Search
 • Follow NativePlanet
Share
ಮುಖಪುಟ » ಸ್ಥಳಗಳು» ಸಿಯೋನಿ

ಸಿಯೋನಿ : ಹುಲಿ ಮತ್ತು ಮರಗಳ ಪ್ರದೇಶ

9

ಸಿಯೋನಿ ಎನ್ನುವ ಸುಂದರ ಪಟ್ಟಣ ಸಿಯೋನಿ ಜಿಲ್ಲೆಯಲ್ಲಿದೆ. ಈ ಅಪರೂಪದ ಪಟ್ಟಣ ಮಧ್ಯಪ್ರದೇಶದ ಸತ್ಪುರದ ವಾಯುವ್ಯ ದಿಕ್ಕಿನಲ್ಲಿದೆ. ಸಿಯೋನಿ ಜಿಲ್ಲೆ ಭೌಗೋಳಿಕವಾಗಿ ವಿಶಾಲವಾಗಿದ್ದು 8,758 ಚದರ ಕಿಲೋಮೀಟರ್ ವ್ಯಾಪಿಸಿದ್ದು, ನವೆಂಬರ್ 1, 1956 ರಲ್ಲಿ ಅಸ್ತಿತ್ವಕ್ಕೆ ಬಂತು. ಈ ಜಿಲ್ಲೆಯ ಪ್ರಮುಖ ಕಸುಬು ಕೃಷಿ, ಇದು ವೈನ್‍ಗಂಗಾ ನದಿಯನ್ನು ಅವಲಂಬಿತವಾಗಿದೆ.

ಸಿಯೋನಿಯ ಕುತೂಹಲಕಾರಿ ಸಂಗತಿಗಳು

ಚರಿತ್ರೆಯ ಪ್ರಕಾರ, ಜಗದ್ಗುರುಗಳು ಒಮ್ಮೆ ಕೇರಳ ರಾಜ್ಯಕ್ಕೆ ಪ್ರವಾಸ ಮಾಡುತ್ತಿದ್ದಾಗ ಈ ಪ್ರದೇಶವನ್ನು ನೋಡಿ ಆಕರ್ಷಿತರಾಗಿ ಶಿರೋನಿ ಎನ್ನುವ ಹೆಸರನ್ನು ಇಡುತ್ತಾರೆ, ತದನಂತರ ಇದು ಶಿವ ನಗರಿ ಅಥವಾ ಸಿಯೋನಿ ಎಂದು ಕರೆಯಲ್ಪಟ್ಟಿತು. ಈ ಪ್ರದೇಶವು ರುಡ್ಯಾರ್ಡ್ ಕಿಪ್ಲಿಂಗ್ಸ್ ಅವರ "ಜಂಗಲ್ ಬುಕ್" ಮೂಲಕ ಹೆಸರುವಾಸಿಯಾಯಿತು, ಈ ಪ್ರಸಿದ್ದ ಪುಸ್ತಕವನ್ನು ಸಿಯೋನಿಯಲ್ಲಿ ನಕ್ಷಿಸಲಾಗಿತ್ತು. ಗಮನಿಸ ಬೇಕಾದ ಅಂಶವೇನಂದರೆ ಸಿಯೋನಿಯನ್ನು ಇಲ್ಲಿ "ಸೀಒನೀ" ಎಂದು ರುಡ್ಯಾರ್ಡ್ ಕಿಪ್ಲಿಂಗ್ಸ್ ಪುಸ್ತಕದಲ್ಲಿ ಬರೆಯಲಾಗಿದೆ.

ಸಿಯೋನಿ ಎನ್ನುವ ಹೆಸರು ’ಸಿಯೋನ’ ಎನ್ನುವ ಜಾತಿಯ ಮರದಿಂದ ಬಂದಿತ್ತು ಎನ್ನಲಾಗುತ್ತದೆ, ಈ ಮರವು ವರ್ಬಾನನಿಯಾಲ್ ಎನ್ನುವ ಕುಟುಂಬಕ್ಕೆ ಸೇರಿದ್ದು, ಈ ಪ್ರದೇಶದಲ್ಲಿ ಮಾತ್ರ ಹೆಚ್ಚಾಗಿ ಕಾಣಸಿಗುತ್ತದೆ. ಈ ಮರದಿಂದ ಆಗುವ ಮರಮಟ್ಟನ್ನು ಧೋಲಕ್ ಉತ್ಪಾದಕರು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಸಿಯೋನಿ ಮರದ ಹೊರತಾಗಿ, ಇನ್ನೊಂದು ಹೆಸರಾಂತ ವಿಧದ ಮರವನ್ನೂ ಅಗಾಧ ಸಂಖ್ಯೆಯಲ್ಲಿ ಸಿಯೋನಿ ನೀಡುತ್ತದೆ, ಈ ಮರಮಟ್ಟು ಬೇರೆ ಯಾವುದೂ ಅಲ್ಲ ಅದು ಸಾಗುವಾನಿ ಮರ.

ಸಿಯೋನಿ ಸುತ್ತಮುತ್ತ ವಿರುವ ಪ್ರವಾಸಿ ಸ್ಥಳಗಳು

ಸಿಯೋನಿ ಪ್ರವಾಸೋದ್ಯಮಕ್ಕೆ ತನ್ನದೆ ಆದ ವಿಶೀಷ್ಟ ಕೊಡುಗೆ ನೀಡುತ್ತದೆ 'ಭೀಮಗಡ್ ಸಂಜಯ್ ಸರೋವರ ಸಾಯಿಲ್ ಡ್ಯಾಮ್(soil dam)'. ಇದನ್ನು ಏಷ್ಯಾದಲ್ಲಿರುವ ಬೃಹತ್ ಸಯ್ಯಿಲ್ ಡ್ಯಾಮ್‍ಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ.  ಇದನ್ನು ವೈನ್‍ಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದು, ಛಾಪರಾ ಎನ್ನುವ ಪ್ರದೇಶದಲ್ಲಿದೆ. ಈ ಅಣೆಕಟ್ಟಿನ ಪ್ರಮುಖ ಉದ್ದೇಶ ನೀರಾವರಿ. ಪೆಂಚ್ ಹುಲಿ ರಿಸರ್ವ್ ಇನ್ನೊಂದು ಪ್ರಸಿದ್ದ ಪ್ರವಾಸಿ ತಾಣವಾಗಿದ್ದು ಸಿಯೋನಿ ಜಿಲ್ಲೆಯಲ್ಲಿದೆ. ಭರ್ಗತ್ ಎನ್ನುವ ಪುಟ್ಟ ಪಟ್ಟಣವು ಫಲವತ್ತಾದ ಕಣಿವೆ ಶೃಂಗಾರವಾದ ವಾತಾವರಣದಿಂದ ಕೂಡಿದ್ದು ಸಿಯೋನಿ ಜಿಲ್ಲೆಯಲ್ಲಿದೆ. ಮುಕ್ಕಾಂ ಹೂಡುವವರು, ಟ್ರೆಕ್ಕಿಂಗ್ ಮತ್ತು ಇತರ ಹೊರಾಂಗಣ ಹವ್ಯಾಸವಿರುವ ಪ್ರವಾಸಿಗರು ಭರ್ಗತ್ ಪಟ್ಟಣವನ್ನು ನೋಡಲೇ ಬೇಕು.

ಸಿಯೋನಿಯ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಮಹಾಕಾಳೇಶ್ವರ ದೇವಾಲಯ, ಶಿವ ಮಂದಿರ ಮತ್ತು ಅಮೋದ್ಗರ್

ಸಿಯೋನಿಗೆ ಪ್ರಯಾಣ

ಚಳಿಗಾಲದಲ್ಲಿ ಸಿಯೋನಿಗೆ ಭೇಟಿ ನೀಡುವುದು ಉತ್ತಮ. ಈ ಪ್ರದೇಶಕ್ಕೆ ರಸ್ತೆ, ರೈಲು ಮತ್ತು ವಿಮಾನ ಸಂಚಾರ ಸಂಪರ್ಕ ಉತ್ತಮವಾಗಿದೆ.

