Search
  • Follow NativePlanet
Share
ಮುಖಪುಟ » ಸ್ಥಳಗಳು» ಖಜುರಾಹೊ

ಖಜುರಾಹೊ : ಕಲ್ಲು ಕಲ್ಲಿನಲಿ ಮಿಲನದ ಕಲೆಯ ಚಿತ್ತಾರ.

131

ಮಧ್ಯ ಪ್ರದೇಶದ ಬುಂದೇಲ್‍ಖಂಡ್ ವಲಯದಲ್ಲಿರುವ ವಿಂದ್ಯಾ ಪರ್ವತಗಳ ಹಿನ್ನಲೆಯಲ್ಲಿ, ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುವುವಂತೆ ನೆಲೆಗೊಂಡಿರುವ ಒಂದು ಸಣ್ಣ ಹಳ್ಳಿಯೇ ಖಜುರಾಹೊ. ಇಲ್ಲಿರುವ ಅನುಪಮವಾದ ಖಜುರಾಹೊ ದೇವಾಲಯದಿಂದಾಗಿ ಈ ಊರು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ತನ್ನ ಅಸ್ತಿತ್ವವನ್ನು ಕಂಡು ಕೊಂಡಿದೆ. ಖಜುರಾಹೊದಲ್ಲಿ ಪ್ರವಾಸೋದ್ಯಮವು ಇಲ್ಲಿರುವ ಅನುಪಮವಾದ ದೇವಾಲಯಗಳಿಂದಾಗಿ ಭಾರೀ ಪ್ರಸಿದ್ಧಿಯನ್ನು ಪಡೆದಿದೆ. ಈ ದೇವಾಲಯಗಳು ತಮ್ಮಲ್ಲಿರುವ ಪ್ರತ್ಯೇಕವಾದ ಮಿಥುನ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ.

ಖಜುರಾಹೊ ಪ್ರವಾಸೋದ್ಯಮ; ಪರಂಪರೆ ಮತ್ತು ಜೀವನೋತ್ಸಾಹದ ಸೆಲೆ

ಖಜುರಾಹೊ ದೇವಾಲಯವನ್ನು ಸುಮಾರು ಕ್ರಿ.ಶ 950 ರಿಂದ 1050 ರವರೆಗೆ ಮಧ್ಯ ಭಾರತದ ಈ ಪ್ರಾಂತ್ಯವನ್ನು ಆಳಿದ ಚಂಡೇಲ ರಾಜಮನೆತನದ ರಾಜರು ನಿರ್ಮಿಸಿದರು. ಖಜುರಾಹೊವಿನಲ್ಲಿ ಒಟ್ಟಾರೆಯಾಗಿ 85 ದೇವಾಲಯಗಳು ಇವೆ. ಆದರೆ ಕಾಲದ ಒಡೆತಕ್ಕೆ ಸಿಲುಕಿ ಅವುಗಳಲ್ಲಿ ಬಹುತೇಕ ದೇವಾಲಯಗಳು ಇಂದು ನಿರ್ನಾಮವಾಗಿದ್ದು, ಕೇವಲ 22 ದೇವಾಲಯಗಳು ಮಾತ್ರ ಉಳಿದುಕೊಂಡಿವೆ. ಊಹೆಗು ನಿಲುಕದಂತಹ, ಹೋಲಿಕೆಗೆ ಸಿಲುಕದಂತಹ ಮಾನವನ ಮಿಥುನ ಕ್ರಿಯೆಯ ಅದ್ಭುತ ನಿರೂಪಣೆಯನ್ನು ಇಲ್ಲಿನ ದೇಗುಲಗಳಲ್ಲಿ ಶಿಲ್ಪಗಳ ರೂಪದಲ್ಲಿ ಕೆತ್ತಲಾಗಿದೆ. ಈ ದೇಗುಲಗಳನ್ನು 1986ರಲ್ಲಿ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಯಿತು.

ಖಜುರಾಹೊದ ಕಲೆ ಮತ್ತು ಶಿಲ್ಪಗಳು ಜೀವನೋತ್ಸಹದ ಧ್ಯೋತಕಗಳಾಗಿ ನಿಂತಿವೆ. ಇಲ್ಲಿನ ಪ್ರತಿ ದೇಗುಲಗಳಲ್ಲಿ ಹೊರಹೊಮ್ಮಿರುವ ಭವ್ಯ ವಾಸ್ತುಶಿಲ್ಪವು, ಮಾನವನ ಜೀವನ ಮತ್ತು ಸೃಜನಶೀಲತೆ ಎರಡನ್ನು ಸೇರಿಸಿ ಸೃಷ್ಟಿಸಿರುವ ಒಂದು ಅಪೂರ್ವ ಭಾವಗೀತೆಯಂತಿದೆ. ಖಜುರಾಹೊದಲ್ಲಿರುವ ದೇವಾಲಯಗಳಲ್ಲಿ ಹಲವು ದೇವಾಲಯಗಳು ಹಿಂದೂ ದೇವರುಗಳಿಗೆ ಸಮರ್ಪಿಸಲ್ಪಟ್ಟಿದ್ದರು ಸಹ, ಶೃಂಗಾರವನ್ನು ಅಭಿವ್ಯಕ್ತಿಪಡಿಸುವ ಶಿಲ್ಪಗಳಿಗೆ ಹೆಚ್ಚು ಖ್ಯಾತಿ ಪಡೆದಿದೆ. ಈ ಎಲ್ಲಾ ಕಾರಣಗಳಿಗಾಗಿ ಇದನ್ನು ಭಾರತದ ಏಳು ಅದ್ಭುತಗಳಲ್ಲಿ ಒಂದು ಎಂದು ವರ್ಣಿಸಿರುವುದು ಹೆಚ್ಚು ಸಮಂಜಸವಾಗಿದೆ ಎಂದು ಹೇಳಬಹುದು.

ಖಜುರಾಹೊ ದೇವಾಲಯಗಳು ; ಸೃಜನಶೀಲತೆಯ ವೈವಿಧ್ಯತೆ

ಖಜುರಾಹೊದ ದೇವಾಲಯಗಳನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ: ಇವುಗಳನ್ನು ಕ್ರಮವಾಗಿ  ಪಶ್ಚಿಮ, ಪೂರ್ವದ ಮತ್ತು ದಕ್ಷಿಣ ದೇಗುಲ ಸಮೂಹಗಳೆಂದು ವಿಂಗಡಿಸಲಾಗಿದೆ. ಪಶ್ಚಿಮ ದೇಗುಲ ಸಮೂಹಗಳು ಸಂಪೂರ್ಣವಾಗಿ ಹಿಂದೂ ದೇವಾಲಯಗಳನ್ನು ಒಳಗೊಂಡಿವೆ. ಈ ದೇವಾಲಯಗಳು ಖಜುರಾಹೊದ ನೈಜ ವಾಸ್ತುಶಿಲ್ಪದ ವೈಭವವನ್ನು ಪರಿಚಯಿಸುತ್ತವೆ. ಈ ದೇವಾಲಯಗಳಲ್ಲಿ ಕಂಡರಿಯ ಮಹಾದೇವ ದೇವಾಲಯವು ಅತ್ಯಂತ ದೊಡ್ಡದಾಗಿದ್ದು, ಖಜುರಾಹೊದಲ್ಲಿರುವ ದೇವಾಲಯಗಳಲ್ಲಿಯೇ ಅತ್ಯಂತ ಭವ್ಯವಾದ ದೇವಾಲಯವೆಂದು ಪರಿಗಣಿಸಲ್ಪಟ್ಟಿದೆ. ಪೂರ್ವ ದೇಗುಲ ಸಮೂಹಗಳಲ್ಲಿರುವ ದೇವಾಲಯಗಳು ಹಿಂದೂ ಮತ್ತು ಜೈನ ದೇವಾಲಯಗಳನ್ನು ಒಳಗೊಂಡಿವೆ.  ಈ ದೇವಾಲಯಗಳು ಪಶ್ಚಿಮ ದೇವಾಲಯಗಳಂತೆ ವಿಶಿಷ್ಟ ಕೆತ್ತನೆಗಳನ್ನು ಒಳಗೊಳ್ಳದಿದ್ದರು, ತಮ್ಮದೇ ಆದ ಆಕರ್ಷಣೆಯನ್ನು ಒಳಗೊಂಡಿವೆ. ಇವುಗಳಲ್ಲಿ ಪಾರ್ಶ್ವನಾಥ ದೇವಾಲಯವು ಅತಿ ದೊಡ್ಡ ಜೈನ ದೇವಾಲಯವಾಗಿದೆ. ದಕ್ಷಿಣ ದೇಗುಲಗಳ ಸಮೂಹವು ಕೇವಲ ಎರಡು ದೇವಾಲಯಗಳನ್ನು ಒಳಗೊಂಡಿದೆ. ಅವುಗಳೆಂದರೆ ಒಂದು ಧುಲಾದೇವ್ ದೇವಾಲಯ ಮತ್ತೊಂದು ಚತುರ್ಭುಜ್ ದೇವಾಲಯ. ಈ ದೇವಾಲಯಗಳು ಖಜುರಾಹೊದ ಇನ್ನಿತರ ದೇವಾಲಯಗಳಲ್ಲಿರುವ ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ಕೊರತೆಯನ್ನು ಹೊಂದಿವೆ.

