Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಲಕ್ಷ್ಮಣ ದೇವಾಲಯ

ಲಕ್ಷ್ಮಣ ದೇವಾಲಯ, ಖಜುರಾಹೊ

13

ಕಲ್ಲಿನಲ್ಲಿ ಕೆತ್ತಲಾಗಿರುವ ನಯನ ಮನೋಹರವಾದ ಲಕ್ಷ್ಮಣ ದೇವಾಲಯವು ವಿಷ್ಣುವಿನ ದೇವಾಲಯವಾಗಿದೆ. ಇದೊಂದು ಪ್ರಾಚೀನ ದೇವಾಲಯವಾಗಿದ್ದು, ಪಶ್ಚಿಮ ಸಮೂಹದ ದೇಗುಲಗಳ ಸಾಲಿನಲ್ಲಿ ಕಂಡು ಬರುತ್ತದೆ. ಇದನ್ನು ಕ್ರಿ.ಶ 930 ರಿಂದ 950ರ ಸುಮಾರಿಗೆ ನಿರ್ಮಿಸಲಾಗಿದೆ. ಈ ದೇವಾಲಯವು ಗತಕಾಲದ ವಾಸ್ತುಶಿಲ್ಪಕ್ಕೆ ಜೀವಂತ ಉದಾಹರಣೆಯಾಗಿ ನಿಂತಿದೆ. ಈ ದೇವಾಲಯದಲ್ಲಿ ಸುಮಾರು 600 ಹಿಂದೂ ದೇವತೆಗಳ ವಿಗ್ರಹಗಳನ್ನು ನಾವಿಲ್ಲಿ ನೋಡಬಹುದು.

ಈ ದೇವಾಲಯದ ವೇದಿಕೆಯ ಮೇಲೆ ಆನೆಗಳು ಮತ್ತು ಕುದುರೆಗಳಂತಹ ಹಲವಾರು ಸುಂದರವಾದ ವಸ್ತುಗಳ ವಿಗ್ರಹಗಳನ್ನು ಕೆತ್ತಲಾಗಿದೆ. ಈ ದೇಗುಲದ ನಾಲ್ಕು ಮೂಲೆಗಳಲ್ಲಿ ಚಿಕ್ಕ ಚಿಕ್ಕ ದೇವಾಲಯಗಳನ್ನು ನಾವು ಕಾಣಬಹುದು. ಪ್ರತಿಯೊಂದು ದೇವಾಲಯವು ಚೌಕಟ್ಟಿನಂತಹ ಬೇಲಿಯ ಕೆತ್ತನೆಯನ್ನು ಹೊಂದಿವೆ. ಈ ದೇವಾಲಯದ ಪ್ರತಿ ಶಿಲ್ಪದಲ್ಲಿಯು ಇದನ್ನು ಕೆತ್ತಿದ ಶಿಲ್ಪಿಗಳ ಜಾಣ್ಮೆಯನ್ನು ನಾವು ಸವಿಯಬಹುದು. ಈ ದೇವಾಲಯದ ಪಶ್ಚಿಮ ಭಾಗದಲ್ಲಿ ಆಭರಣಗಳನ್ನು ಧರಿಸಿರುವ ಹೆಂಗಸರ ವಿವಿಧ ಭಂಗಿಗಳ ಪರಿಪೂರ್ಣ ವಿಗ್ರಹಗಳನ್ನು ನಾವು ನೋಡಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat