Search
 • Follow NativePlanet
Share
ಮುಖಪುಟ » ಸ್ಥಳಗಳು» ರಾಯಸೇನ್

ರಾಯಸೇನ್:  ರಾಜ ಸ್ಪರ್ಶದ  ನಗರ

20

ರಾಯಸೇನ್‍ವು ಮಧ್ಯಪ್ರದೇಶದ  ಅನೇಕ ಸಣ್ಣ ನಗರಗಳ ಪೈಕಿ ಒಂದು. ಆದರೆ ತನ್ನ ಐತಿಹಾಸಿಕ  ಮತ್ತು ಧಾರ್ಮಿಕ ಪ್ರಾಮುಖ್ಯತೆಗಳ ಕಾರಣಗಳಿಂದಾಗಿ ಒಂದು ಪ್ರಮುಖ ಸ್ಥಳವಾಗಿ ಹೆಸರುವಾಸಿಯಾಗಿದೆ. ಇದು ರಾಯ ಸೇನ್ ಜಿಲ್ಲೆಯಲ್ಲಿದ್ದು ಮುಖ್ಯ ಆಡಳಿತ ಕೇಂದ್ರ ಕಚೇರಿ ಆಗಿದೆ. ಬೆಟ್ಟದ ಮೇಲಿರುವ ರಾಯಸೇನ್ ಕೋಟೆಯಿಂದಾಗಿ ಇದಕ್ಕೆ ರಾಯಸೇನ್ ಎಂಬ ಹೆಸರು ಬಂದಿದೆ. ರಾಯಸೇನ್‍ವನ್ನು ಮೊದಲು ರಾಜವಾಸಿನಿ ಅಥವಾ ರಾಜಸಾಯನ ಎಂದು ಕರೆಯಲಾಗುತ್ತಿತ್ತು. ಇದರ ಅರ್ಥ ರಾಜ ಮನೆತನದ ನಿವಾಸ ಅಥವಾ ವಾಸ ಸ್ಥಳ ಎಂದು.

ರಾಯಸೇನ್: ಇತಿಹಾಸದ  ಇಣುಕು ನೋಟ

ರಾಯಸೇನ್ ನಗರದ ಮೂಲೆ ಮೂಲೆಯಲ್ಲೂ ನಿಮಗೆ ಇತಿಹಾಸದ ನೆರಳು ಕಾಣ ಸಿಗುತ್ತದೆ. ಕ್ರಿ.ಪೂ 1200 ಶತಮಾನಗಳಷ್ಟು ಹಿಂದಯೇ ಇಲ್ಲಿ ರಾಯಸೇನ್ ಕೋಟೆಯನ್ನು ನಿರ್ಮಿಸಲಾಗಿತ್ತು. ಅಂದಿನಿಂದ ಈ ನಗರಕ್ಕೆ ರಾಯಸೇನ್ ಎಂಬ ಹೆಸರೇ ಅಂಟಿಕೊಂಡಿದೆ. 15 ಶತಮಾನದವರೆಗೂ ರಾಯಸೇನ್‍ವನ್ನು ಅನೇಕ ಆಡಳಿತಗಾರರು ಆಳಿದರು. ಆದರೆ 1543 ರಲ್ಲಿ ಇದನ್ನು ಶೇರಷಹ ಸೂರಿಯು ಪುರಣಮಾಯಿಯಿಂದ ಗೆದ್ದುಕೊಂಡು ಅನೇಕ ವರ್ಷಗಳ ಕಾಲ ಆಳಿದನು. ನಂತರ 1760 ರಲ್ಲಿ ಭೂಪಾಲದ ಮೂರನೇ ನವಾಬನಾದ ಫಿಯಾಜ ಮೊಹಮ್ಮದ ಖಾನನು ರಾಯಸೇನ್‍ವನ್ನು ಆಕ್ರಮಿಸಿದನು. ಅಂದಿನಿಂದ ಈ ಸಣ್ಣ ನಗರವು ಭೂಪಾಲ ಸಂಸ್ಥಾನದ ಒಂದು ಭಾಗವಾಯಿತು. ಭಾರತ ದೇಶವು ಸ್ವತಂತ್ರವಾದ ನಂತರ, 1956 ರಲ್ಲಿ  ರಾಯಸೇನ್‍ವು ಭೂಪಾಲ ರಾಜ್ಯದ ಅವಿಭಾಜ್ಯ ಅಂಗವಾಯಿತು. ನಂತರ ನವಂಬರ 1, 1956 ರಂದು ಮಧ್ಯ ಪ್ರದೇಶದಲ್ಲಿ ವಿಲೀನವಾಯಿತು.