ಖಜುರಾಹೊ ಮತ್ತು ಅದರ ಸುತ್ತ- ಮುತ್ತ ಇರುವ ಪ್ರವಾಸಿ ತಾಣಗಳು

ಖಜುರಾಹೊದಲ್ಲಿರುವ ದೇವಾಲಯಗಳು ತಮ್ಮಲ್ಲಿರುವ ಶಿಲ್ಪಗಳ ಮೂಲಕ ನೋಡುಗರಿಗೆ ಪ್ರತಿ ಕಣ ಕಣದಲ್ಲಿ ಒಲವಿನ ಸಾಕ್ಷಾತ್ಕರವನ್ನು ತೋರಿಸುತ್ತಿದೆ. ಚೌಸತ್ ಯೋಗಿನಿ ದೇವಾಲಯ, ಜವರಿ ದೇವಾಲಯ, ದೇವಿ ಜಗದಾಂಬಾ ದೇವಾಲಯ, ವಿಶ್ವನಾಥ್ ದೇವಾಲಯ, ಕಂಡರಿಯ ಮಹಾದೇವ್ ದೇವಾಲಯ, ಲಕ್ಷ್ಮಣ ದೇವಾಲಯ ಮತ್ತು ಇನ್ನಿತರ ದೇವಾಲಯಗಳು ಇಲ್ಲಿನ ಪ್ರಮುಖ ದೇವಾಲಯಗಳಾಗಿವೆ. ಇದರ ಜೊತೆಗೆ ಇಲ್ಲಿ ಪ್ರತಿವರ್ಷ ಫೆಬ್ರವರಿ 25 ರಿಂದ ಮಾರ್ಚಿ 2ರವರೆಗೆ ನಡೆಯುವ ಖಜುರಾಹೊ ನೃತ್ಯೋತ್ಸವವು ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ವಾರ ಪೂರ್ತಿ ನಡೆಯುವ ಉತ್ಸವವು ದೇಶದ ನಾನಾ ಮೂಲೆಗಳಿಂದ ಕಲಾವಿದರನ್ನು ಮತ್ತು ನೃತ್ಯಪಟುಗಳನ್ನು ಆಕರ್ಷಿಸುತ್ತದೆ.

ಖಜುರಾಹೊ;  ಪ್ರವಾಸಿಗ ಸ್ನೇಹಿ ಯಾತ್ರಾಸ್ಥಳ

ಖಜುರಾಹೊಗೆ ಸಾರಿಗೆಯ ಎಲ್ಲಾ ಪ್ರಕಾರಗಳ ಮೂಲಕ ತಲುಪಬಹುದು. ಈ ಪಟ್ಟಣವು ಒಂದು ವಿಮಾನ ನಿಲ್ದಾಣ, ರೈಲು ನಿಲ್ದಾಣ ಮತ್ತು ಬಸ್ಸು ನಿಲ್ದಾಣಗಳನ್ನು ಹೊಂದಿದೆ. ಈ ನಗರವನ್ನು ಸುತ್ತಿ ನೋಡಲು ಟ್ಯಾಕ್ಸಿಗಳು, ರಿಕ್ಷಾಗಳು ಮತ್ತು ಬೈಸಿಕಲ್‍ಗಳು ದೊರೆಯುತ್ತವೆ. ಚಳಿಗಾಲದ ಸಮಯದಲ್ಲಿ, ಅದರಲ್ಲೂ ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಅವಧಿಯು ಇಲ್ಲಿಗೆ ಭೇಟಿ ನೀಡಲು ಹೇಳಿ ಮಾಡಿಸಿದ ಸಮಯವಾಗಿದೆ.

