸಶಸ್ತ್ರ ಪಡೆಗಳಿಗೆ ಬೇಕಾದ ಆರ್ಡನನ್ಸ್ (ಶಸ್ತ್ರಾಸ್ತ್ರಗಳು) ಫ್ಯಾಕ್ಟರಿಯನ್ನು ಹೊಂದಿದೆ. ಸೋಯಾ ತೈಲ ಗಿರಣಿಗಳು ಮತ್ತು ಹಲವಾರು ಇತರ ಕೈಗಾರಿಕೆಗಳು ನಗರವನ್ನು ವಾಣಿಜ್ಯ ಕೇಂದ್ರವಾಗಿಸಲು ಸಹಾಯಕವಾಗಿವೆ.

ಇಟಾರ್ಸಿ ಮತ್ತು ಹತ್ತಿರದ ಪ್ರವಾಸಿ ಕೇಂದ್ರಗಳು

ಇಟಾರ್ಸಿ ಪ್ರವಾಸಿ ಇಲಾಖೆಯು ಸಾಕಷ್ಟು ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗಾಗಿ ಒದಗಿಸುತ್ತದೆ. ಅವುಗಳಲ್ಲಿ ಮುಖ್ಯವಾದುವೆಂದರೆ ತವಾ ನದಿಗೆ ನಿರ್ಮಿಸಲಾಗಿರುವ ತವಾ ಜಲಾಶಯ ಮತ್ತು ಬೋರಿ ವನ್ಯಜೀವಿ ಅಭಯಾರಣ್ಯ. ಈ ನಗರದಲ್ಲಿ ಸಾಕಷ್ಟು ಧಾರ್ಮಿಕ ಕೇಂದ್ರಗಳಾದ ಇವಾಂಜೆಲಿಕಲ್ ಲುಥೇರನ್ ಚರ್ಚ್, ಬೋದಿ ಮಠ ಮಂದಿರ ಮತ್ತು ಹುಸೈನಿ ಮಸೀದಿ ಮುಂತಾದವುಗಳನ್ನು ಕಾಣಬಹುದು. ಇಟಾರ್ಸಿ ನಗರವು ಕೈಮಗ್ಗ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳ ಖರಿದಿಗೆಂದು ಶಾಪಿಂಗ್ ಸ್ಟ್ರೀಟ್ ಅನ್ನು ಕೂಡ ಹೊಂದಿದೆ.

ಇಟಾರ್ಸಿ ತಲುಪುವ ಮಾರ್ಗ

ಭೋಪಾಲ್ ನಿಂದ ಇಟಾರ್ಸಿಯನ್ನು ಸುಲಭವಾಗಿ ತಲುಪಬಹುದು. ರಸ್ತೆ ಮತ್ತು ರೈಲಿನ ಮಾರ್ಗದಲ್ಲಿ ಸಂಪರ್ಕ ಸೌಲಭ್ಯವಿದೆ. ರಾಷ್ಟ್ರೀಯ ಹೆದ್ದಾರಿ 69 ಇಟಾರ್ಸಿ ಮಾರ್ಗದಲ್ಲಿ ಹಾದು ಹೋಗುತ್ತದೆ. ನಗರದಲ್ಲಿ ತಂಗಲು ಹೋಟೆಲ್ಲುಗಳು ಸಿಗುತ್ತವೆ.

ಇಟಾರ್ಸಿ ತಲುಪಲು ಉತ್ತಮ ಸಮಯ

ಚಳಿಗಾಲ ಇಟಾರ್ಸಿ ಪ್ರವಾಸಕ್ಕೆ ಉತ್ತಮ ಸಮಯವಾಗಿದೆ.

ಇಟಾರ್ಸಿ ಪ್ರಸಿದ್ಧವಾಗಿದೆ

ಇಟಾರ್ಸಿ ಹವಾಮಾನ

ಇಟಾರ್ಸಿ
27oC / 80oF
 • Clear
 • Wind: WNW 9 km/h

ಉತ್ತಮ ಸಮಯ ಇಟಾರ್ಸಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಇಟಾರ್ಸಿ

 • ರಸ್ತೆಯ ಮೂಲಕ
  ಭೋಪಾಲ್ ನಿಂದ ರಸ್ತೆ ಮಾರ್ಗವಾಗಿ ಬಸ್ ಮತ್ತು ಟ್ಯಾಕ್ಸಿ ಮೂಲಕ ಇಟಾರ್ಸಿ ತಲುಪಬಹುದು. ಟ್ಯಾಕ್ಸಿಯಲ್ಲಿ ನಾಲ್ಕು ಜನರಿಗೆ ಸುಮಾರು 2200 ರೂಪಾಯಿ ತೆಗೆದುಕೊಳ್ಳುತ್ತಾರೆ. ಎ ಸಿ ಇರುವ ಟ್ಯಾಕ್ಸಿಯಲ್ಲಿ 7 ಜನರಿಗೆ 3000 ರುಪಾಯಿಗಳನ್ನು ಕೊಡಬೇಕಾಗುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಮಧ್ಯ ಪ್ರದೇಶದ ಅತಿ ದೊಡ್ಡ ರೇಲ್ವೆ ಜಂಕ್ಷನ್ ಇಟಾರ್ಸಿಯಲ್ಲಿದೆ. ಇಟಾರ್ಸಿ ಬೇರೆ ರಾಜ್ಯಗಳಿಂದ ಸುಲಭವಾಗಿ ರೈಲಿನ ಸಂಪರ್ಕ ಹೊಂದಿದೆ. ಇಟಾರ್ಸಿಗೆ ತಲುಪಲು ರೈಲುಮಾರ್ಗ ಸುಲಭ ಮಾರ್ಗ. ರೈಲ್ವೆ ನಿಲ್ದಾಣದಿಂದ ಸುಲಭವಾಗಿ ಆಟೋ ಮೂಲಕ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಇಟಾರ್ಸಿ ಗೆ ಹತ್ತಿರದ ವಿಮಾನ ನಿಲ್ದಾಣ ಭೋಪಾಲ್‍ನಲ್ಲಿರುವ ರಾಜ ಭೋಪಾಲ್ ವಿಮಾನ ನಿಲ್ದಾಣ. ಇದು 90 ಕಿ ಮೀ ಅಂತರದಲ್ಲಿದೆ. ಬೇರೆ ದೇಶಗಳಿಗೆ ಮತ್ತು ರಾಜ್ಯಗಳಿಗೆ ಈ ಸ್ಥಳದಿಂದ ವಿಮಾನ ಸೌಲಭ್ಯವಿದೆ. ಇಟಾರ್ಸಿಗೆ ಭೋಪಾಲ್‍ನಿಂದ ರಸ್ತೆ ಮಾರ್ಗವಾಗಿ ತಲುಪಲು 1 ಘಂಟೆ 20 ನಿಮಿಷ ಬೇಕಾಗಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
22 Mar,Fri
Return On
23 Mar,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Mar,Fri
Check Out
23 Mar,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Mar,Fri
Return On
23 Mar,Sat
 • Today
  Itarsi
  27 OC
  80 OF
  UV Index: 8
  Clear
 • Tomorrow
  Itarsi
  23 OC
  73 OF
  UV Index: 8
  Partly cloudy
 • Day After
  Itarsi
  24 OC
  75 OF
  UV Index: 8
  Sunny