Search
  • Follow NativePlanet
Share
ಮುಖಪುಟ » ಸ್ಥಳಗಳು » ಲಾತೂರ್ » ಹವಾಮಾನ

ಲಾತೂರ್ ಹವಾಮಾನ

ಪ್ರಾಕೃತಿಕ ಸೌಂದರ್ಯ, ನದಿಗಳು, ಮತ್ತು ಹೊರಾಂಗಣಗಳ ಆಕರ್ಷಣೆಯ ದೃಷ್ಟಿಯಿಂದ, ಮಳೆಗಾಲದ ತಿಂಗಳುಗಳು ಲಾತೂರ್ ಅನ್ನು ಸಂದರ್ಶಿಸಲು ಪ್ರಶಸ್ತ ಕಾಲವಾಗಿದೆ.  ಜುಲೈ ನಿಂದ ಅಕ್ಟೋಬರ್ ವರೆಗಿನ ತಿಂಗಳುಗಳು ಮಳೆಗಾಲದ ಅವಧಿಯಾಗಿದೆ.

ಬೇಸಿಗೆಗಾಲ

ಬಿಸಿಯಾದ ಮತ್ತು ಒಣ ಬೇಸಿಗೆಗಳಿಗೆ ಲಾತೂರ್ ಸಾಕ್ಷೀಭೂತವಾಗಿದ್ದರೂ ಕೂಡ ಸಂಜೆಯ ವೇಳೆ ಹೊರಬಂದು ಐತಿಹಾಸಿಕ ಸ್ಥಳಗಳನ್ನು ಶೋಧಿಸಲು ಅಥವಾ ಶಾಪಿಂಗ್ ಕೈಗೊಳ್ಳಲು ಅನುಕೂಲಕರವಾಗಿರುತ್ತದೆ.  ಉಷ್ಣತೆಯು 24 ಡಿಗ್ರಿ ಸೆಲ್ಷಿಯಸ್ ನಿಂದ ಅತೀ ಹೆಚ್ಚಿನ ತಾಪಮಾನವಾದ 39 ಡಿಗ್ರಿ ಸೆಲ್ಷಿಯಸ್ ನಷ್ಟರವರೆಗೆ ವ್ಯತ್ಯಯಗೊಳ್ಳುತ್ತದೆ.

ಮಳೆಗಾಲ

ಜುಲೈ ತಿಂಗಳಿನಿಂದ ಅಕ್ಟೋಬರ್ ತಿಂಗಳಿನವರೆಗಿನ ಅವಧಿಯು ಮಳೆಗಾಲವಾಗಿದ್ದು, ಈ ಅವಧಿಯಲ್ಲಿ ಹವಾಮಾನವು ಅತ್ಯುತ್ತಮವಾಗಿರುತ್ತದೆ ಹಾಗೂ ಪ್ರಕೃತಿ ಸೌಂದರ್ಯವೂ ಕೂಡ ಉತ್ತಮಗೊಳ್ಳುತ್ತದೆ.  ಇಲ್ಲಿನ ವಾರ್ಷಿಕ ಮಳೆಯು ಅನುಕೂಲಕರವಾದ 600 ಮಿ.ಮಿ. ನಿಂದ 800 ಮಿ.ಮಿ. ನ ವ್ಯಾಪ್ತಿಯಲ್ಲಿರುತ್ತದೆ. ಸಂಜೆಯ ವೇಳೆಗೆ ಈ ಅವಧಿಯಲ್ಲಿ ಉಷ್ಣಾಂಶವು 16 ಡಿಗ್ರಿ ಸೆಲ್ಷಿಯಸ್ ನಷ್ಟು ಕೆಳಮಟ್ಟಕ್ಕೆ ಕುಸಿಯುತ್ತದೆ.

ಚಳಿಗಾಲ

ಲಾತೂರ್ ಗೆ ಭೇಟಿ ನಿಡುವ ಅನೇಕ ಪ್ರವಾಸಿಗರ ಪಾಲಿಗೆ ಚಳಿಗಾಲದ ತಿಂಗಳುಗಳೂ ಕೂಡ ಅಪ್ಯಾಯಮಾನವಾದ ಕಾಲವಾಗಿರುತ್ತದೆ. ಚಳಿಗಾಲದಲ್ಲಿ ಇಲ್ಲಿನ ವಾತಾವರಣವು ಅತಿಯಾದ ಚಳಿಯಿಂದ ಕೂಡಿರುತ್ತದೆ.  ಗಮನಾರ್ಹವಾದ ಅಂಶವೇನೆಂದರೆ, ಶಿಲೆಗಳಿಂದ ಕಟ್ಟಲ್ಪಟ್ಟಿರುವ ಇಲ್ಲಿನ ಗುಹೆಗಳು ಮತ್ತು ಇತರ ಐತಿಹಾಸಿಕ ಆಕರ್ಷಣೆಗಳು, ಶಿಲೆಗಳಿಂದ ಹಿಡಿಯಲ್ಪಟ್ಟಿರುವ ತೇವಾಂಶದ ಕಾರಣದಿಂದ, ತಮ್ಮನ್ನು ದಿನವಿಡೀ ತಂಪಾಗಿರಿಸಿಕೊಳ್ಳಲು ಸಮರ್ಥವಾಗಿವೆ.   ಚಳಿಗಾಲದ ದಿನಗಳಲ್ಲಿ ಇಲ್ಲಿನ ಉಷ್ಣತೆಯು ಸರಿಸುಮಾರು 10 ಡಿಗ್ರಿ ಸೆಲ್ಷಿಯಸ್ ಗಳಷ್ಟು ಕೆಳಮಟ್ಟಕ್ಕೆ ಕೆಲವೊಮ್ಮೆ ತಲುಪುತ್ತದೆ ಎಂದು ವರದಿಯಾಗಿದೆ.