ಟ್ರಿಪೋಲಿಯಾವು 1417ರಲ್ಲಿ ಯೋಧ ಸಾಬರ್ತ ಪಾಲ್ ನೆನಪಿಗೆ ನಿರ್ಮಿಸಿದ ಕಟ್ಟಡ. ಇದು ಸಮತಟ್ಟಾದ ಡೋಮ್ನ್ನು ಹೊಂದಿದ್ದು ನಾಲ್ಕು ಪ್ರವೇಶದ್ವಾರವನ್ನು ಹೊಂದಿದೆ. ಈ ಪ್ರದೇಶವು ಅಲ್ವಾರಿನಲ್ಲಿಯೇ ಬ್ಯುಸಿ ಇರುವ ಪ್ರದೇಶವಾಗಿದೆ. ಉತ್ತರದಲ್ಲಿ ಮುನ್ಷಿ ಬಝಾರ್, ದಕ್ಷಿಣದಲ್ಲಿ ಮಲಖೇರಾ ಬಜಾರ್ ಮತ್ತು ಪೂರ್ವದಲ್ಲಿ ಅರಾಫಾ ಬಜಾರುಗಳಿವೆ. ಎಲ್ಲಾ ಹಳೆಯ ಮಾರುಕಟ್ಟೆಗಳು ಚುನ್ನದ ಆಭರಣಗಳು ಮತ್ತು ಬಟ್ಟೆಗಳಿಗೆ ಜನಪ್ರಿಯವಾಗಿದೆ. ಈ ಪ್ರದೇಶದಲ್ಲಿ ಮಹಾದೇವಜಿ ದೇವಸ್ಥಾನವಿದ್ದು, ಇದು ಪ್ರವಾಸಿಗರಿಗೆ ಪ್ರಮುಖ ತಾಣವಾಗಿದೆ. ಸಮಾಧಿಯಲ್ಲಿ ಸೌಬರ್ದ ಪಾಲ್ ಕಾಲದ ಹಲವು ಕಲಾಕೃತಿಗಳ ಮ್ಯೂಸಿಯಂ ಆಗಿದೆ.