ಖಜುರಾಹೊ ಪ್ರಸಿದ್ಧವಾಗಿದೆ

ಖಜುರಾಹೊ ಹವಾಮಾನ

ಉತ್ತಮ ಸಮಯ ಖಜುರಾಹೊ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಖಜುರಾಹೊ

  • ರಸ್ತೆಯ ಮೂಲಕ
    ಖಜುರಾಹೊವು ಮಹೊಬ, ಜಬಲ್‍ಪುರ್, ಭೂಪಾಲ್, ಝಾನ್ಸಿ, ಇಂದೋರ್, ಗ್ವಾಲಿಯರ್ ನಂತಹ ದೊಡ್ಡ ಮತ್ತು ಸಣ್ಣ ನಗರಗಳೊಂದಿಗೆ ಉತ್ತಮ ಬಸ್ ಸಂಪರ್ಕವನ್ನು ಹೊಂದಿದೆ. ಈ ನಗರಗಳಿಂದ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಖಜುರಾಹೊಗೆ ಬಂದು ಹೋಗುತ್ತಿರುತ್ತವೆ. ಖಜುರಾಹೊಗೆ ಬರಲು ಬಯಸುವ ಪ್ರವಾಸಿಗರಿಗಾಗಿ ಹವಾನಿಯಂತ್ರಿತ ಮತ್ತು ಹವಾನಿಯಂತ್ರಿತವಲ್ಲದ ,ಡೀಲಕ್ಸ್ ಮತ್ತು ಸೂಪರ್ ಡೀಲಕ್ಸ್ ಬಸ್ಸುಗಳು ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಖಜುರಾಹೊ ರೈಲು ನಿಲ್ದಾಣವು ಚಿಕ್ಕದಾಗಿದ್ದು, ಝಾನ್ಸಿ ಮತ್ತು ಇನ್ನಿತರ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಮಹೊಬ ರೈಲು ನಿಲ್ದಾಣವು ಖಜುರಾಹೊದಿಂದ 63 ಕಿ.ಮೀ ದೂರದಲ್ಲಿದೆ. ಮಹೊಬದಿಂದ ಖಜುರಾಹೊಗೆ ಟ್ಯಾಕ್ಸಿ ದರವು 1200 ರೂಪಾಯಿಯಾಗುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಖಜುರಾಹೊವು ತನ್ನದೇ ಆದ ಒಂದು ವಿಮಾನ ನಿಲ್ದಾಣವಿದೆ. ಖಜುರಾಹೊ ವಿಮಾನ ನಿಲ್ದಾಣವು ಈ ನಗರದಿಂದ 5 ಕಿ.ಮೀ ದೂರದಲ್ಲಿದೆ. ಹಲವು ಪ್ರಮುಖ ವಿಮಾನ ಸಂಸ್ಥೆಗಳ ವಿಮಾನಗಳು ಪ್ರವಾಸಿಗರು ದೇಶದ ಪ್ರಮುಖ ನಗರಗಳಿಂದ ಖಜುರಾಹೊಗೆ ಬಂದು ಹೋಗಲು ನೆರವಾಗುತ್ತವೆ. ಈ ವಿಮಾನ ನಿಲ್ದಾಣದಲ್ಲಿರುವ ಸೌಲಭ್ಯಗಳು ಪ್ರಯಾಣಿಕರಿಗೆ ತೃಪ್ತಿಯನ್ನುಂಟು ಮಾಡುವ ಮಟ್ಟಿಗೆ ಇವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
17 Apr,Wed
Return On
18 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Apr,Wed
Check Out
18 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Apr,Wed
Return On
18 Apr,Thu