Search
  • Follow NativePlanet
Share
ಮುಖಪುಟ » ಸ್ಥಳಗಳು » ಪರ್ಭಾನಿ » ಹವಾಮಾನ

ಪರ್ಭಾನಿ ಹವಾಮಾನ

ಪರ್ಭಾನಿಯು ಮುಖ್ಯವಾಗಿ ವರ್ಷಪೂರ್ತಿ ಸಮಶೀತೋಷ್ಣ ಹವಾಗುಣವನ್ನು ಹೊಂದಿರುತ್ತದೆ. ಹಾಗಾಗಿ ಈ ಪ್ರಾಂತ್ಯಕ್ಕೆ ಯಾವಾಗ ಬೇಕಾದರು ಭೇಟಿ ಕೊಡಬಹುದು. ಮಳೆಗಾಲ ಮತ್ತು ಚಳಿಗಾಲಗಳು ಪ್ರವಾಸಿಗರು ಇಲ್ಲಿಗೆ ಭೇಟಿಕೊಡಲು ಮತ್ತು ಮೋಜು ಮಾಡಲು ಅತ್ಯಂತ ಸೂಕ್ತ ಕಾಲವಾಗಿದೆ.

ಬೇಸಿಗೆಗಾಲ

 ಮಾರ್ಚ್ ನಿಂದ ಮೇ ವರೆಗೆ ಪರ್ಭಾನಿಯಲ್ಲಿ ಬೇಸಿಗೆಕಾಲವಿರುತ್ತದೆ.  ಆಗ ಇಲ್ಲಿ ಕನಿಷ್ಠ ಉಷ್ಣಾಂಶವು 25°ಸೆಲ್ಶಿಯಸ್ ಇರುತ್ತದೆ ಹಾಗು ಗರಿಷ್ಠ ಉಷ್ಣಾಂಶವು 40°ಸೆಲ್ಶಿಯಸ್ ವರೆಗು ಏರುತ್ತದೆ. ಮೇ ತಿಂಗಳಿನಲ್ಲಿ ಇಲ್ಲಿ ಬಿಸಿಲು ಅಧಿಕವಾಗಿದ್ದರೂ, ಇತರ ಪ್ರಾಂತ್ಯಗಳಿಗೆ ಹೋಲಿಸಿದರೆ ಸಹಿಸಿಕೊಳ್ಳಬಹುದು ಎಂಬಷ್ಟು ಇರುತ್ತದೆ. ಈ ಕಾಲದಲ್ಲಿ ಇಲ್ಲಿಗೆ ಭೇಟಿಕೊಡುವುದು ಒಂದು ಒಳ್ಳೆಯ ಅಲೋಚನೆ ಎನ್ನಬಹುದು.

ಮಳೆಗಾಲ

ಮಳೆಗಾಲದಲ್ಲಿ ಪರ್ಭಾನಿಯು ನೈಋತ್ಯ ಮಾನ್ಸೂನ್ ಮಾರುತಗಳ ಪ್ರಭಾವದಿಂದಾಗಿ ಇಡೀ ಪ್ರಾಂತ್ಯದಲ್ಲಿಯೆ ಸ್ವಲ್ಪ ಹೆಚ್ಚಿನ ಪ್ರಮಾಣದ ಮಳೆಯನ್ನು ಪಡೆಯುತ್ತದೆ. ಮಳೆ ಇಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಹೆಚ್ಚಿರುತ್ತದೆ.ಮಳೆಗಾಲದ ನಂತರದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಇಲ್ಲಿ ಅಲ್ಪ ಪ್ರಮಾಣದ ಮಳೆ ಬೀಳುತ್ತದೆ. ಈ ಕಾಲದಲ್ಲಿ ಇಲ್ಲಿನ ಹವಾಮಾನ ಅತ್ಯಂತ ಆಹ್ಲಾದಕರವಾಗಿ ಮತ್ತು ಹಿತವಾಗಿದ್ದು ಭೇಟಿಕೊಡಲು ಅತ್ಯಂತ ಪ್ರಶಸ್ತವಾಗಿರುತ್ತದೆ.

ಚಳಿಗಾಲ

ಪರ್ಭಾನಿಯಲ್ಲಿ ಚಳಿಗಾಲವು ಡಿಸೆಂಬರ್ ನಿಂದ ಫೆಬ್ರವರಿ ವರೆಗೆ ಇರುತ್ತದೆ. ಆಗ ಇಲ್ಲಿನ ಉಷ್ಣಾಂಶವು ಕನಿಷ್ಠ 15°ಸೆಲ್ಶಿಯಸ್ ನಿಂದ ಗರಿಷ್ಠ 30°ಸೆಲ್ಶಿಯಸ್ ವರೆಗು ಇರುತ್ತದೆ. ಡಿಸೆಂಬರ್ ತಿಂಗಳು ಈ ಪ್ರದೇಶದಲ್ಲಿ ಅತ್ಯಂತ ಚಳಿಯಿಂದ ಕೂಡಿರುತ್ತದೆ.