Search
  • Follow NativePlanet
Share
ಮುಖಪುಟ » ಸ್ಥಳಗಳು » ತುಳಜಾಪುರ್ » ಹವಾಮಾನ

ತುಳಜಾಪುರ್ ಹವಾಮಾನ

ಪ್ರವಾಸಿಗರು ತುಳಜಾಪುರಕ್ಕೆ ಚಳಿಗಾಲದಲ್ಲಿ ಭೇಟಿ ಕೊಡುವುದು ಉತ್ತಮ. ಆಗ ಇಲ್ಲಿ ವಾತಾವರಣವು ತಂಪಾದ ಮತ್ತು ಹಿತವಾದ ಹವಾಗುಣದಿಂದ ಕೂಡಿರುತ್ತದೆ. ಜುಲೈ ನಿಂದ ಮಾರ್ಚ್ ವರೆಗಿನ ಅವಧಿಯು ಇಲ್ಲಿ ತಂಪಾದ ಮಳೆಗಾಲದಿಂದ ಕೂಡಿದ್ದರು, ಚಳಿಗಾಲವೆ ತುಳಜಾಪುರಕ್ಕೆ ಭೇಟಿ ಕೊಡಲು ಅತ್ಯುತ್ತಮ ಕಾಲವಾಗಿದೆ. 

ಬೇಸಿಗೆಗಾಲ

ಬೇಸಿಗೆ ಕಾಲವು ತುಳಜಾಪುರದಲ್ಲಿ ಮಾರ್ಚ್ ನಿಂದ ಜೂನ್ ವರೆಗೆ ಇರುತ್ತದೆ. ಈ ಕಾಲವು ಇಲ್ಲಿ ಅತ್ಯಂತ ಬಿಸಿಲಿನಿಂದ ಕೂಡಿರುತ್ತದೆ, ಅಲ್ಲದೆ ಉಷ್ಣಾಂಶವು 42°ಸೆಲ್ಶಿಯಸ್ಸನ್ನು ದಾಟಿ ಮುಂದೆ ಹೋಗುವುದರಿಂದಾಗಿ ಮೈ ಸುಡುವ ಬಿಸಿಲು ಇರುತ್ತದೆ. ಪ್ರವಾಸಿಗರು ಈ ಕಾಲದಲ್ಲಿ ಇಲ್ಲಿಗೆ ಭೇಟಿಕೊಡುವುದನ್ನು ಮುಂದೂಡುವುದು ಉತ್ತಮ.

ಮಳೆಗಾಲ

ಮಳೆಗಾಲವು ತುಳಜಾಪುರದಲ್ಲಿ ಜುಲೈ ನಿಂದ ಸೆಪ್ಟಂಬರ್ ವರೆಗು ಇರುತ್ತದೆ. ಈ ಪ್ರಾಂತ್ಯದಲ್ಲಿ ಮಿತ ಪ್ರಮಾಣದ ಮಳೆಯಾಗುತ್ತದೆ. ಇದು ಬೇಸಿಗೆಯ ಸುಡುವ ಬಿಸಿಲಿನಿಂದ ಅತ್ಯಾವಶ್ಯಕವಾಗಿರುವ ಬಿಡುವು ನೀಡುತ್ತದೆ.

ಚಳಿಗಾಲ

ಚಳಿಗಾಲವು ಇಲ್ಲಿ ನವೆಂಬರ್ ನಿಂದ ಫೆಬ್ರವರಿ ವರೆಗೆ ಇರುತ್ತದೆ. ಆಗ ಇಲ್ಲಿ ಆರ್ದ್ರತೆಯ ಮಟ್ಟವು ಮಧ್ಯಮ ಪ್ರಮಾಣದಲ್ಲಿರುತ್ತದೆ ಹಾಗು ಉಷ್ಣಾಂಶವು ಕನಿಷ್ಠ 8°ಸೆಲ್ಶಿಯಸ್ ಇರುತ್ತದೆ.