ರಾಯಸೇನ್‍ದಲ್ಲಿ  ನೋಡಬೇಕಾದ  ಸ್ಥಳಗಳು

ರಾಯಸೇನ್‍ದಲ್ಲಿ ಅನೇಕ ದೇವಾಲಯಗಳು ಮತ್ತು ಪುಣ್ಯಕ್ಷೇತ್ರಗಳಿವೆ. ಮಧ್ಯಪ್ರದೇಶದ ಸಣ್ಣ ನಗರ ಜಿಲ್ಲೆ ಆಗಿರುವ ಇದು ತನ್ನದೇ ಆದ ಐತಿಹಾಸಿಕ ಮತ್ತು ಧಾರ್ಮಿಕತೆಯ ಮಹತ್ವವನ್ನು ಹೊಂದಿದೆ. ಇಲ್ಲಿ ನೀವು ರಾಷ್ಟ್ರೀ ಯ ಭಾವೈಕ್ಯತೆಯನ್ನು ಕಾಣುತ್ತೀರಿ. ಏಕೆಂದರೆ ರಾಯಸೇನ್‍ದಲ್ಲಿ ದೇವಾಲಯಗಳನ್ನು ಮತ್ತು ಮಸೀದಿಗಳನ್ನು ಒಂದೇ ಸ್ಥಳದಲ್ಲಿ ಕಾಣುತ್ತೀರಿ. ಇಲ್ಲಿರುವ ನಾಗರಿಕರು ಸೌಹಾರ್ದ ಮನೋಭಾವದವರಾಗಿದ್ದು ಎಲ್ಲ  ಧರ್ಮಗಳಿಗೂ ಸಮನಾದ  ಗೌರವವನ್ನು ತೋರಿಸುತ್ತಾರೆ. ಹಜರತ್ ಪೀರ್ ಫತೆ ಉಲ್ಲಾಹ ಷಾ ಬಾಬಾ ಪುಣ್ಯ ಸ್ಥಳ ಇದಕ್ಕೆ ಸಾಕ್ಷಿಯಾಗಿದೆ. ರಾಯಸೇನ್ ಕೋಟೆಯು ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿದೆ.

ರಾಯಸೇನ್ ನಗರಕ್ಕೆ ಭೇಟಿ ಕೊಡುವುದು

ರಾಯಸೇನ್ ನಗರಕ್ಕೆ ಅಕ್ಟೋಬರ ಮತ್ತು ನವಂಬರ ತಿಂಗಳ ರಜಾದಿನಗಳಲ್ಲಿ ಭೇಟಿ ಕೊಡುವುದು ಒಳ್ಳೆಯದು. ಏಕೆಂದರೆ ಈ ಸಮಯದಲ್ಲಿ ಇಲ್ಲಿನ ಹವಾಮಾನವು ಅಹ್ಲಾದಕತೆಯಿಂದ ಕೂಡಿರುತ್ತದೆ.  ರಾಯಸೇನ್‍ವನ್ನು ನೀವು ವಿಮಾನ, ರೇಲ್ವೆ ಮತ್ತು ಬಸ್ಸುಗಳ ಮೂಲಕ ತಲುಪಬಹುದು. ಭೂಪಾಲದ ವಿಮಾನ ನಿಲ್ದಾಣ ಮತ್ತು ರೇಲ್ವೆ ನಿಲ್ದಾಣಗಳು ರಾಯಸೇನಕ್ಕೆ ಹತ್ತಿರದಲ್ಲಿವೆ.

ರಾಯಸೇನ್ ಪ್ರಸಿದ್ಧವಾಗಿದೆ

ರಾಯಸೇನ್ ಹವಾಮಾನ

ರಾಯಸೇನ್
33oC / 92oF
 • Sunny
 • Wind: WNW 30 km/h

ಉತ್ತಮ ಸಮಯ ರಾಯಸೇನ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ರಾಯಸೇನ್

 • ರಸ್ತೆಯ ಮೂಲಕ
  ಮದ್ಯಪ್ರದೇಶದ ಪ್ರವಾಸಿ ಸ್ಥಳಗಳಾದ ಎಲ್ಲ ಪಟ್ಟಣ ಮತ್ತು ನಗರಗಳು ಬಸ್ಸುಗಳ ಮೂಲಕ ಉತ್ತಮ ಮತ್ತು ನಿರಂತರ ಸಂಪರ್ಕವನ್ನು ಹೊಂದಿದೆ. ರಾಯಸೇನಕ್ಕೆ ತಲುಪಲು ಬಸ್ಸುಗಳು ಮತ್ತು ಟ್ಯಾಕ್ಸಿಗಳು ಅತ್ಯಂತ ಅನುಕೂಲಕರವಾದ ಸಾರಿಗೆ ವ್ಯವಸ್ಥೆಗಳಾಗಿವೆ. ರಾಯಸೇನಕ್ಕೆ ತೆರಳಲು ರಾಜ್ಯ ಸಾರಿಗೆ ನಿಯಮಿತ ಬಸ್ಸುಗಳ ವ್ಯವಸ್ಥೆ ಇದ್ದು, ಪ್ರಯಾಣ ದರ ಪ್ರವಾಸಿಗರಿಗೆ ಅನುಕೂಲಕರವಾಗಿದೆ. ಎಸಿ ಕೋಚಗಳ ಪ್ರಯಾಣ ದರ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ. ಟ್ಯಾಕ್ಸಿಗಳು ಕೂಡ ಅನುಕೂಲಕರವಾಗಿದ್ದು, ಪ್ರವಾಸಿಗರನ್ನು ರಾಯಸೇನಕ್ಕೆ ಸುರಕ್ಷಿತವಾಗಿ ತಲುಪಿಸುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಭೂಪಾಲ ರೇಲ್ವೆ ಜಂಕ್ಷನ ರಾಯಸೇನದ ತುಂಬ ಹತ್ತಿರದಲ್ಲಿರುವ ರೇಲ್ವೆ ನಿಲ್ದಾಣವಾಗಿದೆ. ಭೂಪಾಲ ರೇಲ್ವೆ ಜಂಕ್ಷನ ದೇಶದ ಪ್ರಮುಖ ನಗರಗಳ ಉತ್ತಮ ಮತ್ತು ನಿರಂತರ ರೇಲ್ವೆ ಸಂಪರ್ಕವನ್ನು ಹೊಂದಿದೆ. ಭೂಪಾಲದಿಂದ ರಾಯಸೇನಕ್ಕೆ ಹೋಗಲು ಬಸ್ಸು ಮತ್ತು ಟ್ಯಾಕ್ಸಿಗಳ ಸೌಲಭ್ಯವೂ ಇದೆ. ಇದರಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಭೂಪಾಲ ವಿಮಾನ ನಿಲ್ದಾಣವು ರಾಯಸೇನ ನಗರಕ್ಕೆ ತುಂಬಾ ಹತ್ತಿರದಲ್ಲಿದೆ. ರಾಯಸೇನವು ಭೂಪಾಲ ವಿಮಾನ ನಿಲ್ದಾಣದಿಂದ ಕೇವಲ 48 ಕೀ ಮೀ ದೂರದಲ್ಲಿದೆ. ಭೂಪಾಲ ವಿಮಾನ ನಿಲ್ದಾಣವು ದೇಶದ ಎಲ್ಲ ಪ್ರಮುಖ ವಿಮಾನ ನಿಲ್ದಾಣಗಳೊಂದಿಗೆ ಉತ್ತಮ ಸಂಪರ್ಕವನ್ನು ಸಾಧಿಸಿದೆ. ಭೂಪಾಲ ವಿಮಾನ ನಿಲ್ದಾಣವನ್ನು ತಲುಪಿದ ನಂತರ ನೀವು ಬಸ್ಸು ಅಥವಾ ಕಾರುಗಳ ಮೂಲಕ ರಾಯಸೇನವನ್ನು ತಲುಪಬಹುದು. ಇದು ತುಂಬಾ ಕಡಿಮೆ ದರವನ್ನು ಹೊಂದಿದ್ದು, ಪ್ರವಾಸಿಗರಿಗೆ ಅನುಕೂಲಕರವಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
17 Oct,Thu
Return On
18 Oct,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Oct,Thu
Check Out
18 Oct,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Oct,Thu
Return On
18 Oct,Fri
 • Today
  Raisen
  33 OC
  92 OF
  UV Index: 9
  Sunny
 • Tomorrow
  Raisen
  32 OC
  89 OF
  UV Index: 9
  Sunny
 • Day After
  Raisen
  32 OC
  89 OF
  UV Index: 9
  Sunny