Search
 • Follow NativePlanet
Share
ಮುಖಪುಟ » ಸ್ಥಳಗಳು» ಚಾಂದೇರಿ

ಚಾಂದೇರಿ : ಐತಿಹಾಸಿಕ ಪ್ರವಾಸಿ ಸ್ಥಳ

26

ಮಧ್ಯಪ್ರದೇಶದ ಅಶೋಕ ನಗರ ಜಿಲ್ಲೆಯಲ್ಲಿರುವ ಚಾಂದೇರಿ ಐತಿಹಾಸಿಕ ಮಹತ್ವವನ್ನು ಪಡೆದ ಸ್ಥಳ. ಬುಂದೇಲ್ಖಂಡ ಮತ್ತು ಮಾಳ್ವಾ ಗಡಿ ಪ್ರದೇಶದ ನಡುವೆ ಈ ಪ್ರದೇಶ ಬರುತ್ತದೆ. ಈ ಪಟ್ಟಣವು ಅದರ ಐತಿಹಾಸಿಕ ಸ್ಮಾರಕಗಳು ಮತ್ತು ನೈಸರ್ಗಿಕ ಅದ್ಭುತಗಳ ಮೂಲಕ ಒಂದು ಸಂತೋಷಕರ ವಾತಾವರಣ  ಒದಗಿಸುತ್ತದೆ. ಪಕ್ಕದ ಕಾಡುಗಳ ಹಸಿರು ಮತ್ತು ಪ್ರಸನ್ನ ಸರೋವರಗಳ ವಾತಾವರಣದಿಂದ ಸುತ್ತುವರೆದ ಚಾಂದೇರಿ ಸೊಂಪಾದ ವಿಂಧ್ಯ ಬೆಟ್ಟಗಳಲ್ಲಿ ಇದೆ. ಈ ನಗರವು ಝಾನ್ಸಿ ಇಂದ 135 ಕಿ ಮೀ ಮತ್ತು ಭೋಪಾಲ್ ನಿಂದ 205 ಕಿ ಮೀ ಅಂತರದಲ್ಲಿದೆ.

ಚಾಂದೇರಿ : ಅದ್ಭುತ ಕಲ್ಲಿನ ಕೆತ್ತನೆಯ ಭೂಮಿ

ಚಾಂದೇರಿಯ ಸ್ಮಾರಕಗಳ ಹೆಗ್ಗುರುತುಗಳು, ಈ ಪುರಾತನ ನಗರವು 11  ಶತಮಾನದಿಂದ ಅಸ್ತಿತ್ವದಲ್ಲಿದೆ ಎಂಬ ಪುರಾವೆಗಳನ್ನು ಒದಗಿಸುತ್ತದೆ. ಗುಜರಾತ್‍ನ ಬಂದರುಗಳಿಗೆ, ಮಧ್ಯ ಭಾರತ ಹಾಗು ಡೆಕ್ಕನ್ ಪ್ರದೇಶಗಳಿಗೆ ಸುಗಮವಾದ ವ್ಯಾಪಾರ ಮಾರ್ಗಗಳನ್ನು ಒಳಗೊಂಡ ಸ್ಥಳ ಇದಾಗಿದ್ದರಿಂದ ಹಲವಾರು ಆಳ್ವಿಕೆಗಾರರು ಇದನ್ನು ಆಳಿದ್ದರು. ಕಲ್ಲಿನಿಂದ ಕೆತ್ತಿದ ಸ್ಮಾರಕಗಳು ವಿವಿಧ ಅವಧಿಗಳ ಸಮೃದ್ಧ ಇಸ್ಲಾಮಿಕ್ ವಾಸ್ತುಶಿಲ್ಪವನ್ನು ಒಳಗೊಂಡ  ಪುರಾವೆಗಳನ್ನು ಇಲ್ಲಿ ಕಾಣಬಹುದು. ಚಾಂದೇರಿ ಜೈನ ಧರ್ಮದ ಒಂದು ಪ್ರಮುಖ ಕೇಂದ್ರವಾಗಿತ್ತು ಹಾಗೂ ನಿರ್ಣಾಯಕ ಮಿಲಿಟರಿ ನೆಲೆಯಾಗಿಯೂ ಸೇವೆ ನೀಡಿದೆ.

ಚಾಂದೇರಿಯ ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಚಾಂದೇರಿಯಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳಿವೆ. ಚಾಂದೇರಿ ಕೋಟೆ, ರಾಜ ಮಹಲ್, ಸಿಂಗಪುರ್ ಪ್ಯಾಲೇಸ್, ಬಾದಲ್ ಮಹಲ್ ಮುಂತಾದವು. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾಗೆಶ್ವರಿ ದೇವಿ ಜಾತ್ರೆ ದೊಡ್ಡ ಆಕರ್ಷಣೆಯಾಗಿದೆ. ಚಾಂದೇರಿ ಕರಕುಶಲ ಉದ್ಯಮಕ್ಕೆ ಹೆಸರುವಾಸಿಯಾಗಿದೆ ಮತ್ತು ಉನ್ನತ ಗುಣಮಟ್ಟದ ಕೈಯಲ್ಲಿ ಹೆಣೆದ ಸೀರೆಗಳು ಮತ್ತು ವಿಶಿಷ್ಟ ಚಿನ್ನದ ಅಂಚಿನ ಸೀರೆಗಳಿಗೆ ಇದು ಪ್ರಖ್ಯಾತಿಪಡೆದಿದೆ.