ಸಿಯೋನಿ ಪ್ರಸಿದ್ಧವಾಗಿದೆ

ಸಿಯೋನಿ ಹವಾಮಾನ

ಸಿಯೋನಿ
23oC / 74oF
 • Clear
 • Wind: NNE 7 km/h

ಉತ್ತಮ ಸಮಯ ಸಿಯೋನಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಸಿಯೋನಿ

 • ರಸ್ತೆಯ ಮೂಲಕ
  ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಪ್ರಮುಖ ನಗರಗಳಿಂದ ಸಿಯೋನಿ ನಗರಕ್ಕೆ ರಸ್ತೆ ಮೂಲಕ ಉತ್ತಮ ಸಂಪರ್ಕವಿದೆ. ಖಾಸಾಗಿ ಮತ್ತು ಸರಕಾರೀ ಬಸ್ಸುಗಳು ಹತ್ತಿರದ ಸ್ಥಳಗಳಿಂದ ಹೇರಳವಾಗಿ ಲಭ್ಯವಿದೆ. ಟ್ಯಾಕ್ಸಿ ಮೂಲಕ ತಲುಪುವುದೂ ಇನ್ನೊಂದು ಆಯ್ಕೆಯಾಗಿದ್ದು ಮಧ್ಯಪ್ರದೇಶದಿಂದ ಟ್ಯಾಕ್ಸಿ ಮೂಲಕ ಕೂಡಾ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಪ್ರವಾಸಿಗರು ನಾಗಪೂರದಿಂದ ಸಿಯೋನಿಗೆ ರೈಲಿನ ಮೂಲಕ ಕೂಡಾ ತಲುಪಬಹುದು. ಪ್ರಮುಖ ಮೆಟ್ರೋಪಾಲಿಟನ್ ನಗರಗಳಿಂದ ಸಿಯೋನಿಗೆ ಬರುವ ಎಲ್ಲಾ ರೈಲಿನ ಮೂಲಕ ಪ್ರವಾಸಿಗರು ಸಂಚರಿಸಲಾಗುವುದಿಲ್ಲ. ಸಿಯೋನಿಗೆ ತಲುಪಲು ಪಟ್ಟಿ ಮಾಡಬಹುದಾದ ಕೆಲವೊಂದು ಪ್ರಮುಖ ರೈಲುಗಳೆಂದರೆ ನಾಗ್ಪೂರ್ - ಜಬಲ್ಪೂರ್ ಪ್ಯಾಸೆಂಜರ್, ನಾಗ್ಪೂರ್ - ಚಿಂದ್ವಾರ್ ಎಕ್ಸ್ ಪ್ರೆಸ್, ನಾಗ್ಪೂರ್ - ನೀರ್ ಜಬಲ್ಪೂರ್ ಪ್ಯಾಸೆಂಜರ್. ಈ ಮೇಲೆ ನಮೂದಿಸಿದ ರೈಲುಗಳು ರಾಮಕೋಣ, ಇಟ್ವಾರಿ, ಹೌಬಾದ್, ಉಮ್ರಾ ನಾಲ, ಕೋರಾದಿ ಮತ್ತು ಕೆಲೋಡ್ ಮಾರ್ಗವಾಗಿ ಸಂಚರಿಸುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಸಿಯೋನಿ ಪ್ರವಾಸಿಗರಿಗೆ ಉತ್ತಮ ಸಂಪರ್ಕ ಕೊಂಡಿಯನ್ನು ಹೊಂದಿದೆ. ಸಿಯೋನಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ವಿಮಾನ ನಿಲ್ದಾಣ ಇದು ನಾಗ್ಪೂರಿನಲ್ಲಿದೆ. ಇದು ಸಿಯೋನಿಯಿಂದ 121 ಕಿಲೋಮೀಟರ್ ದೂರದಲ್ಲಿದೆ, ಇಲ್ಲಿಂದ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನವು ಹಾರಾಟ ಮಾಡುತ್ತದೆ. ಬಸ್ ಮತ್ತು ಟ್ಯಾಕ್ಸಿಗಳು ಸಿಯೋನಿಂದ ನಾಗಪೂರಕ್ಕೆ ಓಡಾಡುತ್ತದೆ. ರೈಲು ಮತ್ತು ರಸ್ತೆಯ ಮೂಲಕ ನಾಗಪೂರದಿಂದ ಸಿಯೋನಿಗೆ ಕೇವಲ ಎರಡು ಘಂಟೆ ಪ್ರಯಾಣ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Jan,Sat
Return On
20 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Jan,Sat
Check Out
20 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Jan,Sat
Return On
20 Jan,Sun
 • Today
  Seoni
  23 OC
  74 OF
  UV Index: 8
  Clear
 • Tomorrow
  Seoni
  18 OC
  65 OF
  UV Index: 8
  Sunny
 • Day After
  Seoni
  16 OC
  61 OF
  UV Index: 7
  Sunny

Near by City