Search
 • Follow NativePlanet
Share
ಮುಖಪುಟ » ಸ್ಥಳಗಳು » ಘಜಿಯಾಬಾದ್ » ಆಕರ್ಷಣೆಗಳು » ಅಜ್ರರ

ಅಜ್ರರ, ಘಜಿಯಾಬಾದ್

1

ಅಜ್ರರ ಎಂಬುದು ಉತ್ತರ ಪ್ರದೇಶದ ಘಜಿಯಾಬಾದ್ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಹಿನ್ನಲೆಯ ಹಳ್ಳಿಯಾಗಿದೆ. ಇದು ಕಾಳಿ ನದಿಯ ದಂಡೆಯಲ್ಲಿ ನೆಲೆಗೊಂಡಿದೆ. ಈ ಹಳ್ಳಿಯು ಖಾರ್ಖೋಡ ಎಂಬ ತಾಲ್ಲೂಕು ಕೇಂದ್ರದಿಂದ ಅಂದಾಜು 7.5 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಊರಿಗೆ ಈ ಹೆಸರು ಅಜಯ್‍ಪಾಲ್ ಎಂಬ ಯೋಗಿಯಿಂದ ಬಂದಿತು. ಈತನು ಈ ಊರಿನಲ್ಲಿ ಒಂದು ದೇವಾಲಯವನ್ನು ನಿರ್ಮಿಸಿ, ಅದಕ್ಕೆ ಅಜಯ್‍ಪರ ಎಂಬ ನಾಮಕರಣವನ್ನು ಮಾಡಿದನು.

ಈ ಹಳ್ಳಿಯು ಹಲವು ಕಾರಣಗಳಿಂದಾಗಿ ಪ್ರವಾಸಿಗರನ್ನು ತನ್ನತ್ತ  ಆಕರ್ಷಿಸುತ್ತಿದೆ. ಈ ಊರು ಹಲವು ತಬಲಾ ಕಲಾವಿದರಿಗೆ ತವರೂರಾಗಿದೆ. ಈ ಊರು ತಬಲಾ ಪ್ರಕಾರದಲ್ಲಿ ತನ್ನದೇ ಆದ ಘರಾನಾ ಶೈಲಿಯನ್ನು ಸಹ ಹೊಂದಿದೆ. ಈ ಸಂಗೀತ ಪ್ರಕಾರವು ಈ ಊರಿನ ಹೆಸರಿನಿಂದ ಗುರುತಿಸಲ್ಪಟ್ಟು, ಅಜ್ರರ ಘರಾನ ಎಂಬ ಹೆಸರಿನಿಂದ ಖ್ಯಾತಿ ಪಡೆದಿದೆ. ಅಜ್ರರ ಘರಾನ ಎಂಬ ತಬಲಾ ವಾದನದ ಶೈಲಿಯನ್ನು ಮಿರೂ ಖಾನ್ ಮತ್ತು ಕಲ್ಲೂ ಖಾನ್ ಎಂಬ ಸಹೋದರರು ಅಭಿವೃದ್ಧಿಪಡಿಸಿದರು. ಈ ಇಬ್ಬರು ಈ ಕಲೆಯನ್ನು ದೆಹಲಿ ಘರಾನದ ಉಸ್ತಾದ್ ಸಿತಾಬ್ ಖಾನ್‍ರವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದರು. ಈ ಅವಳಿ ಕಲಾವಿದರು ತಬಲಾ ವಾದನದಲ್ಲಿ ಪರಿಪೂರ್ಣತೆಯನ್ನು ಸಾಧಿಸಿದ್ದಲ್ಲದೆ, ಅಜ್ರರ ಘರಾನವನ್ನು ತಬಲಾ ವಾದನದಲ್ಲಿ ಖ್ಯಾತಿ ಪಡೆದಿರುವ ಆರು ಘರಾನಗಳಲ್ಲಿ ಒಂದಾಗುವಂತೆ ಮಾಡಲು ಯಶಸ್ವಿಯಾದರು. ಇಂದು ತಬಲಾ ವಾದನಕ್ಕೆ ಒಂದು ಶಾಸ್ತ್ರೀಯ ತರಬೇತಿ ನೀಡಲು ಈ ಘರಾನವು ಒಂದು ಉತ್ತಮ ಆಯ್ಕೆಯಾಗಿದೆ.

One Way
Return
From (Departure City)
To (Destination City)
Depart On
18 Sep,Wed
Return On
19 Sep,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Sep,Wed
Check Out
19 Sep,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Sep,Wed
Return On
19 Sep,Thu
 • Today
  Ghaziabad
  35 OC
  95 OF
  UV Index: 9
  Haze
 • Tomorrow
  Ghaziabad
  33 OC
  91 OF
  UV Index: 9
  Sunny
 • Day After
  Ghaziabad
  33 OC
  92 OF
  UV Index: 9
  Sunny