Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ವಿಶ್ವನಾಥ್ ದೇವಾಲಯ

ವಿಶ್ವನಾಥ್ ದೇವಾಲಯ, ಖಜುರಾಹೊ

7

ವಿಶ್ವನಾಥ್ ದೇವಾಲಯವು ಶಿವನ ದೇವಾಲಯವಾಗಿದೆ. ನೋಡುಗರನ್ನು ಮಂತ್ರಮುಗ್ಧಗೊಳಿಸುವಂತಹ ಅಮೃತಶಿಲೆಯ ಶಿವಲಿಂಗವನ್ನು ಇಲ್ಲಿ ಮುಖ್ಯದೇವರಾಗಿ ಪೂಜಿಸಲಾಗುತ್ತದೆ. ಪಶ್ಚಿಮ ದೇಗುಲಗಳ ಸಮೂಹಕ್ಕೆ ಸೇರಿದ ಈ ದೇವಾಲಯವನ್ನು ಧಂಗ ದೇವನು ಕಟ್ಟಿದನು. ಈ ದೇವಾಲಯವನ್ನು ಪಂಚಯತನ್ ದೇವಾಲಯದ ರಚನೆಯನ್ನನುಸರಿಸಿ ನಿರ್ಮಿಸಲಾಗಿದೆ. ಇದರ ಜೊತೆಗೆ ಈ ದೇಗುಲದ ನಾಲ್ಕು ಮೂಲೆಗಳಲ್ಲಿ ನಾಲ್ಕು ಗುಡಿಗಳು ಇವೆ. ಮುಖ್ಯ ದೇವಾಲಯವು ಮಧ್ಯದಲ್ಲಿ ನೆಲೆ ನಿಂತಿದೆ.

ಈ ದೇವಾಲಯದಲ್ಲಿ ಸುಮಾರು 600ಕ್ಕೂ ಅಧಿಕ ಶಿಲ್ಪಗಳನ್ನು ನಾವು ನೋಡಬಹುದು. ನೋಡುಗರನ್ನು ತನ್ಮಯಗೊಳಿಸುವಂತಹ ಬ್ರಹ್ಮದೇವನ ವಿಗ್ರಹವನ್ನು ನಾವು ಈ ದೇಗುಲದ ಒಳಭಾಗದಲ್ಲಿ ಕಾಣಬಹುದು. ಈ ಶಿಲ್ಪಕ್ಕೆ ಉತ್ತರ ಭಾಗದ ಮೆಟ್ಟಿಲುಗಳ ಮೇಲೆ ಸಿಂಹಗಳು ಮತ್ತು ದಕ್ಷಿಣ ಭಾಗದ ಮೆಟ್ಟಿಲುಗಳ ಮೇಲೆ ಆನೆಗಳು ಕಾವಲು ನಿಂತಿರುವಂತೆ ನಿಂತ ವಿಗ್ರಹಗಳು ಇದರ ಭವ್ಯತೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಇಡೀ ದೇವಾಲಯದ ಸೊಬಗೆಲ್ಲ ಅಡಗಿರುವುದು ಇದರ ಗೋಡೆಗಳ ಮೇಲೆ ಕೆತ್ತಲಾಗಿರುವ ಅನುಪಮವಾದ ಸ್ತ್ರೀಯರ ವಿಗ್ರಹಗಳ ಸೌಂದರ್ಯದಲ್ಲಿ. ಹೊರಗಿನ ಗೋಡೆಯಲ್ಲಿರುವ ಮಂತ್ರ ಮುಗ್ಧಗೊಳಿಸುವಂತಹ ಕೆತ್ತನೆಗಳು ಈ ದೇಗುಲಕ್ಕೆ ತಮ್ಮದೇ ಆದ ಮೆರಗನ್ನು ಒದಗಿಸಿವೆ. ಇಲ್ಲಿನ ಬೃಹತ್ ವೇದಿಕೆ ಮೇಲೆ 6 ಅಡಿಗಳಷ್ಟು ಎತ್ತರವಿರುವ ನಂದಿಯ ವಿಗ್ರಹವನ್ನು ನಾವು ನೋಡಬಹುದು.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon