ಮಳೆಗಾಲದಲ್ಲಿ ಅತಿ ಹೆಚ್ಚಿನ ಮಳೆಯಾಗುವುದರಿಂದ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುವುದು ಸೂಕ್ತವಲ್ಲ. ಸಿಯೋನಿಯಲ್ಲಿ ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣಾಂಶಕ್ಕೆ ಸಾಕ್ಷಿಯಾಗಿರ ಬೇಕಾಗಿರುವುದರಿಂದ ಮತ್ತು ಚಳಿಗಾಲದಲ್ಲಿ ಇಲ್ಲಿ ಒಣ ಮತ್ತು ಶೀತವಾದ ವಾತಾವರಣವಿರುತ್ತದೆ. ಒಟ್ಟಾಗಿ ಸಿಯೋನಿಯಲ್ಲಿ ಉಪ ಉಷ್ಣಾಂಶವಿದ್ದು, ಚಳಿಗಾಲದಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವುದು ಅತ್ಯಂತ ಸೂಕ್ತ.
ಬೇಸಿಗೆಯ ಸಮಯದಲ್ಲಿ ಸಿಯೋನಿಯಲ್ಲಿ ತೀವ್ರ ಸೆಖೆಯ ವಾತಾವರಣವಿರುತ್ತದೆ. ಸಿಯೋನಿ ಜಿಲ್ಲೆಯಲ್ಲಿ ಎಪ್ರಿಲ್ ನಿಂದ ಜೂನ್ ವರೆಗೆ ಅತಿ ಹೆಚ್ಚಿನ ಉಷ್ಣಾಂಶವಿರುತ್ತದೆ. ಸುಮಾರು ಅತಿ ಹೆಚ್ಚಿನ ಉಷ್ಣಾಂಶವೆಂದರೆ 48 ಡಿಗ್ರಿ ಮತ್ತು ಅತಿ ಕಡೆಮೆಯ ಉಷ್ಣಾಂಶ 24 ಡಿಗ್ರಿಯವರೆಗೆ ಇಲ್ಲಿ ಇರುತ್ತದೆ. ಹಾಗಾಗಿ ಈ ಸಮಯದಲ್ಲಿ ಇಲ್ಲಿಗೆ ಈ ಸಮಯದಲ್ಲಿ ಈ ಭೇಟಿ ನೀಡುವುದು ಉತ್ತಮವಲ್ಲ.
ಜುಲೈ ತಿಂಗಳಿನಿಂದ ಸೆಪ್ಟಂಬರ್ ತಿಂಗಳ ಸಮಯದಲ್ಲಿ ಇಲ್ಲಿ ಅತಿ ಹೆಚ್ಚಿನ ಮಳೆಯಾಗುತ್ತದೆ. ಸುಮಾರು 2150 ಎಂಎಂ ಮಳೆ ಈ ಸಮಯದಲ್ಲಾಗುತ್ತದೆ. ಪ್ರವಾಸಿಗರು ಈ ಸಮಯದಲ್ಲಿ ಕೂಡಾ ಇಲ್ಲಿಗೆ ಭೇಟಿ ನೀಡುವುದು ಸೂಕ್ತವಲ್ಲ. ಯಾಕೆಂದರೆ ಅತಿ ಹೆಚ್ಚಿನ ಮಳೆಯ ಸಮಯದಲ್ಲಿ ಇಲ್ಲಿ ಪ್ರಯಾಣಿಸುವುದು ದುಸ್ತರ.
ಅಕ್ಟೋಬರ್ ತಿಂಗಳಿನಿಂದ ಜನವರಿ ತಿಂಗಳ ಸಮಯದಲ್ಲಿ ಇಲ್ಲಿ ಚಳಿಗಾಲವಿರುತ್ತದೆ. ಈ ಚಳಿಗಾಲದ ಸಮಯದಲ್ಲಿ ಉಷ್ಣಾಂಶ 9 ಡಿಗ್ರಿಯಿರುತ್ತದೆ ಮತ್ತು ಹೆಚ್ಚಿನ ಉಷ್ಣಾಂಶ ಅಂದಾಜು 36 ಡಿಗ್ರಿಯವರೆಗೂ ಇರುತ್ತದೆ. ಚಳಿಗಾಲದ ಅವಧಿಯಲ್ಲಿ ಸಿಯೋನಿಗೆ ಭೇಟಿ ನೀಡುವುದು ಅತ್ಯಂತ ಸೂಕ್ತ, ಪ್ರವಾಸಿ ಸ್ಥಳಗಳನ್ನು ಮನೋರಂಜನೆಯಿಂದ ನೋಡಬಹುದಾಗಿದೆ.