ಸುಮಾರು 3.5 ಕಿ.ಮೀ. ವ್ಯಾಪ್ತಿಯಲ್ಲಿರುವ ಒಖ್ಲಾ ಅಣೆಕಟ್ಟು ಪಕ್ಷಿಧಾಮವು ಸ್ಥಳೀಯ ಹಾಗೂ ವಲಸೆ ನೀರಹಕ್ಕಿಗಳಿಗೆ ವಾಸದ ಧಾಮವಾಗಿದೆ. ನೊಯ್ಡಾದ ದೆಹಲಿಯ ಗಡಿಯಲ್ಲಿ ಉತ್ತರ ಪ್ರದೇಶದತ್ತ ಹರಿಯುವ ಯಮುನಾ ನದಿಯ ತಟದಲ್ಲಿ ಈ ಪಕ್ಷಿಧಾಮವಿದೆ.
ಯಮುನಾ ನದಿಗೆ ಕಟ್ಟಲಾಗಿರುವ ಅಣಿಕಟ್ಟಿನಿಂದಾಗಿ ಇಲ್ಲೊಂದು ಸುಂದರ ಸರೋವರವನ್ನು ನಿರ್ಮಿಸಲಾಗಿದ್ದು, ಇದು ಪಕ್ಷಿಧಾಮದ ಪ್ರಮುಖ ಆಕರ್ಷಣೆಯಾಗಿದೆ. ಈ ಸರೋವರವು ಒಖ್ಲಾ ಗ್ರಾಮದ ಪಶ್ಚಿಮ ಮತ್ತು ಗೌತಮ ಬುದ್ಧ ನಗರದ ಪೂರ್ವ ಭಾಗದ ಮಧ್ಯೆ ನಿರ್ಮಿಸಲಾಗಿದೆ.
ಪಕ್ಷಿತಜ್ಞರ ಪ್ರಕಾರ ಈ ಸರೋವರಕ್ಕೆ ಸುಮಾರು 315 ಜಾತಿಯ ವಲಸೆ ಪಕ್ಷಿಗಳು ಬರುತ್ತದೆ. ಇದರಲ್ಲಿ ಶೇ. 50ರಷ್ಟು ಪಕ್ಷಿಗಳು ತಂಪು ಪ್ರದೇಶಗಳಾದ ಟಿಬೆಟ್, ಯುರೋಪ್ ಮತ್ತು ಸೈಬೀರಿಯಾದಂತಹ ಪ್ರದೇಶಗಳಿಂದ ಚಳಿಗಾಲದ ವೇಳೆ ಇಲ್ಲಿಗೆ ಬಂದು ಸಮಯ ಕಳೆಯುತ್ತದೆ. ಚಳಿಗಾಲ ಆರಂಭವಾಗುವ ನವಂಬರ್ ತಿಂಗಳಲ್ಲಿ ಈ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತದೆ ಮತ್ತು ಮಾರ್ಚ್ ನಲ್ಲಿ ಬೇಸಿಗೆಗಾಲ ಆರಂಭವಾಗುತ್ತಿರುವಂತೆ ಅವುಗಳು ತಮ್ಮ ಊರಿಗೆ ತೆರಳುತ್ತದೆ.
1984ರಲ್ಲಿ ಅಗ್ರಾ ಚಾನೆಲ್ ನಿರ್ಮಿಸಿದ ಬಳಿಕ ಒಖ್ಲಾ ಪಕ್ಷಿಧಾಮವು ಪಕ್ಷಿ ಪ್ರಿಯರಿಗೆ ನೆಚ್ಚಿನ ತಾಣವಾಗಿದೆ.