ವಲ್ಸಾದ್ ಜಿಲ್ಲೆಯಲ್ಲಿ, ಸಂಜನ್ ಎಂಬುದು ಒಂದು ಸಣ್ಣ ಪಟ್ಟಣ ಮತ್ತು ಪಾರ್ಸಿಗಳು ನೆಲೆಸಿರುವಂಥಹ ಸ್ಥಳ. ಜೊರಾಸ್ಟ್ರಿಯನ್ ಆಶ್ರಯಾರ್ಥಿಗಳು, ಇರಾನ್ ನಿಂದ ಪಲಾಯನ ಮಾಡಿದಾಗ ಭಾರತದ ಗುಜರಾತ್ ಗೆ ಬಂದು ಸಂಜನ್ ಎಂಬ ಪಟ್ಟಣವನ್ನು ಸ್ಥಾಪಿಸಿ ಅಲ್ಲಿಯೇ ನೆಲೆಸಿದರು. ಪ್ರಸ್ತುತ ವಾಸಿಸುತ್ತಿರುವ ಪಾರ್ಸಿಗಳು, ಈ ಜೊರಾಸ್ಟ್ರಿಯನ್ ವಂಶಜರೆಂದೇ ನಂಬಿಕೆ ಇದೆ.
1917ನೇ ಇಸವಿಯಲ್ಲಿ, ಸಂಜನ್ ಮೆಮೋರಿಯಲ್ ಕಾಲಮ್ ಅನ್ನು ಈ ನಗರದಲ್ಲಿ ಕಟ್ಟಿಸಲಾಯಿತು. ಇದನ್ನು ಭಾರತಕ್ಕೆ ಪಾರ್ಸಿಗಳ (ಜೊರಾಸ್ಟ್ರಿಯನ್) ಆಗಮನದ ಜ್ಞಾಪಕಾರ್ಥವಾಗಿ ಕಟ್ಟಿಸಲಾಗಿದೆ ಎಂದು ಹೇಳಲಾಗಿದೆ. ಜೊರಾಸ್ಟ್ರಿಯನ್ನರ ಇರುವಿಕೆಯನ್ನು ರುಜುವಾತು ಮಾಡಲು ತಜ್ಞರಿಂದ ಸಂಶೋಧನ ಕಾರ್ಯವು 2002ನೇ ಇಸವಿಯಿಂದ ಜಾರಿಯಲ್ಲಿದೆ.