ದಿನ | ಹೊರನೋಟ | ಗರಿಷ್ಠ | ಕನಿಷ್ಠ |
Monday 06 May | ![]() |
31 ℃ 87 ℉ | 42 ℃108 ℉ |
Tuesday 07 May | ![]() |
31 ℃ 87 ℉ | 42 ℃108 ℉ |
Wednesday 08 May | ![]() |
32 ℃ 90 ℉ | 43 ℃110 ℉ |
Thursday 09 May | ![]() |
32 ℃ 90 ℉ | 43 ℃109 ℉ |
Friday 10 May | ![]() |
31 ℃ 89 ℉ | 42 ℃108 ℉ |
ಪನ್ನಾ ನಗರಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅಕ್ಟೋಬರ್, ನವೆಂಬರ್, ಫೆಬ್ರವರಿ, ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳು. ಪನ್ನಾ ಹುಲಿ ಸಂರಕ್ಷಣಾ ವನ್ಯಧಾಮವೂ ಈ ಸಮಯದಲ್ಲಿ ಪ್ರವಾಸಿಗರಿಗೆ ತೆರೆದಿರುತ್ತದೆ. ವಾತಾವರಣ ಉಲ್ಲಸಿತವಾಗಿದ್ದು ಹುಲಿ ಮತ್ತು ಇತರ ಪ್ರಾಣಿಗಳ ಸಂಚಾರವನ್ನು ನೋಡಿ ಆನಂದಿಸಬಹುದು. ಈ ಸಮಯದಲ್ಲಿ ಪನ್ನಾಗೆ ಪ್ರಯಾಣಿಸುವುದು ಸೂಕ್ತ, ಯಾಕೆಂದರೆ ತೀವ್ರ ಸೆಖೆ ಅಥವಾ ಚಳಿಯ ತೊಂದರೆ ಅನುಭವಿಸ ಬೇಕಾಗಿಲ್ಲ.
ಉಪ ಉಷ್ಣಾಂಶದ ಪ್ರಭಾವಿರುವುದರಿಂದ ಪನ್ನಾದಲ್ಲಿ ಬೇಸಿಗೆಯಲ್ಲಿ ತೀವ್ರ ಸೆಖೆ ಇರುತ್ತದೆ. ಅತ್ಯಧಿಕ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಮೇ ತಿಂಗಳಲ್ಲಿರುತ್ತದೆ. ಬೇಸಿಗೆ ಇಲ್ಲಿ ಮಾರ್ಚ್ ಮಧ್ಯ ಭಾಗದಿಂದ ಜೂನ್ ಮಧ್ಯ ಭಾಗದವರೆಗಿರುತ್ತದೆ. ಬಿಸಿಗಾಳಿಯಿಂದ ಹಲವು ಜೀವಗಳೂ ಬಲಿಯಾದ ಬಗ್ಗೆ ವರದಿಯೂ ಆದ ಸಾಕಷ್ಟು ಉದಾಹಾಣೆಗಳಿವೆ.
ಮಳೆಗಾಲ ಜೂನ್ ಮಧ್ಯ ಭಾಗದಿಂದ ಆರಂಭವಾಗಿ ಸೆಪ್ಟಂಬರ್ ಮಧ್ಯ ಭಾಗದವರೆಗೂ ಸಾಗುತ್ತದೆ. ಸಾಧಾರಣದಿಂದ ತೀವ್ರವಾಗಿ ಮಳೆ ಹೆಚ್ಚಾಗಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ವರದಿಯಾಗುತ್ತದೆ. ತೀವ್ರ ಮಳೆಯಿಂದಾಗಿ ರಸ್ತೆಗಳು ಹದೆಗೆಟ್ಟಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತದೆ. ಹಾಗಾಗಿ, ಈ ಸಮಯದಲ್ಲಿ ಪನ್ನಾಗೆ ಭೇಟಿ ನೀಡಲು ಸೂಕ್ತ ಸಮಯವಲ್ಲ.
ನವೆಂಬರ್ ಕೊನೆಯಲ್ಲಿ ಚಳಿಗಾಲ ಆರಂಭವಾಗಿ ಡಿಸೆಂಬರ್ ಮತ್ತು ಜನವರಿಯಲ್ಲಿ ತೀವ್ರ ಚಳಿಯು ಇರುತ್ತದೆ. ಈ ಸಮಯದಲ್ಲಿ ಕೆಲವೊಮ್ಮೆ ತಾಪಾಂಶ ಜೀರೋ ಡಿಗ್ರಿಗೂ ಇಳಿಯುವ ಸಾಧ್ಯತೆಯಿದೆ. ಚಳಿಗಾಲದ ಸಮಯದ ಮಧ್ಯಾಹ್ನ ಉಲ್ಲಸಿತ ವಾತಾವರಣವಿದ್ದರೆ, ರಾತ್ರಿ ಕೊರೆಯುವ ಚಳಿಯ ವಾತಾವರಣ ವಿರುತ್ತದೆ. ಹಾಗಾಗಿ ಚಳಿಗಾಲದಲ್ಲೂ ಇಲ್ಲಿಗೆ ಪ್ರವಾಸ ಮಾಡುವುದು ಸೂಕ್ತವಲ್ಲ, ಹಾಗಾಗಿ ಫೆಬ್ರವರಿ ಅಂತ್ಯದಲ್ಲಿ ಇಲ್ಲಿಗೆ ಪ್ರಯಾಣ ಬೆಳೆಸಬಹುದು.