Search
  • Follow NativePlanet
Share
ಮುಖಪುಟ » ಸ್ಥಳಗಳು » ಇಟಾರ್ಸಿ » ಹವಾಮಾನ

ಇಟಾರ್ಸಿ ಹವಾಮಾನ

ಅಕ್ಟೋಬರ್ ನಿಂದ ಫೆಬ್ರವರಿ ಇಲ್ಲಿಗೆ ಪ್ರವಾಸ ಕೈಗೊಳ್ಳಲು ಉತ್ತಮ ಕಾಲ. ಚಳಿಗಾಲದ ಆಹ್ಲಾದಕರ ವಾತಾವರಣ ಸುಂದರವಾಗಿರುತ್ತದೆ. ಚಳಿಗಾಲ ಇಲ್ಲಿ ಹೋಗಲು ಉತ್ತಮ ಸಮಯ.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ವರೆಗೆ ಇಲ್ಲಿ ಬೇಸಿಗೆ ಧಗೆಯಿಂದ ಕೂಡಿರುತ್ತದೆ. 25  ಡಿಗ್ರಿ ಇಂದ 47 ಡಿಗ್ರಿ ವರೆಗೆ ಉಷ್ಣಾಂಶ ಇರುತ್ತದೆ. ಮೇ ತಿಂಗಳಿನಲ್ಲಿ ಇಲ್ಲಿ ಉಷ್ಣಾಂಶ ಅತ್ಯಧಿಕವಾಗಿರುತ್ತದೆ. ಆದ್ದರಿಂದ ಬೇಸಿಗೆಯು ಇಲ್ಲಿಗೆ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯವಲ್ಲ.

ಮಳೆಗಾಲ

ಜೂನ್ ನಿಂದ ಸೆಪ್ಟೆಂಬರ್ ಇಲ್ಲಿ ಮಳೆಗಾಲ. ಬೇಸಿಗೆ ಧಗೆಯಿಂದ ಮಳೆಗಾಲದಲ್ಲಿ ಸ್ವಲ್ಪ ಮುಕ್ತಿ ದೊರಕುತ್ತದೆ. ಮಳೆಯಿಂದಾಗಿ ಅಕ್ಟೋಬರ್ ನಿಂದ ನವೆಂಬೆರ್ ತಿಂಗಳಿನಲ್ಲಿ ಉಷ್ಣಾಂಶ ಹದವಾಗುತ್ತದೆ.

ಚಳಿಗಾಲ

ಡಿಸೆಂಬರ್ ನಲ್ಲಿ ಚಳಿಗಾಲ ಪ್ರಾರಂಭವಾಗಿ ಫೆಬ್ರವರಿಯಲ್ಲಿ ಮುಗಿಯುತ್ತದೆ. ಉಷ್ಣಾಂಶ 9 ಡಿಗ್ರಿ ಇಂದ 25 ಡಿಗ್ರಿ ವರೆಗೆ ಇರುತ್ತದೆ .ಹದವಾದ ಆಹ್ಲಾದಕರ ವಾತಾವರಣದಿಂದ ಚಳಿಗಾಲ ಸುಂದರವಾಗಿರುತ್ತದೆ. ಚಳಿಗಾಲ ಇಲ್ಲಿಗೆ ಪ್ರವಾಸ ಕೈಗೊಳ್ಳಲು ಉತ್ತಮ ಕಾಲ.