Search
  • Follow NativePlanet
Share
ಮುಖಪುಟ » ಸ್ಥಳಗಳು » ಗುರ್ಗಾಂವ್ » ಹವಾಮಾನ

ಗುರ್ಗಾಂವ್ ಹವಾಮಾನ

ವರ್ಷಪೂರ್ತಿ ಇಲ್ಲಿಗೆ ಭೇಟಿ ನೀಡಬಹುದು. ಆದರೂ ಚಳಿಗಾಲ ಇಲ್ಲಿಯ ಭೇಟಿಗೆ ಸೂಕ್ತ ಸಮಯ. ಈ ಸಮಯದಲ್ಲಿ ಹವಾಮಾನವು ಆಹ್ಲಾದಕರವಾಗಿರುತ್ತದೆ ಮತ್ತು ಸುತ್ತಾಟಕ್ಕೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ಉಷ್ಣತೆಯು ಕಡಿಮೆಯಿರುವುದರಿಂದ ಎಲ್ಲ ಬಗೆಯ ಚಟುವಟಿಕೆಗಳಿಗೆ ಇದು ಅನುಕೂಲಕರ ಸಮಯ.

ಬೇಸಿಗೆಗಾಲ

ಏಪ್ರಿಲ್-ಜುಲೈ ಇಲ್ಲಿ ಬೇಸಿಗೆ ಕಾಲ. ಮೇ ಮತ್ತು ಜೂನ್ ತಿಂಗಳುಗಳಲ್ಲಿ ಇಲ್ಲಿ ಉಷ್ಣತೆಯು 49 ಡಿಗ್ರಿ ಸೆಲ್ಸಿಯಸ್ಗಳಷ್ಟಿರುತ್ತದೆ. ಇದು ಪ್ರವಾಸಕ್ಕೆ ಸೂಕ್ತ ಸಮಯವಲ್ಲ.

ಮಳೆಗಾಲ

ಜುಲೈ- ಸೆಪ್ಟಂಬರ್ ಮಳೆಗಾಲ. ಗುರ್ಗಾಂವ್ನಲ್ಲಿ ವಾರ್ಷಿಕ ಸರಾಸರಿ 714 ಮಿಲಿ ಮೀಟರ್ ಮಳೆಯಾಗುತ್ತದೆ. ಮಳೆಗಾಲದಲ್ಲಿ ಧಗೆ ಹೆಚ್ಚಾಗಿರುತ್ತದೆ. ಇದು ಕೂಡ ಪ್ರಯಾಣಕ್ಕೆ ಸೂಕ್ತ ಸಮಯವಲ್ಲ.

ಚಳಿಗಾಲ

ನವಂಬರ್-ಜನವರಿ ಚಳಿಗಾಲ. ಈ ಸಮಯದಲ್ಲಿ ಉಷ್ಣತೆಯು 4 ಡಿಗ್ರಿ ಸೆಲ್ಸಿಯಸ್ಗಳಿಗೆ ಕುಸಿಯಬಹುದು. ಕೆಲವೊಮ್ಮೆ ಮಾರ್ಚ್ವರೆಗೂ ಚಳಿಗಾಲವಿರುತ್ತದೆ. ಈ ಸಮಯದಲ್ಲಿ ರಾತ್ರಿಗಳಲ್ಲಿ ದಿಢೀರ್ ಎಂದು ಉಷ್ಣತೆಯು ಕುಸಿಯುವ ಸಾಧ್ಯತೆಯಿರುವುದರಿಂದ ಬೆಚ್ಚನೆಯ ಉಡುಪುಗಳನ್ನು ಕೊಂಡೊಯ್ಯುವುದು ಉತ್ತಮ.