Search
  • Follow NativePlanet
Share
ಮುಖಪುಟ » ಸ್ಥಳಗಳು » ಗುನಾ » ಆಕರ್ಷಣೆಗಳು » ಜೈನ ಮಂದಿರ

ಜೈನ ಮಂದಿರ, ಗುನಾ

1

ಈ ಮಂದಿರ ಗುನಾದ ಮತ್ತೊಂದು ಆಕರ್ಷಣೀಯ ಕೇಂದ್ರ. ಶ್ರೀ ಶಾಂತಿನಾಥ ದಿಗಂಬರ ಜೈನ ಅತಿಶ್ಯ ಕ್ಷೇತ್ರ ಎನ್ನುವುದು ಜೈನ ಮಂದಿರದ ಮೂಲ ಹೆಸರು. 1236ರಲ್ಲಿ ಈ ಮಂದಿರವನ್ನು ಜೈನ ಮುನಿ ಶ್ರೀ ಪಾದ ಷಾ ಇದನ್ನು ನಿರ್ಮಿಸಿದ್ದರು.  ಕೆಂಪು ಹರಳಿನಿಂದ ಮಾಡಿರುವಂತಹ ಜೈನ ತೀರ್ಥಕಂರರ ಹಲವಾರು ಮೂರ್ತಿಗಳು ಈ ಮಂದಿರದಲ್ಲಿದೆ. ಜೈನ ಮಂದಿರದ ಒಳ ಹಾಗೂ ಹೊರ ಗೋಡೆಗಳಲ್ಲಿ ಕ್ಲಿಷ್ಟ ಪ್ರತಿಮೆಗಳು ಮತ್ತು ಕಲ್ಲಿನ ಕೆತ್ತನೆಗಳಿವೆ. ಶ್ರೀ ಪಾದ ಷಾರಿಗೆ ಈ ಜಾಗದಲ್ಲಿ ಸ್ಪರ್ಶ ಕಲ್ಲೊಂದು ಸಿಕ್ಕಿದ್ದು, ಇದರಿಂದ ಅವರು ಮಂದಿರವನ್ನು ತುಂಬಾ ಕಡಿಮೆ ಸಮಯದಲ್ಲಿ ಕಟ್ಟಿದರು ಎಂದು ಸ್ಥಳೀಯರು ನಂಬಿದ್ದಾರೆ.

ಈ ಮಂದಿರದ ವಿಶೇಷವೆಂದರೆ ಶಾಂತಿನಾಥ ದೇವರು ನಿಂತ ಭಂಗಿಯಲ್ಲಿದ್ದು, ಮುಖ ಮಾತ್ರ ಆಕಾಶದತ್ತ ನೋಡುವಂತಿದೆ. ಶಾಂತಿನಾಥ ದೇವರ ಮೂರ್ತಿ ಕೆಂಪು ಬಣ್ಣದ್ದಾಗಿದೆ ಮತ್ತು ಸುಮಾರು 18 ಅಡಿ ಎತ್ತರದ್ದಾಗಿದೆ. ಅರ್ಹಾನಾಥ ಮತ್ತು ಕುಂಥನಾಥ ದೇವರ ಮೂರ್ತಿಗಳು ಶಾಂತಿನಾಥ ದೇವರ ಮೂರ್ತಿಯ ಇಕ್ಕೆಲಗಳಲ್ಲಿ ಇವೆ. ಅರ್ಹಾನಾಥ ದೇವರ ಮೂರ್ತಿ ಸುಮಾರು 9 ಅಡಿ ಎತ್ತರ, ಕುಂಥನಾಥ ದೇವರ ಮೂರ್ತಿ ಹತ್ತು ಅಡಿ ಎತ್ತರದ್ದಾಗಿದೆ. ಇತರ ಕೆಲವು ದೇವರುಗಳ ಮೂರ್ತಿ ಈ ಮಂದಿರದ ಸೌಂದರ್ಯವನ್ನು ವೃದ್ಧಿಸಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat