ಸಿಕಂದರಾಬಾದ್ ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿದ್ದು, ರಾಜ್ಯದ ಪ್ರಮುಖ ನಗರಗಳಿಗೆ, ಜಿಲ್ಲೆಗಳೊಂದಿಗೆ ಉತ್ತಮ ಸಂಪರ್ಕದಲ್ಲಿದೆ. ಈ ಐತಿಹಾಸಿಕ ನಗರವನ್ನು ಸಿಕಂದರ್ ಲೋಧಿ 1498 ರಲ್ಲಿ ನಿರ್ಮಿಸಿದ. ಈ ಪ್ರದೇಶವು ಪುರಾತನ ಸ್ಮಾರಕವನ್ನು ಹೊಂದಿದ್ದು ಅದರಲ್ಲಿ ಪ್ರಮುಖವಾಗಿ ಚಿಸ್ತಿ ಸಾಹೇಬ್ ಕೂಡಾ ಒಂದು. ಈ ನಗರ ಕೈಗಾರಿಕ ಕೇಂದ್ರ ಕೂಡಾವಾಗಿದ್ದು, ಇಲ್ಲಿ ಶೀತಲ ಘಟಕಗಳು ಮತ್ತು ಪೈಪ್ ಕಾರ್ಖಾನೆಗಳಿವೆ. ಇದು ಹೈನು ಕೇಂದ್ರವೂ ಹೌದು.