ಈ ಮಸೀದಿ ಇಟಾರ್ಸಿಯ ಜನಪ್ರಿಯ ಮಸೀದಿಯಾಗಿದೆ. ಈ ಸಣ್ಣ ನಗರದ ಜನರು ಒಗ್ಗಟ್ಟಿನಲ್ಲಿ ಬಲವಿದೆ ಎಂದು ನಂಬಿದವರು, ಆದ್ದರಿಂದ ಎಲ್ಲಾ ರೀತಿಯ ಜನಾಂಗದವರು ಇಲ್ಲಿ ಬರುತ್ತಾರೆ. ಆದ್ದರಿಂದ ಇಲ್ಲಿ ಜನರು ಸುಲಭವಾಗಿ ಹೊಂದಿಕೊಂಡು ಬದುಕುತ್ತಿದ್ದಾರೆ. ಇಟಾರ್ಸಿಯಲ್ಲಿ ಗಣನೀಯ ಸಂಖ್ಯೆಯಲ್ಲಿ ಇಸ್ಲಾಂ ಧರ್ಮದವರಿದ್ದು, ನೂರಾನಿ ಮಸೀದಿ, ಹುಸೈನಿ ಮಸೀದಿ, ಹಬೀಬಿಯ ಬರ್ಕತ್ ರಾಸಾ ಮುಂತಾದ ಹಲವು ಮಸೀದಿಗಳನ್ನು ಕಾಣಬಹುದು. ಹುಸೈನಿ ಮಸೀದಿ ಇವುಗಳಲ್ಲಿ ಮುಖ್ಯವಾದುದು. ಮಸೀದಿ ಅದ್ಭುತ ವಿನ್ಯಾಸ ಮತ್ತು ಸಂಕೀರ್ಣ ಕೆತ್ತನೆಗಳನ್ನು ಒಳಗೊಂಡಿದೆ. ಈ ಮಸೀದಿ ಹತ್ತಿರ ಬರುವ ಎಲ್ಲ ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳವಾಗಿದೆ. ಸ್ಥಳೀಯ ಸಾರಿಗೆ ಮೂಲಕ ಈ ಮಸೀದಿಯನ್ನು ಸುಲಭವಾಗಿ ತಲುಪಬಹುದು.