Search
  • Follow NativePlanet
Share
ಮುಖಪುಟ » ಸ್ಥಳಗಳು » ಎಲ್ಲೋರಾ » ಆಕರ್ಷಣೆಗಳು » ಬೌದ್ಧ ಗುಂಪಿನ ಗುಹೆಗಳು

ಬೌದ್ಧ ಗುಂಪಿನ ಗುಹೆಗಳು, ಎಲ್ಲೋರಾ

11

ಗುಹೆ 1

ಈ ಸಾಲಿನಲ್ಲಿ ನಿರ್ಮಾಣಗೊಂಡ ಮೊದಲ ಗುಹೆ ಇದು, ದಕ್ಷಿಣದ ಕಡೆಗೆ ನಿರ್ಮಿಸಿದ ಇದು ಬೌದ್ಧ ಸಂಪ್ರದಾಯದ್ದು. ಇದು ಕೇವಲ ನಾಲ್ಕು ಕೋಣೆಗಳನ್ನು ಹೊಂದಿದ್ದು, ಯಾವುದೇ ಮೂರ್ತಿಯನ್ನು ಹೊಂದಿಲ್ಲ.

ಗುಹೆ 2

ಬುದ್ಧನಿಗಾಗಿ ನಿರ್ಮಿಸಿದ ಇನ್ನೊಂದು ಗುಹೆ ಇದು. ಉದ್ದವಾದ ಮೆಟ್ಟಿಲುಗಳ ಕೊನೆಯಲ್ಲಿ ಈ ಗುಹೆ ಇದೆ. ಇಲ್ಲಿ ಬುದ್ಧನ ಅಪೂರ್ಣಗೊಂಡು, ಮೂರ್ತಿಯು ಮಂಟಪವನ್ನು ಹೊಂದಿದೆ. ಈಗ ಈ ಮೂರ್ತಿಯು ಗ್ಯಾಲರಿಯಲ್ಲಿದೆ. ಇಲ್ಲಿ ಕಾಣುವ ಮೂರ್ತಿಗಳು ವೈಭವಯುತವಾಗಿದ್ದು, ದೊಡ್ಡದಾಗಿವೆ. ಐಶ್ವರ್ಯ, ಪಂಚಿಕಾ, ಮತ್ತು ಸಮೃದ್ಧಿಯ ದೇವರಾದ ಹರಿತಿಯ ಮೂರ್ತಿಯನ್ನೂ ಸಹ ಇಲ್ಲಿ ನೋಡಬಹುದು.

ಗುಹೆ 3

ಐತಿಹಾಸಿಕ ಮಹತ್ವದ ಇನ್ನೊಂದು ಗುಹೆ ಇದು. ಈ ಗುಹೆಯು ಬುದ್ಧನ ಅಪೂರ್ಣ ಮೂರ್ತಿಯನ್ನು ಹೊಂದಿದೆ. ಬುದ್ಧನ ಮೂರ್ತಿಯು ಕುಳಿತಂತಹ ಸ್ಥಿತಿಯಲ್ಲಿದ್ದು, ಇತರ ಸಂಜ್ಞೆಗಳು ಮತ್ತು ಸಣ್ಣ ಕೆತ್ತನೆಗಳು ಅಲಂಕೃತಗೊಂಡಿವೆ.

ಗುಹೆ 4

ಹಿಂದೊಮ್ಮೆ ದೊಡ್ಡದಾದ, ಎರಡು ಮಳಿಗೆಯನ್ನು ಹೊಂದಿದ್ದ ನಾಲ್ಕನೇ ಗುಹೆಯು ಈಗ ಹಾಳಾಗಿದೆ. ಈ ಗುಹೆಯಲ್ಲೂ ಕೂಡಾ ಕುಳಿತಿರುವ ಬುದ್ಧನ ಮೂರ್ತಿಯಿದೆ.

ಗುಹೆ 5

117 ಅಡಿ ಆಳದ, 59 ಅಡಿ ಅಗಲದ ಈ ಗುಹೆಯು ಒಂದು ವಿಹಾರವಾಗಿದ್ದು, ಇದನ್ನು ಮಹಾರ್ವಾಡ ಎಂದು ಕರೆಯಲಾಗಿದೆ. ಬುದ್ಧನ ಸುಂದರವಾದ ಆಕೃತಿಯ ಪಕ್ಕದಲ್ಲಿ ಬೌದ್ಧ ಭಿಕ್ಕುಗಳಿಗೆಂದು ಸುಮಾರು 20 ಕೋಣೆಗಳಿವೆ. ಇಲ್ಲಿ ಎರಡು ಸಣ್ಣ ಮತ್ತು ದೊಡ್ಡ ಬೆಂಚ್‌ಗಳಿದ್ದು ಇವನ್ನು ಪ್ರವಾಸಿಗರು ನೋಡುವುದನ್ನು ತಪ್ಪಿಸಿಕೊಳ್ಳಬಾರದು.

ಗುಹೆ 6

ಈ ಗುಹೆಯು ಆಯತಾಕಾರದ ಹಾಲ್‌ ಹೊಂದಿದೆ. ಬೋಧಿಸತ್ವದ ಚಿತ್ರಗಳು, ಮಹಾಮಯೂರಿ ಮತ್ತು ತಾರಾದೇವಿಯ ಚಿತ್ರಗಳೂ ಕೂಡಾ ಇಲ್ಲಿವೆ.

ಗುಹೆ 7

ಉಳಿದೆಲ್ಲಾ ಗುಹೆಗಳಂತೆ ಈ ಗುಹೆಯು ಕೆತ್ತನೆಯನ್ನು ಹೊಂದಿಲ್ಲ. ಇದು ಕೇವಲ ಕಂಬಗಳಿಂದ ಕೂಡಿದ ಒಂದು ಹಾಲ್‌ನ್ನು ಮಾತ್ರ ಹೊಂದಿದ್ದು, ಸುಂದರವಾಗಿ ನಿರ್ಮಿಸಲಾಗಿದೆ.

ಗುಹೆ 8

ಹಿಂದೊಂದು ಕಾಲದಲ್ಲಿ ಈ ಗುಹೆಯಲ್ಲಿ ಬುದ್ಧನ ಅಮೂಲ್ಯವಾದ ಮೂರ್ತಿಯನ್ನು ನಿರ್ಮಿಸಲಾಗಿತ್ತು. ಈ ಗುಹೆಯಲ್ಲಿ ಓಡಾಡಬಹುದಾದಷ್ಟು ವಿಶಾಲವಾದ ಜಾಗವಿದೆ.

ಗುಹೆ 9

ಈ ಗುಹೆಯಲ್ಲಿ ತಾರಾದೇವಿಯ ವಿಗ್ರಹವಿದ್ದು, ತನ್ನ ಶತ್ರುಗಳಾದ ಆನೆ, ಹಾವು, ಬೆಂಕಿ ಮತ್ತು ಹಡಗಿನಿಂದ ಸಂರಕ್ಷಿಸಲ್ಪಡುವ ದೃಶ್ಯವಿದೆ. ಗುಡಿಯ ಸಮೀಪದಲ್ಲೇ ಮುಕ್ತವಾದ ಮಹಡಿಯಿರುವುದನ್ನೂ ಕೂಡಾ ಪ್ರವಾಸಿಗರು ನೋಡಬಹುದು.

ಗುಹೆ 10

ಈ ಗುಹೆಯನ್ನು ಜನಪ್ರಿಯ ವಾಸ್ತುಶಿಲ್ಪಿ ವಿಶ್ವಕರ್ಮ ನಿರ್ಮಿಸಿದ ಎಂದು ಹೇಳಲಾಗುತ್ತದೆ. ಇದನ್ನು ಸುತಾರ್ ಕಾ ಝೋಪ್ರಾ ಎಂದೂ ಕೂಡಾ ಕರೆಯಲಾಗುತ್ತದೆ. ಎಂದರೆ ಕೆಲಸಗಾರನ ಮನೆ ಎಂದರ್ಥ. ವಿಶ್ವಕರ್ಮರಿಗೆ ನಮಸ್ಕರಿಸುವುದಕ್ಕೆ ಕೆಲಸಗಾರರು ಇಲ್ಲಿಗೆ ಬರುತ್ತಿದ್ದರು. ಒಂದು ಚೈತ್ಯಗೃಹ ಕೂಡಾ ಇಲ್ಲಿ ಲಭ್ಯವಿದೆ.

ನೀವು ಪ್ರವೇಶದ್ವಾರದಿಂದ ಆಗಮಿಸಿದರೆ, ಧರ್ಮಚಕ್ರ ಪ್ರವರ್ತನ ಮುದ್ರಾದಲ್ಲಿ ಕುಳಿತಿರುವ ಬುದ್ಧನ ವಿಗ್ರಹವನ್ನು ನೋಡುತ್ತೀರಿ, ಇದು ಸುಮಾರು 11 ಅಡಿ ಎತ್ತರವಿದೆ.

ಭಾರತದಲ್ಲಿ ಚೈತ್ಯರ ಆಡಳಿತದಲ್ಲಿನ ಪ್ರಮುಖ ಸೂಚಕ ಎಂದು ಗುರುತಿಸಲಾಗಿದೆ.

ಗುಹೆ 11 (ದೋ ತಾಲ್‌)

ದೋ ತಾಲ್‌ ಎಂದರೆ ಶಬ್ದಶಃ ಅರ್ಥ ಎರಡು ಮಹಡಿ ಎಂದು ಆಗುತ್ತದೆ. ಹಾಗಿದ್ದಾಗ್ಯೂ, ಗುಹೆಯು ಮೂರು ಮಹಡಿಯನ್ನು ಹೊಂದಿದೆ. ಆದರೂ ಕೂಡಾ ಗುಹೆಗೆ ತೀನ್‌ ತಾಲ್‌ ಎಂದು ಹೆಸರಿಸದೇ ದೋ ತಾಲ್‌ ಎಂದು ಹೆಸರಿಸಲಾಗಿದೆ. ನೆಲಮಹಡಿಯನ್ನು ಇಲ್ಲಿ ಗಣನೆಗೆ ತೆಗೆದುಕೊಂಡಿಲ್ಲ.

ಈ ಗುಹೆಯಲ್ಲಿ ಬುದ್ಧ ಕುಳಿತಿರುವ ರೀತಿಯಲ್ಲಿನ ಮೂರ್ತಿ ಸ್ಥಾಪಿಸಲಾಗಿದೆ. ಗಣೇಶ ಮತ್ತು ದುರ್ಗೆಯ ಮೂರ್ತಿ ಕೂಡಾ ಇಲ್ಲಿದೆ.

ಗುಹೆ 12(ತೀನ್‌ ತಾಲ್‌)

ಮಹಾರಾಷ್ಟ್ರದಲ್ಲೇ ಇದು ಅತ್ಯಂತ ದೊಡ್ಡ ಐತಿಹಾಸಿಕ ಸ್ಥಳವಾಗಿದೆ. ಇದು ಮೂರು ಮಹಡಿಯದ್ದು. ವಿಶಾಲವಾದ ಪ್ರವೇಶದ್ವಾರದಿಂದ ನೀವು ಒಳಬಂದರೆ ಅಲ್ಲೊಂದು ವಿಶಾಲವಾದ ಹಾಲ್‌ ಕಾಣುತ್ತೀರಿ. ಅಲ್ಲಿ ಆಯಾ ಮಹಡಿಗೆ ಹೋಗಲು ಪ್ರತ್ಯೇಕ ಮೆಟ್ಟಿಲುಗಳಿವೆ. ಈ ಹಾಲ್‌ನಲ್ಲಿ ಹಲವು ಸ್ತಂಭಗಳು, ಚಿತ್ರಗಳು ಮತ್ತು ಕುಳತಿರುವ ಬುದ್ಧನ ವಿಗ್ರಹಗಳಿವೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat