Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ಹವಾಮಾನ

ಚಾಂದೇರಿ ಹವಾಮಾನ

ಅಕ್ಟೋಬರ್ ನಿಂದ ಮಾರ್ಚ್ ಅವಧಿಯು ಚಾಂದೇರಿ ತಲುಪಲು ಸೂಕ್ತ ಕಾಲ. ಈ ಸಮಯದಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ 14 ರಿಂದ 25 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ಇರುತ್ತದೆ. ಆದ್ದರಿಂದ ಚಾಂದೇರಿಗೆ ಪ್ರವಾಸ ಕೈಗೊಳ್ಳಲು ಇದು ಸೂಕ್ತ ಸಮಯ.

ಬೇಸಿಗೆಗಾಲ

ಇಲ್ಲಿ ಬೇಸಿಗೆ ಧಗೆ ಯಿಂದ ಕೂಡಿದ್ದು 46 ಡಿಗ್ರಿಯಷ್ಟು ತಾಪಮಾನವಿರುತ್ತದೆ. ಮಾರ್ಚ್ ನಿಂದ ಮೇ ತಿಂಗಳಿನ ಬಿರು ಬೇಸಿಗೆಯ ಬಿಸಿಲಿನಿಂದಾಗಿ ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿ ಬರುವುದನ್ನುಮುಂದುಡಿದರೆ ಉತ್ತಮ.

ಮಳೆಗಾಲ

ಮಳೆಗಾಲ ಜೂನ್ ನಿಂದ ಪ್ರಾರಂಭವಾಗಿ ಆಗಸ್ಟ್ ಕೊನೆ ವಾರ ಅಥವಾ ಸೆಪ್ಟೆಂಬರ್ ನ ಮೊದಲ ವಾರಗಳವರೆಗೆ ವಿಸ್ತರಿಸುತ್ತದೆ. ಬೇಸಿಗೆ ಬೇಗೆಯಿಂದ ಬೆಂಡಾಗಿದ್ದ ಜನತೆಗೆ ಈ ಮಳೆ ಸ್ವಲ್ಪ ನಿರಾಳತೆ ನೀಡುತ್ತದೆ. ವರ್ಷದಲ್ಲಿ 700mm ನಿಂದ 1100mm ರ ವರೆಗೆ ಮಳೆ ಬೀಳುತ್ತದೆ.

ಚಳಿಗಾಲ

ಚಳಿಗಾಲ ಇಲ್ಲಿ ಆಹ್ಲಾದಕರವಾಗಿರುತ್ತದೆ. ನವೆಂಬರ್ ನಿಂದ ಫೆಬ್ರವರಿ ಇಲ್ಲಿ ಚಳಿಗಾಲ. ತಾಪಮಾನವು ಈ ಸಂದರ್ಭದಲ್ಲಿ 5 ಡಿಗ್ರಿ ಸೆಲ್ಸಿಯಸ್ ವರೆಗೂ ಕುಸಿಯುತ್ತದೆ. ಚಳಿಗಾಲ ಇಲ್ಲಿಗೆ ಪ್ರವಾಸ ಕೈಗೊಳ್ಳಲು ಉತ್ತಮ ಕಾಲ.