Search
 • Follow NativePlanet
Share
ಮುಖಪುಟ » ಸ್ಥಳಗಳು » ಘಜಿಯಾಬಾದ್ » ಆಕರ್ಷಣೆಗಳು » ದೌಲನ

ದೌಲನ, ಘಜಿಯಾಬಾದ್

1

ದೌಲನ ಎಂಬ ಐತಿಹಾಸಿಕ ಹಿನ್ನಲೆಯುಳ್ಳ ಹಳ್ಳಿಯು ಮೀರತ್- ಹಪುರ್ - ಬುಲಂದ್‍ಶಹರ್ ರಸ್ತೆಯಲ್ಲಿರುವ ಗುಲೊತಿ ಎಂಬಲ್ಲಿ ನೆಲೆಗೊಂಡಿದೆ. ಇದು ಘಜಿಯಾಬಾದ್‍ನಿಂದ 23 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಜನಪದ ಕತೆಯ ಪ್ರಕಾರ, ಈ ಹಳ್ಳಿಯನ್ನು ರಜಪೂತ್ ಪಾಳೆಗಾರನಾದ ಧೋಲ್ ಸಿಂಗ್ ಶಿಶೋಡಿಯನು ನಿರ್ಮಿಸಿದನು. ಈತನು ಈ ಹಳ್ಳಿಗೆ ತನ್ನದೇ ಹೆಸರನ್ನು ಇಟ್ಟನು. 1780ರಲ್ಲಿ ಈ ಊರಿನ ಮೇಲೆ ಆಕ್ರಮಣ ಮಾಡಿದ ಸಿಕ್ಕರು, ಇದನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

1857ರಲ್ಲಿ  ಆರಂಭವಾದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಮದಲ್ಲಿ ಈ ಊರು ಭಾರೀ ಹೆಸರನ್ನು ಸಂಪಾದಿಸಿತು. ಲಾಲಾ ಜನ್‍ಮುಖ್‍ಲಾಲ್ ಎಂಬಾತನ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರೆಂಬ ಕಾರಣಕ್ಕೆ, ಈ ಊರಿನ 14 ಮಂದಿ ರಜಪೂತ ನಿವಾಸಿಗಳನ್ನು ಬ್ರಿಟೀಷ್ ಸರ್ಕಾರ ಗಲ್ಲಿಗೇರಿಸಿತು.

ಇದಕ್ಕೆ ಕೃತಙ್ಞತೆಯನ್ನು ಸಲ್ಲಿಸುವ ಸಲುವಾಗಿ ಈ ಊರಿನ ನಿವಾಸಿಗಳು ಶಹೀದ್ ಸಮರಕಸ್ ಎಂಬ ಸ್ಮಾರಕವನ್ನು 1957ರಲ್ಲಿ ನಿರ್ಮಿಸಿ. ಅಗಲಿದ ಹುತಾತ್ಮರ ಶತಮಾನದ ಪುಣ್ಯ ಸ್ಮರಣೆಯನ್ನು ಅದ್ಧೂರಿಯಾಗಿ ಆಚರಿಸಿದರು.

ಸತಿ ಮಾಲಿಂದಿ ದೇವಿಗೆ ಸಮರ್ಪಿಸಲಾಗಿರುವ ದೇವಾಲಯವನ್ನು ಸಹ ನಾವಿಲ್ಲಿ ನೋಡಬಹುದು. ಈ ದೇವಾಲಯವು ಸ್ಥಳೀಯ ಭಕ್ತಾಧಿಗಳ ವಲಯದಲ್ಲಿ ಭಾರೀ ಆದರಕ್ಕೆ ಪಾತ್ರವಾಗಿದೆ. ಪ್ರತಿ ವರ್ಷ ನಡೆಯುವ ಜಾತ್ರೆಯು ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳನ್ನು ಆಕರ್ಷಿಸುತ್ತಿರುತ್ತದೆ.

One Way
Return
From (Departure City)
To (Destination City)
Depart On
20 Jun,Thu
Return On
21 Jun,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Jun,Thu
Check Out
21 Jun,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Jun,Thu
Return On
21 Jun,Fri
 • Today
  Ghaziabad
  35 OC
  95 OF
  UV Index: 9
  Haze
 • Tomorrow
  Ghaziabad
  33 OC
  91 OF
  UV Index: 9
  Sunny
 • Day After
  Ghaziabad
  33 OC
  92 OF
  UV Index: 9
  Sunny