ಈ ಚರ್ಚ್ ಇಟಾರ್ಸಿಯ ಜನಪ್ರಿಯ ಚರ್ಚ್ ಆಗಿದೆ. ಈ ಸಣ್ಣ ನಗರದಲ್ಲಿರುವ ಚರ್ಚ್ ಮಧ್ಯಪ್ರದೇಶದ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಈ ಚರ್ಚ್ ಗೆ ವಿವಿಧ ಧರ್ಮದವರೂ ಬರುತ್ತಾರೆ. ಇದು ಕೇವಲ ಕ್ರಿಶ್ಚಿಯನ್ ಜನಾಂಗಕ್ಕೆ ಮಾತ್ರವಲ್ಲ ಬೇರೆ ಜನಾಂಗದವರು ಕೂಡ ಬರುವ ಧಾರ್ಮಿಕ ಸ್ಥಳವಾಗಿದೆ. ಈ ಚರ್ಚ್ ನ ವಾಸ್ತುಶಿಲ್ಪ ಅದ್ಬುತವಾಗಿದೆ. ಇಟಾರ್ಸಿ ಗೆ ಬರುವ ಎಲ್ಲಾ ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ. ಈ ಚರ್ಚ್ ಹಲವಾರು ಸಾಮಾಜಿಕ ಅಭಿವೃದ್ಧಿ ಚಟುವಟಿಕೆಗಳನ್ನು ಹೊಮ್ಮಿಕೊಂಡಿದೆ. ಇದು ತನ್ನ ಪವಿತ್ರ ಸ್ಥಳದಿಂದ ಹೆಸರುವಾಸಿಯಾಗಿದೆ. ಟ್ಯಾಕ್ಸಿ ಮತ್ತು ಆಟೋ ಮೂಲಕ ಸುಲಭವಾಗಿ ತಲುಪಬಹುದು.