ಚಾಂದೇರಿ ತಲುಪುವ ಮಾರ್ಗ

ಅಕ್ಕಪಕ್ಕದ ಹಳ್ಳಿ ಮತ್ತು ನಗರಗಳಿಂದ ಬಸ್ ಮತ್ತು ಟ್ಯಾಕ್ಸಿ ಮೂಲಕ ಚಾಂದೇರಿ ತಲುಪಬಹುದು. ಪ್ರವಾಸಿಗರಿಗೆ ಈ ತಾಣ ಸೂಕ್ತವಾಗಿದೆ ಮತ್ತು ಇಲ್ಲಿ ತಂಗಲು ವಿಶಾಲವಾದ ಹೋಟೆಲುಗಳು, ಸರ್ಕ್ಯೂಟ್ ಹೌಸ್, ಡಾಕ್ ಬಂಗಲೆ ಮತ್ತು ರೆಸ್ಟ್ ಹೌಸ್ ಸಹ ಗಳಿವೆ.

ಚಾಂದೇರಿ ಗೆ ಪ್ರವಾಸ ಕೈಗೊಳ್ಳಲು ಸೂಕ್ತ ಕಾಲ

ಚಳಿಗಾಲ ಇಲ್ಲಿ ಭೇಟಿ ನೀಡಲು ಉತ್ತಮ ಕಾಲ.

ಚಾಂದೇರಿ ಪ್ರಸಿದ್ಧವಾಗಿದೆ

ಚಾಂದೇರಿ ಹವಾಮಾನ

ಚಾಂದೇರಿ
34oC / 92oF
 • Sunny
 • Wind: W 20 km/h

ಉತ್ತಮ ಸಮಯ ಚಾಂದೇರಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಚಾಂದೇರಿ

 • ರಸ್ತೆಯ ಮೂಲಕ
  ಮಧ್ಯ ಪ್ರದೇಶದ ಇತರೆ ಪ್ರಮುಖ ಪಟ್ಟಣಗಳಿಂದ ಚಾಂದೇರಿಗೆ ತಲುಪಲು ಬಸ್ಸುಗಳು ಸುಲಭವಾಗಿ ದೊರೆಯುತ್ತವೆ. ಇಲ್ಲಿ ಬಸ್ ಸೇವೆ ಗ್ವಾಲಿಯರ್, ಭೋಪಾಲ್, ಇಂದೋರ್, ಗುಣಾ, ವಿಧಿಶಾ, ಶಿವಪುರಿ, ಸಾಂಚಿ, ಅಶೋಕ್ ನಗರ, ತಿಕಂಗರ್, ಝಾನ್ಸಿ, ಲಲಿತಪುರ ಇತ್ಯಾದಿ ಇತರ ಪ್ರಮುಖ ಸ್ಥಳಗಳಿಂದ ಲಭ್ಯವಿದೆ. ಖಾಸಗಿ ಟ್ಯಾಕ್ಸಿಗಳು ಚಾಂದೇರಿ ಮತ್ತು ವಿವಿಧ ನಗರಗಳ ಮತ್ತು ಪಟ್ಟಣಗಳ ​​ನಡುವೆ ಸಹ ಲಭ್ಯವಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಚಾಂದೇರಿಗೆ ಹತ್ತಿರದ ರೈಲ್ವೇ ನಿಲ್ದಾಣಗಳು ಲಲಿತಪುರ (36 ಕಿಮೀ) ಮತ್ತು ಝಾನ್ಸಿ (124 ಕಿಮೀ) ನಲ್ಲಿ ಇವೆ. ಅಶೋಕ್ ನಗರ್ (46 ಕಿಮೀ) ಮತ್ತು ಮುಂಗೌಲಿ (38 ಕಿಮೀ) ಸಹ ದೇಶದ ಉಳಿದ ಭಾಗದ ಮೂಲಕ ಚಾಂದೇರಿ ಸಂಪರ್ಕಿಸಲು ಇರುವ ಮಾರ್ಗ. ಚಾಂದೇರಿಗೆ ತಲುಪಲು ಈ ನಿಲ್ದಾಣಗಳಿಂದ ಟ್ಯಾಕ್ಸಿಗಳು ಮತ್ತು ಬಸ್ಸುಗಳು ಸುಗಮವಾಗಿ ದೊರೆಯುತ್ತವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಭೋಪಾಲ್ (258 ಕಿ.ಮೀ )ಮತ್ತು ಗ್ವಾಲಿಯರ್ (259ಕಿ.ಮೀ) ಚಾಂದೇರಿಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣಗಳು. ರಾಜ ಭೋಜ್ ಏರ್ಪೋರ್ಟ್ ಭೋಪಾಲ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರಾಜಮಾತ ವಿಜಯ್ ರಾಜೆ ಸಿಂದಿಯ ಇದು ಗ್ವಾಲಿಯರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇಲ್ಲಿಂದ ಚಾಂದೇರಿಗೆ ಟ್ಯಾಕ್ಸಿ ಅಥವಾ ಬಸ್ಸಿನ ಮೂಲಕ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
14 Oct,Mon
Return On
15 Oct,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
14 Oct,Mon
Check Out
15 Oct,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
14 Oct,Mon
Return On
15 Oct,Tue
 • Today
  Chanderi
  34 OC
  92 OF
  UV Index: 9
  Sunny
 • Tomorrow
  Chanderi
  32 OC
  89 OF
  UV Index: 9
  Sunny
 • Day After
  Chanderi
  33 OC
  91 OF
  UV Index: 9
  Sunny