ಮಹಾದೇವ ದೇವಾಲಯವು ಪರ್ಭಾನಿಯ ಪ್ರಮುಖ ಆಕರ್ಷಣೀಯ ದೇವಾಲಯವಾಗಿದೆ. ಇದು ಶಿವನಿಗಾಗಿ ನಿರ್ಮಿಸಲಾದ ದೇವಾಲಯ. ಇಲ್ಲಿನ ದೈವವನ್ನು ಮಹಾದೇವನೆಂದು ಕರೆಯುತ್ತಾರೆ.
ಮಾಳ್ವ ರಾಜಮನೆತನದ ಮಹಾರಾಣಿ ಪುಣ್ಯ ಶ್ಲೋಕ್ ಅಹಿಲ್ಯಾಬಾಯಿ ಹೋಳ್ಕರ್ 18 ನೇ ಶತಮಾನದಲ್ಲಿ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದರು.
ಮಹಾಶಿವರಾತ್ರಿ ಹಬ್ಬದ ಸಮಯದಲ್ಲಿ ಅಸಂಖ್ಯಾತ ಭಕ್ತಾಧಿಗಳು ಮತ್ತು ಪ್ರವಾಸಿಗರು ಶಿವನ ಅನುಗ್ರಹ ಪಡೆಯಲು ಇಲ್ಲಿಗೆ ಧಾವಿಸುತ್ತಾರೆ.