Search
  • Follow NativePlanet
Share
ಮುಖಪುಟ » ಸ್ಥಳಗಳು » ಘಜಿಯಾಬಾದ್ » ಹವಾಮಾನ

ಘಜಿಯಾಬಾದ್ ಹವಾಮಾನ

ಘಜಿಯಾಬಾದ್‍ಗೆ ಭೇಟಿ ನೀಡಲು ನವೆಂಬರ್ ನಿಂದ ಏಪ್ರಿಲ್ ನಡುವಿನ ಅವಧಿಯು ಸೂಕ್ತ. ಆಗ ಇಲ್ಲಿನ ಹವಾಮಾನವು ಆಹ್ಲಾದಕರವಾಗಿರುತ್ತದೆ. ಉಳಿದ ಸಮಯದಲ್ಲಿ ಇಲ್ಲಿನ ಹವಾಮಾನವು ಆರ್ದ್ರತೆ ಮತ್ತು ಅಧಿಕ ಉಷ್ಣಾಂಶದಿಂದ ಕೂಡಿರುತ್ತದೆ. ಇಲ್ಲಿ ಉತ್ತಮ ಮಳೆಯು ಸಹ ಬೀಳುತ್ತದೆ. ಜುಲೈ ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಇಲ್ಲಿ ಮಳೆಗಾಲವಾಗಿರುತ್ತದೆ.

ಬೇಸಿಗೆಗಾಲ

ಇಲ್ಲಿ ಬೇಸಿಗೆಯು ಮಾರ್ಚ್ ನಿಂದ ಮೇವರೆಗೆ ಇರುತ್ತದೆ. ಆಗ ಇಲ್ಲಿನ ಉಷ್ಣಾಂಶವು 22° ಯಿಂದ 40° ಸೆಲ್ಶಿಯಸ್‍ವರೆಗೆ ಇರುತ್ತದೆ. ಮೇ ತಿಂಗಳು ಇಲ್ಲಿ ಅತ್ಯಂತ ಬಿಸಿಲಿನಿಂದ ಕೂಡಿದ ತಿಂಗಳಾಗಿರುತ್ತದೆ. ಬಿಸಿಗಾಳಿಯ ಮಾರುತಗಳು ಇಲ್ಲಿನ ಹಗಲುಗಳನ್ನು ಅಸಹನೀಯಗೊಳಿಸುತ್ತವೆ.

ಮಳೆಗಾಲ

ಮಳೆಗಾಲವು ಇಲ್ಲಿ ಜುಲೈನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿ ಅಧಿಕವಾದ ಮಳೆ ಬೀಳುತ್ತದೆ. ಇಲ್ಲಿ ಅನಿಯಮಿತವಾಗಿ ಬಿಟ್ಟು ಬಿಟ್ಟು ಮಳೆ ಬೀಳುತ್ತದೆ. ಯಾವಾಗಲು ಮೋಡ ಮುಚ್ಚಿದ ವಾತಾವರಣವಿದ್ದು, ಆರ್ದ್ರತೆಯಿಂದ ಕೂಡಿರುವ ಹವಾಮಾನವನ್ನು ನಾವಿಲ್ಲಿ ಕಾಣಬಹುದು.

ಚಳಿಗಾಲ

ಚಳಿಗಾಲವು ಇಲ್ಲಿ ನವೆಂಬರಿನಿಂದ ಫೆಬ್ರವರಿಯವರೆಗೆ ಇರುತ್ತದೆ. ಆಗ ಇಲ್ಲಿನ ಹವಾಮಾನವು ಆಹ್ಲಾದಕರವಾಗಿರುತ್ತದೆ. ಉಷ್ಣಾಂಶವು 12° ಯಿಂದ 20° ಸೆಲ್ಶಿಯಸ್‍ವರೆಗೆ ಇರುತ್ತದೆ.