Search
  • Follow NativePlanet
Share
ಮುಖಪುಟ » ಸ್ಥಳಗಳು » ಗುನಾ » ಹವಾಮಾನ

ಗುನಾ ಹವಾಮಾನ

ಫೆಬ್ರವರಿ ಮಧ್ಯಭಾಗದಿಂದ ಮಾರ್ಚ್ ಮಧ್ಯಭಾಗದವರೆಗೆ ಗುನಾದಲ್ಲಿ ಒಳ್ಳೆಯ ಋತುವಿರುತ್ತದೆ. ವಸಂತ ಕಾಲದಲ್ಲಿ ಗುನಾ ಹಿತಕರ ಹಾಗೂ ಸುಂದರವಾಗಿರುತ್ತದೆ. ಈ ಸಮಯದಲ್ಲಿ ಭೇಟಿ ನೀಡುವ ಪ್ರವಾಸಿಗಳು ಒಂದು ತಿಂಗಳ ಕಾಲದ ಹಿತಕರ ಹವಾಮಾನವನ್ನು ಆನಂದಿಸಬಹುದು.

ಬೇಸಿಗೆಗಾಲ

ಗುನಾದಲ್ಲಿ ಬೇಸಿಗೆ ಕಾಲ ಮಾರ್ಚ್ ನಲ್ಲಿ ಆರಂಭವಾಗಿ ಮೇಯಲ್ಲಿ ಕೊನೆಗೊಳ್ಳುತ್ತದೆ. ಗುನಾ ಅತ್ಯಂತ ಶುಷ್ಕ ಉಷ್ಣವಲಯದ ಹವಾಗುಣವನ್ನು ಹೊಂದಿದೆ  ಮತ್ತು ಬೇಸಿಗೆ ಕಾಲದಲ್ಲಿ ಅತ್ಯಧಿಕ ಉಷ್ಣತೆಯಿರುತ್ತದೆ. ಈ ಸಮಯದಲ್ಲಿ ಹವಾಮಾನ ಜನರನ್ನು ತುಂಬಾ ಆಯಾಸಗೊಳಿಸುತ್ತದೆ. ಬೇಸಿಗೆಯಲ್ಲಿ ಗುನಾದ ತಾಪಮಾನ ಗರಿಷ್ಠ 48 ಡಿಗ್ರಿ ತನಕ ಇರುತ್ತದೆ ಮತ್ತು ಕನಿಷ್ಠ 29 ಡಿಗ್ರಿ ಸೆಲ್ಸಿಯಸ್ ಇರುತ್ತದೆ.

ಮಳೆಗಾಲ

ಮಾನ್ಸೂನ್ ಸಮಯದಲ್ಲಿ ಗುನಾದ ತಾಪಮಾನ ಸಹ್ಯ ಮಟ್ಟಕ್ಕಿಳಿಯುತ್ತದೆ. ಜೂನ್ ನಿಂದ ಸಪ್ಟೆಂಬರ್ ತನಕ ಗುನಾದಲ್ಲಿ ಮನ್ಸೂನ್ ಸಮಯ. ಈ ಸಮಯದಲ್ಲಿ ಅತ್ಯಧಿಕ ಮಳೆಯಾಗದಿರುವ ಕಾರಣ ಪ್ರವಾಸಿಗಳು ಭೇಟಿ ನೀಡಬಹುದು. ಮಳೆಗಾಲದಲ್ಲಿ ತಾಪಮಾನ ಸರಾಸರಿಯಲ್ಲಿರುತ್ತದೆ.

ಚಳಿಗಾಲ

ಅಕ್ಟೋಬರ್, ನವಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಗುನಾದಲ್ಲಿ ಚಳಿಗಾಲವಿರುತ್ತದೆ. ಈ ಸಮಯದಲ್ಲಿ ಹವಾಮಾನ ಸಹ್ಯವಾಗಿರುತ್ತದೆ. ಕನಿಷ್ಠ 10 ಡಿಗ್ರಿ ಮತ್ತು ಗರಿಷ್ಠ ತಾಪಮಾನ 27 ಡಿಗ್ರಿ ತನಕ ಇರುತ್ತದೆ. ಚಳಿಗಾಲದ ಹವಾಮಾನ ಹಿತಕರವಾಗಿದ್ದು, ಪ್ರವಾಸಿಗಳಿಗೆ ಭೇಟಿಗೆ ಇದು ಸೂಕ್ತ ಸಮಯವಾಗಿದೆ.