Search
  • Follow NativePlanet
Share
ಮುಖಪುಟ » ಸ್ಥಳಗಳು » ಸೂರತ್ » ಹವಾಮಾನ

ಸೂರತ್ ಹವಾಮಾನ

ಸೂರತ್ನಲ್ಲಿ ಉಷ್ಣವಲಯದ ಹವಾಮಾನವಿರುತ್ತದೆ. ಇಲ್ಲಿನ ಹವಾಮಾನದ ಮೇಲೆ ಅರೇಬಿಯನ್ ಸಮುದ್ರವು ಪ್ರಭಾವ ಬೀರುತ್ತದೆ. ಜೂನ್- ಸೆಪ್ಟಂಬರ್ವರೆಗೆ ಹೆಚ್ಚು ಮಳೆಯಾಗುತ್ತದೆ. ಮಾರ್ಚ್ನಿಂದ ಜೂನ್ವರೆಗೆ ಬೇಸಿಗೆ ಕಾಲವಿದ್ದು ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಹೆಚ್ಚಿನ ಉಷ್ಣತೆಯಿರುತ್ತದೆ. ಡಿಸಂಬರ್-ಫೆಬ್ರವರಿ ಚಳಿಗಾಲವಿರುತ್ತದೆ.

ಬೇಸಿಗೆಗಾಲ

ಸೂರತ್ನಲ್ಲಿ ಬೇಸಿಗೆಯಲ್ಲಿ ಉಷ್ಣತೆಯು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 40 ಡಿಗ್ರಿ ಸೆಲ್ಸಿಯಸ್ನಷ್ಟಿರುತ್ತದೆ. ಮಾರ್ಚ್-ಜೂನ್ ಬೇಸಿಗೆಕಾಲ.

ಮಳೆಗಾಲ

ಮಳೆಗಾಲವು ಜೂನ್-ಸೆಪ್ಟಂಬರ್ವರೆಗಿರುತ್ತದೆ. ಈ ಸಮಯದಲ್ಲಿ ಉಷ್ಣತೆಯು 19 ಡಿಗ್ರಿ-32 ಡಿಗ್ರಿ ಸೆಲ್ಸಿಯಸ್ವರೆಗಿರುತ್ತದೆ. ಈ ಸಮಯದಲ್ಲಿ ತಾಪಿ ನದಿ ತೀರದಲ್ಲಿ ಪ್ರವಾಹ ಉಂಟಾಗಬಹುದು.

ಚಳಿಗಾಲ

ಡಿಸಂಬರ್-ಫೆಬ್ರವರಿ ಚಳಿಗಾಲ. ಅಕ್ಟೋಬರ್ನಲ್ಲಿ ಚಳಿಗಾಲ ಅಡಿಯಿಡಲು ಆರಂಭಿಸುತ್ತದೆ. ಚಳಿಗಾಲದಲ್ಲಿ ಉಷ್ಣತೆಯು 6 ಡಿಗ್ರಿಯಿಂದ 33 ಡಿಗ್ರಿ ಸೆಲ್ಸಿಯಸ್ವರೆಗಿರುತ್ತದೆ. ಈ ಸಮಯದಲ್ಲಿ ಮಳೆಯಾಗುವ ಸಂಭವ ಕೂಡ ಇರುತ್ತದೆ.