Search
  • Follow NativePlanet
Share

ನದಿ ಪ್ರಸ್ಥಭೂಮಿಯಲ್ಲೊಂದು ಸುಂದರ ನಗರ ಗುನಾ

8

ಮಧ್ಯಪ್ರದೇಶದ ಈಶಾನ್ಯ ದಿಕ್ಕಿನಲ್ಲಿ ಹರಿಯುವ ಪಾರ್ವತಿ ನದಿಯ ಪ್ರಸ್ಥಭೂಮಿಯಲ್ಲಿರುವುದೇ ಗುನಾ ನಗರ. ಗುನಾ ಜಿಲ್ಲೆಯಲ್ಲೇ ಗುನಾ ಹೆಸರಿನ ನಗರವಿರುವುದು ವಿಶೇಷ. ಈ ನಗರ ಚಂಬಲ್ ಮತ್ತು ಮಲ್ವಾಗೆ ರಹದಾರಿಯಾಗಿದೆ. ಗುನಾ, ಮಧ್ಯಪ್ರದೇಶದಲ್ಲಿ ಅತ್ಯಂತ ಅಭಿವೃದ್ಧಿ ಹೊಂದಿದ ಜಿಲ್ಲೆ ಎಂದು ಪರಿಗಣಿಸಲಾಗಿದೆ.

ಇತಿಹಾಸದ ಮೇಲೆ ಒಂದು ನೋಟ

ಚಂದ್ರ ಪ್ರದ್ಯೋತ ಮಹಾಸೇನಾ ಸ್ಥಾಪಿಸಿದ ಅವಂತಿ ರಾಜ್ಯದಲ್ಲಿ ಗುನಾ ಒಂದು ಭಾಗವಾಗಿತ್ತು. 18ನೇ ಶತಮಾನದಲ್ಲಿ ಈ ರಾಜ್ಯವನ್ನು ಮರಾಠ ನಾಯಕ ರಾಮೋಜಿ ರಾವ್ ಸಿಂಧಿಯಾ ವಶಪಡಿಸಿಕೊಂಡ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಮಧ್ಯಭಾರತ್ ರಾಜ್ಯದ 16 ಜಿಲ್ಲೆಗಳಲ್ಲಿ ಗುನಾ ಒಂದಾಗಿತ್ತು. ಬಳಿಕ ಮಧ್ಯಭಾರತ್ ಎನ್ನುವುದು ಮಧ್ಯಪ್ರದೇಶ ಎಂದು ಬದಲಾಯಿತು.

ಗುನಾ ಮತ್ತು ಸುತ್ತಮುತ್ತಲಿರುವ ಪ್ರವಾಸಿ ಕೇಂದ್ರಗಳು

ಪ್ರವಾಸಿಗಳನ್ನು ಸೆಳೆಯಲು ಗುನಾ ಪ್ರವಾಸೋದ್ಯಮದಲ್ಲಿ ಕೆಲವು ಆಕರ್ಷಕ ಪ್ರವಾಸಿ ತಾಣಗಳಿವೆ. ಗುನಾ ನಗರದ ವಿವೇಕ್ ಕಾಲನಿಯಲ್ಲಿರುವ ಪಂಚಮುಖಿ ಹನುಮಾನ್ ಆಶ್ರಮ ಅತ್ಯಂತ ಜನಪ್ರಿಯ ಧಾರ್ಮಿಕ ಕೇಂದ್ರವಾಗಿದೆ. ಈ ಸ್ಥಳ ಹನುಮಂತನ ಐದು ಶಕ್ತಿಗಳಲ್ಲಿ ಒಂದಾಗಿದೆ ಎನ್ನುವ ಪ್ರತೀತಿಯಿದೆ. ಇದು ಗುನಾ ರೈಲ್ವೆ ನಿಲ್ದಾಣದಿಂದ 4 ಕಿ.ಮೀ. ದೂರದಲ್ಲಿದೆ. ಆಶ್ರಮಕ್ಕೆ ಭೇಟಿ ನೀಡುವ ಭಕ್ತರು ಹಾಗೂ ಪ್ರವಾಸಿಗಳಿಗೆ ಇಲ್ಲಿ ವಿವಿಧ ರೀತಿಯ ಸವಲತ್ತುಗಳಿವೆ. ಬಿಶ್ಬುಜಿ ಮಂದಿರ ಮತ್ತು ಜೈನ ಮಂದಿರ ಗುನಾದಲ್ಲಿರುವ ಇತರ ಧಾರ್ಮಿಕ ಕೇಂದ್ರಗಳು. ಬಜರಂಗಗಡ್ ಕೋಟೆ ಮತ್ತೊಂದು ಪ್ರವಾಸಿ ತಾಣ.

ಗುನಾಗೆ ಪ್ರಯಾಣ

ಗುನಾದಲ್ಲಿ ತನ್ನದೇ ಆದ ರೈಲ್ವೆ ನಿಲ್ದಾಣವಿದೆ. ರೈಲ್ವೆ ಮೂಲಕ ಪ್ರಯಾಣಿಸುವುದು ಒಳ್ಳೆಯ ಆಯ್ಕೆ. ವಿಮಾನ ಮೂಲಕವಾದರೆ ಗುನಾಗೆ ಹತ್ತಿರದ ವಿಮಾನ ನಿಲ್ದಾಣ ಭೋಪಾಲ್.

ಗುನಾಗೆ ಭೇಟಿ ನೀಡಲು ಸೂಕ್ತ ಸಮಯ

ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಗುನಾಗೆ ಭೇಟಿ ನೀಡಬಹುದು. ಈ ಸಮಯದಲ್ಲಿ ಹೆಚ್ಚು ಚಳಿಯೂ ಇರಲ್ಲ, ಸೆಕೆಯೂ ಇರಲ್ಲ.

ಗುನಾ ಪ್ರಸಿದ್ಧವಾಗಿದೆ

ಗುನಾ ಹವಾಮಾನ

ಉತ್ತಮ ಸಮಯ ಗುನಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಗುನಾ

  • ರಸ್ತೆಯ ಮೂಲಕ
    ಮಧ್ಯಪ್ರದೇಶದ ಎಲ್ಲಾ ಭಾಗಗಳಿಂದ ರಸ್ತೆ ಮೂಲಕ ಗುನಾಗೆ ಪ್ರಯಾಣಿಸಬಹುದು. ರಾಷ್ಟ್ರೀಯ ಹೆದ್ದಾರಿ 3ರಲ್ಲಿ ಗುನಾ ನಗರವಿದೆ. 250 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಗುನಾ ಜಿಲ್ಲೆಗೆ ಸಂಪೂರ್ಣ ಸಂಪರ್ಕ ಕಲ್ಪಿಸುತ್ತದೆ. ಗುನಾ ಪ್ರವಾಸೋದ್ಯಮ ಇಲಾಖೆ ಬಸ್ ಸೇವೆಗಳನ್ನು ನೀಡುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗುನಾ ರೈಲ್ವೆ ನಿಲ್ದಾಣದಲ್ಲಿ ಬ್ರಾಡ್ ಗೇಜ್ ರೈಲು ಹಳಿಗಳಿವೆ. ಪಂಥಕೋಟ್ ರೈಲು ನಿಲ್ದಾಣ ಮೂಲಕ ದೇಶದ ಇತರ ಭಾಗಗಳಿಗೆ ಪ್ರಯಾಣಿಸಬಹುದು. ಗುನಾಗೆ ವೇಗದ ಸಾರಿಗೆ ವ್ಯವಸ್ಥೆಯಿದೆ. ಇತ್ತೀಚೆಗೆ ಮಧ್ಯಪ್ರದೇಶ ಸರ್ಕಾರ ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಗುನಾಗೆ ವೇಗ ಹಾಗೂ ಅತ್ಯುತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಗುನಾಗೆ ಹಲವಾರು ವಿಮಾನಗಳಿವೆ. ವಿಮಾನ ಮೂಲಕ ಪ್ರಯಾಣಿಸಲು ಬಯಸುವವರು ಮಧ್ಯಪ್ರದೇಶದ ಭೋಪಾಲ್ ವಿಮಾನ ನಿಲ್ದಾಣಕ್ಕೆ ಬರಬೇಕು. ಇದು ಗುನಾಗೆ ಹತ್ತಿರದ ವಿಮಾನ ನಿಲ್ದಾಣ. ಖಾಸಗಿ ಕಾರುಗಳ ಮೂಲಕ ಭೋಪಾಲ್ ನಿಂದ ಗುನಾಗೆ ತಲುಪಬಹುದು. ಭೋಪಾಲ್ ನಿಂದ ಗುನಾಗೆ 188 ಕಿ.ಮೀ. ದೂರವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri