Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಇಟ್‍ಮಡ್- ಉದ್- ದೌಲಹ್ ಗೋರಿ

ಇಟ್‍ಮಡ್- ಉದ್- ದೌಲಹ್ ಗೋರಿ, ಆಗ್ರಾ

4

ಮೊಘಲ್ ಚಕ್ರವರ್ತಿ ಅಕ್ಬರನ ಪುತ್ರನಾದ ಜಹಂಗಿರ್ ಇತಿಮಡ್- ಉದ್- ದೌಲಹ್ ಎಂಬ ಬಿರುದನ್ನು ಸಂಪಾದಿಸಿದ್ದನು. ಇದನ್ನು ನೀಡಿದವನು ಮಿರ್ಜಾ ಘಿಯಸ್ ಬೇಗ್. ಈತನು ಜಹಂಗೀರನ ಪ್ರೀತಿ ಪಾತ್ರ ಮಡದಿಯಾದ ನೂರ್ ಜಹಾನಳ ತಂದೆ. ಇಟ್‍ಮಡ್- ಉದ್- ದೌಲಹ್ ಗೋರಿಯಲ್ಲಿ ಮಿರ್ಜಾ ಘಿಯಸ್ ಮತ್ತು ಈತನ ಮಡದಿ ಅಸ್ಮತ್ ಜಹಾನಳ ಸಮಾಧಿಯನ್ನು ಇಡಲಾಗಿದೆ. ಇದನ್ನು ನೂರ್ ಜಹಾನ್ 1622 ರಿಂದ 1628 ರೊಳಗೆ ನಿರ್ಮಿಸಿದಳು.

ಈ ಗೋರಿಯ ವೈಭವವು ಇದರ ವಾಸ್ತುಶಿಲ್ಪದಲ್ಲಿ ಅಡಗಿದೆ. ಇದನ್ನು ಗಮನಿಸಿಯೇ ಇದನ್ನು ತಾಜ್ ಮಹಲಿನ ಮುಂಗೋಳಿ ಅಥವಾ ತಾಜ್ ನಿರ್ಮಾಣಕ್ಕೆ ಸ್ಫೂರ್ತಿ ಮತ್ತು ಸ್ಥೈರ್ಯ ತುಂಬಿದ ಗೋರಿ ಎಂದು ಪರಿಗಣಿಸಲಾಗಿದೆ. ಅಲ್ಲದೆ ಇದಕ್ಕೆ ಬೇಬಿ ತಾಜ್ ಅಥವಾ ಅಭರಣ ಪೆಟ್ಟಿಗೆ ಎಂಬ ಹೆಸರು ಸಹ ