Search
  • Follow NativePlanet
Share
ಮುಖಪುಟ » ಸ್ಥಳಗಳು » ಗ್ವಾಲಿಯರ್ » ಆಕರ್ಷಣೆಗಳು » ಗುಜರಿ ಮಹಲ್

ಗುಜರಿ ಮಹಲ್, ಗ್ವಾಲಿಯರ್

2

ಗುಜರಿ ಮಹಲ್ ಭಾರತದ ಪ್ರಸಿದ್ಧ ಪುರಾತತ್ವ ವಸ್ತು ಸಂಗ್ರಾಹಾಲಯಗಳಲ್ಲಿ ಒಂದಾಗಿದ್ದು ಗ್ವಾಲಿಯರ್‌‌ನಲ್ಲಿ ನೆಲೆಸಿದೆ. ಈ ಅರಮನೆಯನ್ನು ರಾಜ ಮಾನಸಿಂಗನು ಗುಜರ ಸಮುದಾಯದ ತನ್ನ ರಾಣಿ ಮೃಗನಯನಿಗಾಗಿ ನಿರ್ಮಿಸಿದ್ದನು. ಆದ್ದರಿಂದ ಈ ಅರಮನೆಗೆ ಗುಜರಿ ಮಹಲ್ ಎಂದು ಹೆಸರು ಬಂದಿತು.

1922  ರಲ್ಲಿ ಪುರಾತತ್ವ ಇಲಾಖೆಯು ಈ ಅರಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿತು. ಈ  ವಸ್ತು ಸಂಗ್ರಹಾಲಯವು 28 ಗ್ಯಾಲರಿಗಳು ಮತ್ತು 9000 ಕಲಾಕೃತಿಗಳನ್ನು ಒಳಗೊಂಡಿದೆ. ಇಲ್ಲಿ ಕ್ರಿ.ಶ ಒಂದನೇಯ ಶತಮಾನದ ನಂತರದ ಕಲಾಕೃತಿಗಳನ್ನು  ಕಾಣಬಹುದು. ಈ ವಸ್ತು ಸಂಗ್ರಹಾಲಯದಲ್ಲಿ ಅಮೂಲ್ಯ ಹರಳುಗಳು, ಆಭರಣಗಳು, ಟೆರ್‍ರಾಕೋಟಾ ವಸ್ತುಗಳು, ಆಯುಧಗಳು, ಕಲಾಕೃತಿಗಳು, ಶಿಲ್ಪಗಳು, ವರ್ಣಚಿತ್ರಗಳು, ಶಾಸನಗಳು, ಕುಂಬಾರಿಕೆ ಮುಂತಾದ ವಸ್ತುಗಳನ್ನು  ಪ್ರದರ್ಶಿಸಲಾಗುತ್ತದೆ.

ಗುಜರಿ ಮಹಲ್ ವಸ್ತು ಸಂಗ್ರಹಾಲಯದಲ್ಲಿ ಕಂಡು ಬರುವ ಶಿಲ್ಪಗಳಲ್ಲಿ ನೀವು ಜಗತ್ಪ್ರಸಿದ್ಧವಾದ ಶಿಲಾ ಭಂಜಿಕ ಯಕ್ಷಿ, ತ್ರಿಮೂರ್ತಿ ನಟರಾಜ, ಅರ್ಧ ನಾರೀಶ್ವರ ಮತ್ತು ಯಮರಾಜ ಶಿಲ್ಪಗಳನ್ನು ಕಾಣಬಹುದು. ಇದು ಮಧು ಮತ್ತು ಧಾರ್ ಪ್ರದೇಶಗಳ 75 ವರ್ಷಗಳ ಹಳೆಯ ಛಾಯಾಚಿತ್ರಗಳನ್ನು ಹೊಂದಿದೆ. ಹದಿನೈದನೇ ಶತಮಾನದಲ್ಲಿ ಜೀವಿಸಿದ್ದ ಪ್ರಸಿದ್ಧ ಸಂಗೀತಗಾರ ತಾನಸೇನನ ಕುರಿತು ದಾಖಲೆಗಳನ್ನು ಹೊಂದಿದೆ. ಇತಿಹಾಸದ ಕುರಿತು ಪ್ರೀತಿಯುಳ್ಳ ಪ್ರತಿಯೊಬ್ಬರು ಈ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಲೇ ಬೇಕು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue