Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಕಂಡರಿಯ ಮಹಾದೇವ್ ದೇವಾಲಯ

ಕಂಡರಿಯ ಮಹಾದೇವ್ ದೇವಾಲಯ, ಖಜುರಾಹೊ

17

ಕಂಡರಿಯ ಮಹಾದೇವ್ ದೇವಾಲಯವು ಖಜುರಾಹೊದ ಪಶ್ಚಿಮ ಸಮೂಹದ ದೇಗುಲಗಳಲ್ಲಿ ಕಂಡು ಬರುವ ಅತಿ ದೊಡ್ಡ ದೇವಾಲಯವಾಗಿದೆ. ಸಾಮಾನ್ಯ ವೇದಿಕೆಯ ಮೇಲೆ ನಿರ್ಮಾಣಗೊಂಡ ಪ್ರಥಮ ದೇವಾಲಯ ಇದಾಗಿದೆ. ಈ ದೇವಾಲಯವನ್ನು ಚಂಡೇಲ ರಾಜರು ಸುಮಾರು 1025- 1050ರಲ್ಲಿ ನಿರ್ಮಿಸಿದರೆಂದು ತಿಳಿದುಬಂದಿದೆ. ಶಿವನಿಗಾಗಿ ನಿರ್ಮಿಸಲಾಗಿರುವ ಈ ದೇವಾಲಯದಲ್ಲಿನ ಗರ್ಭಗೃಹದಲ್ಲಿ ನಾವು ಶಿವಲಿಂಗವನ್ನು ಕಾಣಬಹುದು. ಈ ದೇವಾಲಯವು ಐದು ಭಾಗಗಳ ವಾಸ್ತುಶಿಲ್ಪದ ಶೈಲಿಯನ್ನು ಒಳಗೊಂಡಿದೆ.

ಇಲ್ಲಿ ಗರ್ಭ ಗೃಹ, ಅರ್ಧಮಂಡಪ, ಪ್ರದಕ್ಷಿಣಾ ಮತ್ತು ಮಹಾ ಮಂಟಪಗಳನ್ನು ನಾವು ನೋಡಬಹುದು. ಈ ದೇವಾಲಯದ ಗೋಪುರವು ಸುಮಾರು 100 ಅಡಿ ಎತ್ತರವನ್ನು ಹೊಂದಿದೆ. ತಮ್ಮ ಅದ್ಭುತವಾದ ಕೆತ್ತನೆ ಮತ್ತು ಶಿಲ್ಪಕಲೆಯಿಂದ ಗಮನ ಸೆಳೆಯುವ ಅಸಂಖ್ಯಾತ ಶಿಲ್ಪಗಳು ಈ ದೇಗುಲದ ಸೊಬಗನ್ನು ಹೆಚ್ಚಿಸಿವೆ. ಇದರ ಜೊತೆಗೆ ಈ ದೇವಾಲಯದಲ್ಲಿ ಇಲ್ಲಿ ಮಾತ್ರವೇ ಕಾಣಸಿಗುವ, ಪ್ರತ್ಯೇಕತೆಯನ್ನು ಹೊಂದಿರುವಂತಹ ಎರಡು ಕಲ್ಲಿನ ತೋರಣಗಳು ಇವೆ. ಶಿಲ್ಪಿಗಳು ಈ ದೇಗುಲದಲ್ಲಿ ಕೆತ್ತಲಾಗಿರುವ ಶಿಲ್ಪಗಳನ್ನು ದೇವರುಗಳು, ದೇವತೆಗಳು ಮತ್ತು ಮಿಥುನ ಶಿಲ್ಪಗಳು ಎಂಬ ಮೂರು ಭಾಗಗಳಾಗಿ ವಿಭಾಗಿಸಬಹುದು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri