1986ರಲ್ಲಿ ಬಹಾಯಿ ಸಮುದಾಯದವರು ನಿರ್ಮಿಸಿದ ತಾವರೆ ಆಕಾರದ ವಾಸ್ತುಶಿಲ್ಪದ ವಿಸ್ಮಯವೇ ಲೋಟಸ್ ಮಂದಿರ. ಇದನ್ನು 20ನೇ ಶತಮಾನದ ಆಧುನಿಕ ಭಾರತದ ತಾಜ್ ಮಹಲ್ ಎಂದೇ ಪರಿಗಣಿಸಲಾಗುತ್ತದೆ. ಇದು ದೆಹಲಿಯ ಭವ್ಯ ಕಟ್ಟಡ ಹಾಗೂ ಪ್ರತಿಮಾರೂಪದ ಮಾದರಿಯ ಸಂಕೇತವಾಗಿದೆ. ಮಂದಿರದ ವಾಸ್ತುಶಿಲ್ಪಕ್ಕಾಗಿ ಅಮೆರಿಕಾ ಮತ್ತು ಇಂಗ್ಲೆಂಡ್ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿವೆ.
ಅರ್ಧ ತೆರೆದ ಕಮಲದ ಹೂವಿನ ಆಕಾರದಲ್ಲಿರುವ ಈ ಮಂದಿರ ಶಾಂತಿ ಮತ್ತು ಆಧ್ಯಾತ್ಮಿಕತೆಗೆ ಸ್ವರ್ಗವಾಗಿದೆ. ಅಮೃತಶಿಲೆಗಳಿಂದಲೇ ಮಾಡಿದಂತಹ ಲಾನ್, ಉದ್ಯಾನ ಮತ್ತು ಸುಂದರವಾಗಿ ನಿರ್ಮಿಸಲಾಗಿರುವ ಕಟಕಟೆಯಿದೆ. ಮೆಟ್ಟಿಲು ಹಾಗೂ ಸೇತುವೆಗಳನ್ನು ಹೊಂದಿರುವ 9 ಕೆರೆಗಳಿವೆ.
ಮಂದಿರದಲ್ಲಿ ಪ್ರಾರ್ಥನೆಗೆ ಪ್ರಮುಖ ಹಾಲ್ ಇದ್ದು, ಇದು ಬೇಸ್ ಮೆಂಟ್ ನ ಮೇಲ್ಬಾಗದಲ್ಲಿದೆ. ಇದರಲ್ಲಿ ಸ್ವಾಗತ ಕೇಂದ್ರ, ಗ್ರಂಥಾಲಯ ಮತ್ತು ಆಡಳಿತ ವಿಭಾಗವಿದೆ. ಈ ಮಂದಿರದ ಪ್ರಮುಖ ಅಂಶವೆಂದರೆ ಪ್ರವಾಸಿಗರಿಗೆ ಇಲ್ಲಿ ದೇವಸ್ಥಾನದ ಬಗ್ಗೆ ಪ್ರಾಮುಖ್ಯ ಸೂಚನೆಗಳನ್ನು ಧ್ವನಿ ಮತ್ತು ದೃಶ್ಯ ಪ್ರಸ್ತುತಿ ಮೂಲಕ ನೀಡಲಾಗುತ್ತದೆ.
ಗಾಜು ಮತ್ತು ಸ್ಟೀಲ್ ನಿಂದ ಮಾಡಲಾಗಿರುವ ಮೇಲ್ಛಾವಣಿ ಮಂದಿರವನ್ನು ವಿಭಿನ್ನ ಹವಾಮಾನದಿಂದ ರಕ್ಷಿಸುತ್ತದೆ. ಗಾಜಿನ ಮೇಲ್ಛಾವಣಿಯಿಂದ ಮುಖ್ಯ ಹಾಲ್ ಗೆ ನೈಸರ್ಗಿಕ ಬೆಳಕು ಸಿಗುತ್ತದೆ.