ಪನ್ನಾ - ವಜ್ರಗಳ ನಗರ

ಪನ್ನಾ ಭಾರತದ ಮಧ್ಯಪ್ರದೇಶ ರಾಜ್ಯದಲ್ಲಿದ್ದು ವಜ್ರಗಳ ಗಣಿಗಳಿಗೆ ಹೆಸರುವಾಸಿಯಾಗಿದೆ. ಈ ವಜ್ರಗಳನ್ನು  ಪ್ರತೀ ತಿಂಗಳಾಂತ್ಯದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟರ್ ಸಮ್ಮುಖದಲ್ಲಿ ಹರಾಜು ಹಾಕಲಾಗುವುದು. ಇದಲ್ಲದೇ ಈ ನಗರದಲ್ಲಿ ಹಿಂದೂ ಸಂಪ್ರದಾಯಕ್ಕೆ ಪ್ರಾಮುಖ್ಯತೆಯಿರುವ ಹಲವು ಸಂಗತಿಗಳೂ ಇವೆ. ಈ ಸ್ಥಳದಲ್ಲಿಯೆ ಮಹಾಮತಿ ಪ್ರನ್ನಥ್ ಅವರು ಮನುಷ್ಯನ ಆತ್ಮಸಾಕ್ಷಾತ್ಕಾರದ ಕುರಿತು ಸಂದೇಶವನ್ನು ಭೋದಿಸಿದ್ದರು. ಮಹಾಮತಿಯವರು ಪನ್ನಾದಲ್ಲಿ ತಮ್ಮ ಹನ್ನೊಂದು ವರ್ಷ ಕಳೆದ ಬಳಿಕ ಇಲ್ಲಿಯೆ ಸಮಾಧಿ ತೆಗೆದುಕೊಳ್ಳಲು ನಿರ್ಧರಿಸಿದ್ದರು ಎನ್ನುವುದು ನಂಬಿಕೆ.

ಪನ್ನಾ ಸುತ್ತಮುತ್ತವಿರುವ ಪ್ರೇಕ್ಷಣೀಯ ಸ್ಥಳಗಳು

ಪನ್ನಾ ಪ್ರವಾಸೋದ್ಯಮಕ್ಕೆ ಪ್ರಮುಖವಾಗಿ ಪ್ರವಾಸಿಗರು ಹರಿದು ಬರುವುದು ಪನ್ನಾ ರಾಷ್ಟೀಯ ಉದ್ಯಾನವನ, ಪಾಂಡವ ಗುಹೆಗಳನ್ನು ನೋಡುವುದಕ್ಕಾಗಿ. ಜಲಪಾತದ ತಾಣವಾಗಿದ್ದರೂ ಸಹ ಈ ನಗರ ಪ್ರಸಿದ್ದಿಯಾಗಿದ್ದು ರಾಷ್ಟೀಯ ಉದ್ಯಾನವನದ ಮೂಲಕ. ಪ್ರಕೃತಿ ಸೌಂದರ್ಯ ಬಯಸುವವರು ಮಧ್ಯಪ್ರದೇಶದ ಈ ನಗರದ ಮೂಲಕ ಮನೋರಂಜನೆ ಅನುಭವಿಸಬಹುದು, ಯಾಕೆಂದರೆ ಉದ್ಯಾನವನ ಮತ್ತು ಸುಂದರವಾದ ಪಿಕ್ನಿಕ್ ಸ್ಥಳಗಳು ನಗರವನ್ನು ಆವರಿಸಿಕೊಂಡಿದೆ.

ಪನ್ನಾ - ಹುಲಿಗಳ ತವರೂರು

ಪನ್ನಾ ರಾಷ್ಟೀಯ ಉದ್ಯಾನವನ ಪನ್ನಾ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆ ಯಾಕೆಂದರೆ ಇಲ್ಲಿನ ವನ್ಯಜೀವಿ ಧಾಮ ಅತ್ಯಂತ ವಿರಳವಾಗಿ ಕಾಣಸಿಗುವ ಹುಲಿಗಳನ್ನು ಹೊಂದಿದೆ. ಈ ಉದ್ಯಾನವನವು ಖುಜರಾಹೋಕ್ಕೆ ಹತ್ತಿರದಲ್ಲಿದ್ದು ರಿಸಾರ್ಟ್ಸ್ ಮತ್ತು ಹೋಟೆಲ್ ಗಳು ರಾತ್ರಿ ತಂಗಲು ತುಂಬಾ ಸಂಖ್ಯೆಯಲ್ಲಿವೆ.

ಪನ್ನಾ ತಲುಪುವುದು ಹೇಗೆ?

ಪನ್ನಾ ರಾಜ್ಯದ ಇತರ ನಗರ ಮತ್ತು ಪಟ್ಟಣಗಳಿಗೆ ಉತ್ತಮವಾದ ಸಂಪರ್ಕವನ್ನು ಹೊಂದಿದೆ.

ಪನ್ನಾ ವಾತಾವರಣ

ಪನ್ನಾದ ಭೌಗೋಳಿಕ ಪ್ರದೇಶ ಉಪ ಉಷ್ಣವಲಯ ವಾತಾವರಣವಿರುವುದರಿಂದ, ಅಕ್ಟೋಬರ್ ಮತ್ತು ಎಪ್ರಿಲ್ ತಿಂಗಳ ಮಧ್ಯೆ ಇಲ್ಲಿ ಪ್ರಯಾಣಿಸುವುದು ಕನಸಿನ ಲೋಕದಲ್ಲಿ ತೇಲುವಂತೆ ಮಾಡುತ್ತದೆ.

Please Wait while comments are loading...