Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಚಿತ್ರಗುಪ್ತ ದೇವಾಲಯ

ಚಿತ್ರಗುಪ್ತ ದೇವಾಲಯ, ಖಜುರಾಹೊ

6

ಚಿತ್ರಗುಪ್ತ ದೇವಾಲಯವು ಅತ್ಯಂತ ಹಳೆಯ ದೇವಾಲಯವಾಗಿದೆ. 11 ಶತಮಾನದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವನ್ನು ಸೂರ್ಯನಿಗಾಗಿ ನಿರ್ಮಿಸಲಾಗಿದೆ. ಏಳು ಅಶ್ವಗಳ ಮೇಲೆ ಸವಾರಿ ಮಾಡಿಕೊಂಡು ಬರುತ್ತಿರುವ ಸೂರ್ಯನ ವಿಗ್ರಹವು ಈ ದೇವಾಲಯದ ಪ್ರಮುಖ ಆಕರ್ಷಣೆಯಾಗಿದೆ. ಈ ದೇಗುಲದ ಗೋಡೆಗಳು ಅತ್ಯಂತ ಸೂಕ್ಷ್ಮವಾದ ಕೆತ್ತನೆಗಳಿಂದ ಕೂಡಿದೆ. ಅವುಗಳಲ್ಲಿ ಪರಿಪೂರ್ಣವಾಗಿ ಕೆತ್ತಲಾಗಿರುವ ಸುರ ಸುಂದರಿಯರ ಶಿಲ್ಪಗಳು, ವಿಷ್ಣುವಿನ ಹನ್ನೊಂದು ಮುಖಗಳನ್ನು ಹೊಂದಿರುವ ವಿಗ್ರಹ ಮತ್ತು ಮಧುರ ಪ್ರೇಮವನ್ನು ಅಭಿವ್ಯಕ್ತಿಸುತ್ತಿರುವ ದಂಪತಿಗಳ ಶಿಲ್ಪಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಸೇರಿವೆ.

ಈ ದೇವಾಲಯದಲ್ಲಿ ಮೂರು ಅಂತಸ್ತಿನ ಬೃಹತ್ ಕಲ್ಯಾಣಿಯಿದೆ. ಇದು ಸಹ ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಹೊರಗಿನ ಗೋಡೆಗಳಲ್ಲಿ ದೇವರುಗಲ, ಹೆಂಗಸರ ಮತ್ತು ಇನ್ನಿತರ ವಸ್ತುಗಳ ಸುಂದರ ಕೆತ್ತನೆಗಳನ್ನು ಮಾಡಿದ್ದಾರೆ. ದೇಗುಲದ ಪ್ರವೇಶದ್ವಾರದಲ್ಲಿ ಸೂರ್ಯ ದೇವನ ಸಣ್ಣ ಪ್ರತಿಮೆಯನ್ನು ಕೆತ್ತಲಾಗಿದೆ. ಈ ದೇಗುಲದ ಅದ್ಭುತವಾದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat