Search
  • Follow NativePlanet
Share
ಮುಖಪುಟ » ಸ್ಥಳಗಳು » ಪನ್ನಾ » ಆಕರ್ಷಣೆಗಳು » ಕೆನ್ ಘಡಿಯಾಲ್ ಪ್ರಾಣಿಧಾಮ

ಕೆನ್ ಘಡಿಯಾಲ್ ಪ್ರಾಣಿಧಾಮ, ಪನ್ನಾ

1

ಕೆನ್ ಘಡಿಯಾಲ್ ಪ್ರಾಣಿಧಾಮ ಒಂದು ಅತಿ ಮುಖ್ಯ ಪ್ರಾಣಿಧಾಮವಾಗಿದ್ದು, ಇದನ್ನು ಭಾರತೀಯ ಘಡಿಯಾಲ್ (ಹಿಂದಿಯಲ್ಲಿ ಘಡಿಯಾಲ್ ಎಂದರೆ ಲಂಬವಾದ ಮುಖವುಳ್ಳ ಮೊಸಳೆ)ಳನ್ನು ರಕ್ಷಿಸುವ ಮೂಲ ಉದ್ದೇಶದಿಂದ ಕಟ್ಟಲಾಗಿದೆ. ಯಾಕೆಂದರೆ ಪ್ರಸ್ತುತ ಈ ಮೊಸಳೆಗಳ ಸಂತತಿ ಅತಿ ಬೇಗವಾಗಿ ಅಪಾಯಕ್ಕೊಳಪಟ್ಟಿರುವುದರಿಂದ ಇದನ್ನು ಸ್ಥಾಪಿಸಲಾಗಿದೆ. ಇದು ಪನ್ನಾ ನಗರಕ್ಕೆ ಸಮೀಪದಲ್ಲಿದೆ. ಈ ಪ್ರಾಣಿಧಾಮವು ಸುತ್ತಮುತ್ತ ದಟ್ಟ ಅರಣ್ಯದಿಂದ ಆವೃತವಾಗಿದ್ದು, ಇದರ ಸುತ್ತ 45 ಕಿಲೋಮೀಟರ್ ಉದ್ದದ ಕೆನ್ ನದಿ ಹರಿಯುತ್ತದೆ. ಪ್ರಮುಖವಾಗಿ ಹೇಳುವುದಾದರೆ, ಈ ಪ್ರಾಣಿಧಾಮವು ಖುದ್ದರ್ ಮತ್ತು ಕೆನ್ ಎರಡು ನದಿಗಳ ಸಂಗಮ.

ಈ ಪ್ರಾಣಿಧಾಮವು 1985ರಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಯಿತು. ಇಲ್ಲಿ ಎಂಟು ಮೀಟರ್ ಉದ್ದಕ್ಕೆ ಬೆಳೆಯುವ ಮೊಸಳೆಗಳ ಹೊರತಾಗಿ ಇತರೆ ಅನೇಕ ಸರೀಸೃಪಗಳನ್ನೂ ಕಾಣಬಹುದಾಗಿದೆ. ಮರಳಿನ ನದಿ ತಟದಲ್ಲಿ ಚಿಂಕಾರ, ಚಿತಾಲ್, ಕಾಡುಹಂದಿ, ನವಿಲು, ಕಾಡೆಮ್ಮೆಗಳನ್ನೂ ಕಾಣಬಹುದು. ಪ್ರವಾಸಿಗರು ತಮ್ಮ ಮಕ್ಕಳ ಜೊತೆ ಈ ಪ್ರಾಣಿಧಾಮಕ್ಕೆ ಭೇಟಿ ನೀಡಲೇ ಬೇಕಾದ ಸ್ಥಳ ಇದಾಗಿದ್ದು, ಯಾಕೆಂದರೆ ಈ ಪ್ರಾಣಿಧಾಮದ ಭೇಟಿ ಮೂಲಕ ಮಕ್ಕಳು ಕಲಿಯುವ ಮತ್ತು ಮನೋರಂಜಿಸುವ ಸಾಕಷ್ಟು ಅವಕಾಶಗಳಿರುತ್ತದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಎಲ್ಲಾ ದಿನಗಳಲ್ಲಿ ಪ್ರವಾಸಿಗರಿಗೆ ಇದು ತೆರೆದಿರುತ್ತದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed