Search
  • Follow NativePlanet
Share
ಮುಖಪುಟ » ಸ್ಥಳಗಳು» ಚಂಪಾನೇರ್

ಚಂಪಾನೇರ್: ಆನಂದಪರವಶಗೊಳಿಸುವ ತಾಣ!

30

ಚಂಪಾನೇರನ್ನು ಚಾವ್ಡಾ ವಂಶದ ರಾಜ ವನ್ರಾಜ್ ಚಾವ್ಡಾ ಸ್ಥಾಪಿಸಿದ ಮತ್ತು ತನ್ನ ಮಂತ್ರಿ ಚಂಪಾರಾಜನ ಹೆಸರಿಟ್ಟನು. ಕೆಲವರ ಪ್ರಕಾರ ಈ ಹೆಸರು ‘ಚಂಪಕ’ ಹೂವಿನಿಂದ ಬಂದಿದೆ. ಏಕೆಂದರೆ ಈ ಪ್ರದೇಶದಲ್ಲಿರುವ ಕಲ್ಲುಗಳು ಹೂವಿನಂತೆ ತಿಳಿ ಹಳದಿ ಬಣ್ಣದಲ್ಲಿವೆ. ಪಾವಗಡದ ಕೋಟೆಯನ್ನು ಖಿಚಿ ಚೌವ್ಹಾನ್ ರಜಪೂತರು ಚಂಪನೇರದಿಂದ ಸ್ವಲ್ಪ ಮೇಲೆ ಕಟ್ಟಿದರು.

ನಂತರದಲ್ಲಿ ಇದನ್ನು ಮಹಮದ್ ಬೆಗ್ದಾ ಆಕ್ರಮಿಸಿದನು. ಈತ ತನ್ನ ರಾಜಧಾನಿಯನ್ನು ಇಲ್ಲಿ ಸ್ಥಾಪಿಸಿದನು ಮತ್ತು ಇದಕ್ಕೆ ಮಹಮುದಾಬಾದ್ ಎಂದು ಹೆಸರಿಟ್ಟು ಈ ನಗರವನ್ನು ಪುನರ್ನಿಮಿಸಲು ಮತ್ತು ಅಲಂಕರಿಸಲು 23 ವರ್ಷಗಳನ್ನು ತೆಗೆದುಕೊಂಡನಂತೆ. ನಂತರ ಮೊಘಲರ ಕಾಲದಲ್ಲಿ ಈ ರಾಜಧಾನಿಯನ್ನು ಅಹಮದಾಬಾದಿಗೆ ಸ್ಥಳಾಂತರಿಸಲಾಯಿತು ಮತ್ತು ಚಂಪನೇರ್ ತನ್ನ ವೈಭವ ಮತ್ತು ಮಹತ್ವವನ್ನು ಕಳೆದುಕೊಂಡಿತು.

ಅನೇಕ ವರ್ಷಗಳವರೆಗೆ ಇದು ಕಾಡಿನ ಭಾಗವಾಗಿತ್ತು. ಬ್ರಿಟೀಷರು ಕೈಗೊಂಡ ಸರ್ವೆಗಳಿಂದಾಗಿ ಇದು ಬೆಳಕು ಕಂಡಿತು. ಜನರು ಇದರ ವಾಸ್ತುಶಿಲ್ಪ ವೈಭವವನ್ನು ನೋಡಲು ಇಲ್ಲಿಗೆ ಬರುತ್ತಾರೆ. ಚಂಪನೇರ್ನಲ್ಲಿ ಭೇಟಿ ನೀಡಬೇಕಾದ ಮಸೀದಿಗಳೆಂದರೆ ಚಂಪನೇರ್ನ ಮಸೀದಿ, ಸಿಕಂದರ್ ಷಾನ ಗುಮ್ಮಟ, ಹಲೊಲ್, ಸಕಾರ್ ಖಾನ್ ದರ್ಗಾ, ಮಕಾಯಿ ಕೊಥಾರ್/ನವ್ಲಾಖಾ ಕೊಥಾರ್, ಸಿಟಡೆಲ್, ಹೆಲಿಕಲ್ ಮೆಟ್ಟಿಲುಗಳ ಬಾವಿ, ಇಟ್ಟಿಗೆಯ ಗುಮ್ಮಟ, ಪಾವಗಡದ ಕೋಟೆ ಮತ್ತು ದೇವಾಲಯಗಳು, ಕೋಟೆಗಳ ದ್ವಾರಗಳು, ಜಂಬುಗೊಡ ವನ್ಯಜೀವಿಧಾಮ, ಕೆವ್ಡಿ ಇಕೋ ಕ್ಯಾಂಪ್ ಸೈಟ್,ಧನ್ಪಾರಿ ಇಕೋ ಕ್ಯಾಂಪ್ ಸೈಟ್ ಇತ್ಯಾದಿ.

ಪಾವಗಡ ಕೋಟೆಯ ಗೋಡೆಗಳು ಈಗಲೂ ಇವೆ. ವಡೋದ್ರದಿಂದ ಚಂಪನೇರ್ 45 ಕಿಮೀ ದೂರದಲ್ಲಿದೆ. ಇಲ್ಲಿಗೆ ಬಸ್ ಮತ್ತಿತರ ವಾಹನಗಳ ಮೂಲಕ ಸುಲಭವಾಗಿ ತಲುಪಬಹುದು. ಯುನೆಸ್ಕೋ ಪ್ರದೇಶವೆಂದು ಚಂಪನೇರ್ ಅನ್ನು 2004ರಂದು ಘೋಷಿಸಲಾಗಿದೆ.

ಹವಾಮಾನ

ಚಂಪನೇರ್ನಲ್ಲಿ ಹೆಚ್ಚು ಉಷ್ಣತೆಯ ಬೇಸಗೆ ಮತ್ತು ಸಾಧಾರಣ ಚಳಿಗಾಲವಿರುತ್ತದೆ. ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.

ಚಂಪಾನೇರ್ ಪ್ರಸಿದ್ಧವಾಗಿದೆ

ಚಂಪಾನೇರ್ ಹವಾಮಾನ

ಉತ್ತಮ ಸಮಯ ಚಂಪಾನೇರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಚಂಪಾನೇರ್

  • ರಸ್ತೆಯ ಮೂಲಕ
    ಚಂಪನೇರ್ಗೆ ಹೋಗಲು ಅತ್ಯಂತ ಸಸ್ತಾ ಮಾರ್ಗವೆಂದರೆ ರಸ್ತೆಯ ಮೂಲಕ ಹೋಗುವುದು. ಗುಜರಾತ್ ಸರ್ಕಾರವು ಅಹಮದಾಬಾದ್ ಮತ್ತು ವಡೋದ್ರದಿಂದ ಬಸ್ ಸೌಲಭ್ಯವನ್ನು ಒದಗಿಸಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಚಂಪನೇರ್ ರೈಲು ನಿಲ್ದಾಣವು ಗೋಧ್ರಾ ದಿಂದ ವಡೋದ್ರಾಕ್ಕೆ ಹೋಗುವ ಮಾರ್ಗದಲ್ಲಿದೆ. ಆದರೆ ಇಲ್ಲಿ ಹೆಚ್ಚು ನಿಯಮಿತ ರೈಲು ಸಂಚಾರವಿಲ್ಲ. ಇಲ್ಲಿಗೆ ಹತ್ತಿರದ ದೊಡ್ಡ ರೈಲು ನಿಲ್ದಾಣ ವಡೊದ್ರಾದಲ್ಲಿದ್ದು ಇದು ಚಂಪನೇರ್ನಲ್ಲಿ 53 ಕಿಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    42 ಕಿಮೀ ದೂರದಲ್ಲಿರುವ ವಡೋದ್ರಾ ವಿಮಾನ ನಿಲ್ದಾಣ ಇಲ್ಲಿಗೆ ಸಮೀಪದ ರೈಲು ನಿಲ್ದಾಣ. 125 ಕಿಮೀ ದೂರದ ಅಹಮದಾಬಾದಿನಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed