Search
  • Follow NativePlanet
Share
ಮುಖಪುಟ » ಸ್ಥಳಗಳು » ಘಜಿಯಾಬಾದ್ » ಆಕರ್ಷಣೆಗಳು » ಲೋನಿ

ಲೋನಿ, ಘಜಿಯಾಬಾದ್

1

ಲೋನಿ ಎಂಬ ಐತಿಹಾಸಿಕ ಹಿನ್ನಲೆಯ ಪಟ್ಟಣದ ಆರಂಭಕಾಲವು ನಮ್ಮನ್ನು ರಾಮಾಯಣದ ಕಾಲದಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ನಂಬಿಕೆಗಳ ಪ್ರಕಾರ ಶತ್ರುಘ್ನನು ಇಲ್ಲಿ ಲವಣಾಸುರನೆಂಬ ರಾಕ್ಷಸನನ್ನು ಕೊಂದನಂತೆ.

ಮತ್ತೊಂದು ದಂತ ಕತೆಯ ಪ್ರಕಾರ ಈ ಪಟ್ಟಣವನ್ನು ಲೊಂಕರನ್ ಎಂಬ ರಾಜ ನಿರ್ಮಿಸಿದನಂತೆ. ಹಾಗಾಗಿಯೇ ಆತ ನಿರ್ಮಿಸಿದ ಕೋಟೆಗೆ ಲೋನಿ ಎಂಬ ಹೆಸರು ಬಂದಿತು. ಈ ಕೋಟೆಯು 1789ರಲ್ಲಿ ಮಹಮ್ಮದ್ ಶಾ ನಿಂದ ನಾಶವಾಗುವವರೆಗು ಸದೃಢವಾಗಿ ತನ್ನ ಕಾರ್ಯವನ್ನು ನಿರ್ವಹಿಸಿತ್ತು. ಮಹಮ್ಮದ್ ಶಾನು ಈ ಕೋಟೆಯಲ್ಲಿನ ಕಲ್ಲುಗಳನ್ನು ಮತ್ತು ಇತರ ಕಟ್ಟಡ ನಿರ್ಮಾಣ ವಸ್ತುಗಳನ್ನು ಒಂದು ಉದ್ಯಾನವನ ಹಾಗು ಕೊಳವನ್ನು ನಿರ್ಮಿಸಲು ಬಳಸಿದನಂತೆ

ಇತಿಹಾಸಕಾರರ ಪ್ರಕಾರ ಲೋನಿಯು ಅದ್ಭುತ ವೀರನಾಗಿದ್ದ, ರಾಜ ಪೃಥ್ವಿರಾಜ ಚೌಹನನ ರಾಜ್ಯದ ಒಂದು ಭಾಗವಾಗಿತ್ತು. ಈತನು ನಿರ್ಮಿಸಿದ ಕೋಟೆಯ ಅವಶೇಷಗಳನ್ನು ನಾವು ಇಂದಿಗು ಕಾಣಬಹುದು. ಮೊಘಲರ ಅವಧಿಯಲ್ಲಿ ನಿರ್ಮಾಣಗೊಂಡ ಮೂರು ತೋಟಗಳನ್ನು ಈ ನಗರದಲ್ಲಿ ಕಾಣಬಹುದು. ಅವುಗಳನ್ನು ಕ್ರಮವಾಗಿ ಕಾರಂಜಿ ಬಾಗ್, ಉಲ್ಡಿಪುರ್ ಮತ್ತು ರಣಪ್ ತೋಟಗಳೆಂದು ಕರೆಯಲಾಗುತ್ತದೆ.

ಮೊದಲೆರಡು ತೋಟಗಳನ್ನು ಮೊಘಲ್ ದೊರೆ ಬಹದ್ದೂರ್ ಶಾ ಜಾಫರ್ ರವರ ಮಡದಿ ಜೀನತ್ ಮಹಲ್ ಪ್ರಾರಂಭಿಸಿದರು. ಬ್ರಿಟೀಷ್ ಸರ್ಕಾರ ಈ ತೋಟಗಳನ್ನು ಜಫ್ತಿ ಮಾಡಿ, ಮೀರತ್ತಿನ ಶೈಖ್ ಇಲಾಹಿ ಬಕ್ಷ್ ಎಂಬಾತನಿಗೆ ಮಾರಿಬಿಟ್ಟಿತು. ಮೂರನೆಯ ತೋಟ ರಣಪ್‍ನ ರಕ್ಷಣಾ ಗೋಡೆಗಳನ್ನು ಅಬಡಿ ಬಾಗ್ ರಣಪ್ ಎಂದು ಕರೆಯುತ್ತಾರೆ. ಇದನ್ನು ನಾವಿಂದಿಗು ನೋಡಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed