ಗ್ವಾಲಿಯರ್ - ಒಂದು ಪಾರಂಪಾರಿಕ ನಗರ

ಪಾರಂಪಾರಿಕ ನಗರವೆಂದು ಹೆಸರುವಾಸಿಯಾಗಿರುವ ಗ್ವಾಲಿಯರ್ ನಗರವು ಆಗ್ರಾದ ದಕ್ಷಿಣ ಭಾಗದಿಂದ 122  ಕೀಲೋ ಮೀಟರ ದೂರದಲ್ಲಿದ್ದು, ಮಧ್ಯ ಪ್ರದೇಶದ ಪ್ರವಾಸಿ ರಾಜಧಾನಿ ಎಂದೇ ಹೆಸರಾಗಿದೆ. ಅಷ್ಟೇ ಅಲ್ಲ, ಮಧ್ಯ ಪ್ರದೇಶದ ನಾಲ್ಕನೇಯ ಅತಿ ದೊಡ್ಡ ನಗರವು ಹೌದು. ಇದೊಂದು ಪ್ರಸಿದ್ಧ ಐತಿಹಾಸಿಕ ನಗರವಾಗಿದ್ದು ತನ್ನ ದೇವಸ್ಥಾನಗಳು, ಪ್ರಾಚೀನ ಸ್ಥಳಗಳು, ಆಕರ್ಷಕ ಸ್ಮಾರಕಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಇದು ಪ್ರವಾಸಿಗರನ್ನು ತನ್ನ ಐತಿಹಾಸಿಕ ವೈಭವದ ದಿನಗಳೆಡೆಗೆ ಕರೆದುಕೊಂಡು ಹೋಗುತ್ತದೆ. "ಗ್ವಾಲಿಯರ್ ನಗರವನ್ನು ಹಿಂದು ಕೋಟೆಗಳ ಕಂಠಿಹಾರದಲ್ಲಿ ಒಂದು ಮುತ್ತು" ಎಂದು ಕರೆಯುತ್ತಾರೆ. ಈ ನಗರವು ತನ್ನ ಗ್ವಾಲಿಯರ್ ಕೋಟೆಗೆ ಪ್ರಸಿದ್ಧವಾಗಿದೆ. ಇದು ಉತ್ತರ ಭಾರತದ ಅನೇಕ ಪ್ರಸಿದ್ಧ ರಾಜವಂಶಗಳಿಗೆ ಪ್ರಮುಖ ಆಡಳಿತ ಕೇಂದ್ರವಾಗಿತ್ತು.

ಗ್ವಾಲಿಯರ್ : ಐತಿಹಾಸಿಕತೆಯ ಮೆರುಗಿನಲ್ಲಿ ಆಧುನಿಕತೆ

ಗ್ವಾಲಿಯರ್ ಒಂದು ಪ್ರಸಿದ್ಧ ನಗರವಾಗಿದ್ದು, ಇಲ್ಲಿ ಐತಿಹಾಸಿಕತೆಯ ಮೆರುಗಿನಲ್ಲಿ ಆಧುನಿಕತೆಯನ್ನು ಕಾಣಬಹುದಾಗಿದೆ. ಇಲ್ಲಿ ಕಂಡು ಬರುವ ಐತಿಹಾಸಿಕ ಸ್ಮಾರಕಗಳು, ಕೋಟೆಗಳು,ಮತ್ತು ವಸ್ತು ಸಂಗ್ರಹಾಲಯಗಳು  ನಮ್ಮನ್ನು ಐತಿಹಾಸಿಕ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ ಮತ್ತು ಇದೊಂದು ಬೆಳೆಯುತ್ತಿರುವ ಕೈಗಾರಿಕಾ ನಗರವಾಗಿದೆ. ಆಧುನಿಕ ಭಾರತದಲ್ಲಿ ಗ್ವಾಲಿಯರ್ ನಗರವು ಒಂದು ವಿಶೇಷ ಸ್ಥಾನವನ್ನು ಪಡೆದಿದೆ.

ಗ್ವಾಲಿಯರ್ ನಗರದ ಕಥೆ

ಕ್ರಿ.ಶ ಎಂಟನೇಯ ಶತಮಾನದಲ್ಲಿ ಸೂರಜ ಸೇನ ಎಂಬ ರಾಜನು ಗ್ವಾಲಿಯರ್ ನಗರವನ್ನು ಸ್ಥಾಪಿಸಿದನು ಎಂದು ಹೇಳಲಾಗುತ್ತದೆ. ’ಗ್ವಾಲಿಪ’ ಎಂಬ ಸಂತನ ನೆನೆಪಿಗಾಗಿ ಅವನು ಈ ನಗರಕ್ಕೆ ಗ್ವಾಲಿಯರ್ ಎಂದು ನಾಮಕರಣ ಮಾಡಿದನು. ಗ್ವಾಲಿಪ ಸಂತನು ಸೂರಜ ಸೇನ ದೊರೆಯ ಕುಷ್ಟ ರೋಗವನ್ನು ನಿವಾರಿಸಿದ್ದನು. ನಿಮಗೆ ಇತಿಹಾಸದ ಪುಟಗಳಲ್ಲಿ ಗ್ವಾಲಿಯರ್ ನಗರದ ಕುರಿತು ಮಾಹಿತಿಯು ಕ್ರಿ.ಶ ಆರನೇಯ ಶತಮಾನದ ನಂತರ ಕಂಡು ಬರುತ್ತದೆ.

ಈ ನಗರವು ಕ್ರಿ.ಶ ಆರನೇಯ ಶತಮಾನದಲ್ಲಿ ಹೂಣರಿಂದ ಆಳಲ್ಪಟ್ಟಿತ್ತು. ನಂತರ ಇದು ಕನೌಜಿನ ಗುಜ್ಜರ ಪ್ರಾರಿಹಾರರ ಕೈ ವಶವಾಯಿತು. ಇವರು ಇದನ್ನು ಕ್ರಿ.ಶ 923 ರವರೆಗೆ ಇದನ್ನು ಆಳಿದರು. ನಂತರ ಕ್ರಿ.ಶ ಹತ್ತನೇ ಶತಮಾನದವರೆಗೆ ಕಚವಾ ರಜಪೂತರು ಇದನ್ನು ಆಳಿದರು.  1196 ರಲ್ಲಿ ದೆಹಲಿ ಸುಲ್ತಾನನಾದ ಕುತುಬ-ಉದ-ದಿನ್ ಐಬಕ್ ನು ಈ ನಗರವನ್ನು ವಶಪಡಿಸಿಕೊಂಡನು. ನಂತರ ಇದನ್ನು ಅವನ ನಂತರ ಬಂದ  ಷಮಸುದ್-ದಿನ್ ಅಲ್ತಮಷ್ ನು 1232 ರವರೆಗೆ ಆಳಿದನು. ಮೊಘಲರು ಕೂಡ ಕೆಲವು ದಿನಗಳ ಕಾಲ ಗ್ವಾಲಿಯರ್ ನಗರವನ್ನು ಆಳಿದರು.  ಮುಂದೆ 1553 ರಲ್ಲಿ ವಿಕ್ರಮಾದಿತ್ಯನು ಗ್ವಾಲಿಯರ್ ನಗರವನ್ನು ಗೆದ್ದುಕೊಂಡನು.

ಇವನೇ ಮುಂದೆ 1556 ರಲ್ಲಿ ಮೊಘಲ ದೊರೆ ಅಕ್ಬರನನ್ನು ಸೋಲಿಸುವ ಮೂಲಕ ಬಹುತೇಕ ಉತ್ತರ ಭಾಗದ ಪ್ರದೇಶಗಳನ್ನು ಗೆದ್ದುಕೊಂಡನು. ಮುಂದೆ 18 ಮತ್ತು 19 ನೇ ಶತಮಾನದಲ್ಲಿ ಮರಾಠರ ಒಂದು ವಿಭಾಗವಾದ ಸಿಂಧರು ಬ್ರಿಟಿಷರ ಸಹಕಾರದೊಂದಿಗೆ ಗ್ವಾಲಿಯರ್ ನಗರವನ್ನು ಆಳಿದರು. 1780 ರಲ್ಲಿ ಬ್ರಿಟಿಷರು ಈ ನಗರದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸಿದರು. ಮರಾಠ ವಂಶದವಳಾದ ಝಾನ್ಸಿ ರಾಣಿ ಲಕ್ಷ್ಮಿ ಬಾಯಿಯು 1857 ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಪ್ರಥಮ ಸ್ವಾತಂತ್ರ್ಯ ದಂಗೆಯಲ್ಲಿ  ಹೋರಾಡಿ , ದೇಶಕ್ಕಾಗಿ ತನ್ನ ಪ್ರಾಣವನ್ನು ಅರ್ಪಿಸಿದ  ಪುಣ್ಯ ಸ್ಥಳ ಗ್ವಾಲಿಯರ್ ನಗರ.

ಗ್ವಾಲಿಯರ್ ನ ಪ್ರವಾಸೋದ್ಯಮ

ಗ್ವಾಲಿಯರ್‌ನ ಪ್ರವಾಸೋದ್ಯಮವು ತನ್ನ ಪ್ರವಾಸಿಗರಿಗಾಗಿ ಅತ್ಯಂತ ಆಕರ್ಷಕ ಸ್ಥಳಗಳನ್ನು ಹೊಂದಿದೆ. ಗ್ವಾಲಿಯರ್ ಕೋಟೆ, ಪೂಲ ಬಾಗ್, ಸೂರಜ ಕುಂಡ, ಹಾಥಿ ಪೂಲ, ಮನಮಂದಿರ ಅರಮನೆ, ಜಯ ವಿಲಾಸ ಮಹಲ್ ಹೀಗೆ ಅನೇಕ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸಿ ತಮ್ಮ ಕಡೆ ವಶಕರಿಸಿಕೊಳ್ಳುತ್ತವೆ.  ಅಷ್ಟೇ ಅಲ್ಲದೇ ಇದು ಭಾರತದ ಪ್ರಸಿದ್ಧ ಸಂಗೀತ ಗಾರನಾದ ತಾನಸೇನನ ಜನ್ಮ ಸ್ಥಳವಾಗಿದೆ. ಇವರ ಸ್ಮರಣೆಗಾಗಿ ಪ್ರತಿವರ್ಷ ಗ್ವಾಲಿಯರ್‌‌‌‌‌ನಲ್ಲಿ ತಾನಸೇನ ಸಂಗೀತ ಉತ್ಸವವನ್ನು ಏರ್ಪಡಿಸಲಾಗುತ್ತದೆ. ಗ್ವಾಲಿಯರ್ ಘರಾನಾ ಇದೊಂದು ಹಿಂದುಸ್ತಾನಿ ಸಂಗೀತದ ಪ್ರಸಿದ್ಧ ಖಯಾಲ್ ಘರಾನಾ ಶೈಲಿ  ಆಗಿದ್ದು, ಈ ರಾಗಕ್ಕೆ ಗ್ವಾಲಿಯರ್ ನಗರದ ಹೆಸರನ್ನೇ ಇಡಲಾಗಿದೆ. ಈ ನಗರವು ಸಿಖ್ ಮತ್ತು ಜೈನರ ಪ್ರಸಿದ್ಧ ಯಾತ್ರಾ ಸ್ಥಳವಾಗಿಯೂ ಪ್ರಸಿದ್ಧವಾಗಿದೆ.

ಗ್ವಾಲಿಯರ್ ನಗರದ ಪ್ರಯಾಣ ಸೌಲಭ್ಯಗಳು

ಗ್ವಾಲಿಯರ್ ನಗರವನ್ನು ವಿಮಾನ, ರೇಲ್ವೆ ಮತ್ತು ರಸ್ತೆಗಳ ಮಾರ್ಗವಾಗಿಯೂ ತಲುಪಬಹುದಾಗಿದೆ. ಈ ನಗರವು ವಿಮಾನ ನಿಲ್ದಾಣ ಮತ್ತು ಜನ ಜಂಗುಳಿಯ ರೇಲ್ವೇ ನಿಲ್ದಾಣವನ್ನು ಹೊಂದಿದೆ.  ಗ್ವಾಲಿಯರ್ ನಗರವನ್ನು ನೋಡಲು ಚಳಿಗಾಲದ ಅವಧಿಯು ಅತ್ಯಂತ ಯೋಗ್ಯವಾದ ಸಮಯವಾಗಿದೆ.

Please Wait while comments are loading...