Search
 • Follow NativePlanet
Share

ರೇವಾ - ಒಂದು ಪ್ರಕೃತಿದತ್ತವಾದ ಹಾಗೂ ಮಾನವ ನಿರ್ಮಿತ ಸೌಂದರ್ಯದ ಸಮ್ಮಿಶ್ರಣ

14

ರೇವಾನಗರ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿದೆ. ಈ ಸ್ಥಳವು ಜಿಲ್ಲಾ ಕೇಂದ್ರವೂ ಹೌದು. ವಿಖ್ಯಾತ ಮ್ಯೂಸಿಯಂ, ಕೋಟೆಗಳು, ಜಲಪಾತಗಳು ಮತ್ತು ಐತಿಹಾಸಿಕ ಗ್ರಾಮಗಳನ್ನು ಒಳಗೊಂಡಿರುವುದರಿಂದ ರೇವಾ ಪ್ರಸಿದ್ದವಾಗಿರುತ್ತದೆ. ಇಲ್ಲಿ ಪ್ರಕೃತಿದತ್ತವಾದ ಮತ್ತು ಮಾನವ ನಿರ್ಮಿತ ಸೌಂದರ್ಯಗಳಲ್ಲದೇ ಇಲ್ಲಿಯ ಬಿಳಿ ಹುಲಿಗಳೂ ಪ್ರಖ್ಯಾತಿಯನ್ನು ಹೊಂದಿದೆ. ರೇವಾ ನಗರವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ.ಅವು ಯಾವುದೆಂದರೆ ಬಿಂಜ್ ಪಹಾರ್, ಲೋವರ್ ನಾರ್ಥರ್ನ್ ಪ್ಲೈನ್(ಕೆಳ ಸ್ತರದ ಉತ್ತರ ಭೂಪ್ರದೇಶ), ಕೈಮೋರ್ ಮತ್ತು ರೇವಾ ತಪ್ಪಲು.

ರೇವಾ ಸುತ್ತಮುತ್ತವಿರುವ ಪ್ರವಾಸಿ ತಾಣಗಳು

ಬಿಳಿಹುಲಿಗಳ ತಾಣಗಳ ಜೊತೆಗೆ ರೇವ ಪ್ರವಾಸೋದ್ಯಮವು ಕೆಲವು ಕುತೂಹಲಕಾರಿಯಾದ ಸ್ಥಳಗಳನ್ನೂ ಕೂಡಾ ನಮಗೆ ಪರಿಚಯಿಸುತ್ತದೆ. ಅದು ಕೆಳ ಕಂಡ ಸ್ಥಳಗಳನ್ನು ಒಳಗೊಂಡಿದೆ. ಬಾಗೇಲ್ ಮ್ಯೂಸಿಯುಂ, ರೇವಾ ಕೋಟೆ, ಪಿಲಿಕೋತಿ, ಗೋವಿಂದಗಡ್ ಕೋಟೆ, ಗೋವಿಂದಗಡ್ ಅರಮನೆ, ವೆಂಕಟ್ ಭವನ್, ರಾಣಿ ತಾಲಾಬ್, ಎಪಿಎಸ್ ವಿಶ್ವವಿದ್ಯಾಲಯದ ಮೈದಾನ, ಭೈರೂಮ್ ಬಾಬಾ ಪುಥ್ಥಳಿ, ರಾಣಿಪುರ್ ಕಾರ್ಚುಯುಲಿಯಾನ್, ಕಿಯೋಂತಿ ಜಲಪಾತ, ಪೂರ್ವ ಜಲಪಾತ ಮತ್ತು ಚಾಚಾಯ್ ಜಲಪಾತ.

ರೇವಾದ ಇತಿಹಾಸದ ಸುತ್ತ ಒಂದು ನೋಟ

ಈ ನಗರವು ರೇವಾ ಎಂಬ ಹೆಸರನ್ನು ಜಿಲ್ಲೆಯ ಹೆಸರಿನಿಂದಲೆ ಪಡೆದುಕೊಂಡಿದೆ. ಅದಕ್ಕಿಂತ ಹೆಚ್ಚಾಗಿ ರೇವಾ ಅನ್ನುವುದು ನರ್ಮದಾ ನದಿಯ ಎರಡನೇ ಹೆಸರಾಗಿದೆ. ಪುರಾತನ ಹೇಳಿಕೆಗಳ ಪ್ರಕಾರ, ಈಗಿರುವ ಜಿಲ್ಲೆಗಳ ವಿಭಾಗಗಳು ಕ್ರಿ.ಶ ಮೂರನೇ ಶತಮಾನದ ಅವಧಿಯಲ್ಲಿ ಮೌರ್ಯ ಸಾಮ್ರಾಜ್ಯದವರಿಂದ ಆಳಲ್ಪಟ್ಟಿತ್ತು ಎನ್ನುವ ಪ್ರತೀತಿಯಿದೆ. ಅಲ್ಲದೆ, ಮೊದಲ ಬಿಳಿ ಹುಲಿಯನ್ನು ರೇವಾದಲ್ಲಿಯೇ ಕಂಡುಹಿಡಿಯಲಾಯಿತೆಂಬ ಪ್ರತೀತಿ ಕೂಡಾ ಇದೆ.

ರೇವಾನಗರವನ್ನು ತಲುಪುವುದು ಹೇಗೆ

ಪ್ರವಾಸಿಗರು ರೇವಾ ನಗರವನ್ನು ರಸ್ತೆಸಾರಿಗೆ, ವಾಯು ಸಾರಿಗೆ ಹಾಗೂ ರೈಲ್ವೆ ಮೂಲಕ ತಲುಪುವ ಅನುಕೂಲಗಳಿವೆ. ಹತ್ತಿರವಿರುವ ವಿಮಾನನಿಲ್ದಾಣ ಖುಜರಾಹೋ ವಿಮಾನನಿಲ್ದಾಣ. ಇದು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರವಾಸಿಗರು ರೈಲ್ವೆ ಮೂಲಕವೂ ರೇವಾ ರೈಲ್ವೆ ನಿಲ್ದಾಣಕ್ಕೆ ತಲುಪಬಹುದು. ಖುಜರಾಹೋ ನಗರದಿಂದ ರೇವಾ ನಗರಕ್ಕೆ ಬಸ್ ಮೂಲಕವೂ ತಲುಪಬಹುದು.

ರೇವಾ ನಗರಕ್ಕೆ ಭೇಟಿ ನೀಡಲು ಯಾವ ಸಮಯ ಸೂಕ್ತ

ಮುಂಗಾರು ಸಮಯದಲ್ಲಿ ಈ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡುವುದು ಅತ್ಯಂತ ಸೂಕ್ತ.  ಜುಲೈನಿಂದ ಸೆಪ್ಟಂಬರ್ ಅವಧಿ ಮುಂಗಾರು ಸಮಯವಾಗಿರುವುದರಿಂದ ಈ ಸಮಯದಲ್ಲಿ ರೇವಾಗೆ ಭೇಟಿ ನೀಡುವುದು ಅತ್ಯಂತ ಸೂಕ್ತ.

ರೇವಾ ಪ್ರಸಿದ್ಧವಾಗಿದೆ

ರೇವಾ ಹವಾಮಾನ

ರೇವಾ
35oC / 95oF
 • Sunny
 • Wind: WSW 17 km/h

ಉತ್ತಮ ಸಮಯ ರೇವಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ರೇವಾ

 • ರಸ್ತೆಯ ಮೂಲಕ
  ಪ್ರವಾಸಿಗರು ರೇವಾದಿಂದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲು ಬಸ್ ಸೇವೆ ಉಪಯೋಗಿಸಿಕೊಳ್ಳಬಹುದು. ಬಸ್ ಪ್ರಯಾಣದ ದರ ರೇವಾದಿಂದ ಖುಜರಾಹೋಗೆ 120 ರೂಪಾಯಿಯಿಂದ 130 ರೂಪಾಯಿವರೆಗಿರುತ್ತದೆ. ರೇವಾ ನಗರಕ್ಕೆ ಕಾರಿನ ಮೂಲಕವೂ ತಲುಪಬಹುದು. ಖುಜರಾಹೋ ನಗರದಿಂದ ರೇವಾ ತಲುಪಲು 2.10 ಘಂಟೆ ಬೇಕಾಗುತ್ತದೆ ಮತ್ತು ಈ ಎರಡು ನಗರಗಳ ನಡುವಣ ಅಂತರ 169 ಕಿ.ಮೀ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ರೇವಾ ರೈಲ್ವೆ ನಿಲ್ದಾಣವು ರೇವಾ ನಗರದಿಂದ 5.8 ಕಿ.ಮೀ ದೂರದಲ್ಲಿದೆ. ಮಧ್ಯಪ್ರದೇಶದ ವಿವಿಧ ಭಾಗಗಳಿಂದ ಮತ್ತು ದೇಶದ ಇತರ ಭಾಗಗಳಿಂದ ರೈಲುಗಳು ಈ ನಿಲ್ದಾಣದಿಂದ ಹಾದುಹೋಗುತ್ತದೆ. ಪ್ರವಾಸಿಗರು ಭೋಪಾಲ್, ನವದೆಹಲಿಯಿಂದ ಜಬಲ್ಪುರಕ್ಕೆ ಹೋಗುವ ರೈಲಿನ ಮೂಲಕ ರೇವಾ ನಗರಕ್ಕೆ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಪ್ರವಾಸಿಗರು ರೇವಾ ನಗರವನ್ನು ವಿಮಾನದ ಮೂಲಕ ತಲುಪ ಬೇಕಾದರೆ ಖುಜುರಾಹೋ ವಿಮಾನ ನಿಲ್ದಾಣದಲ್ಲಿ ಇಳಿಯ ಬೇಕು. ಖುಜುರಾಹೋದಿಂದ ಪ್ರವಾಸಿಗರು ಬಸ್ ಮೂಲಕ ರೇವಾ ತಲುಪಬಹುದು. ಅಲ್ಲದೇ, ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಮೂಲಕವೂ ರೇವಾ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 Oct,Wed
Return On
24 Oct,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 Oct,Wed
Check Out
24 Oct,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 Oct,Wed
Return On
24 Oct,Thu
 • Today
  Rewa
  35 OC
  95 OF
  UV Index: 9
  Sunny
 • Tomorrow
  Rewa
  31 OC
  88 OF
  UV Index: 9
  Sunny
 • Day After
  Rewa
  33 OC
  91 OF
  UV Index: 9
  Sunny

Near by City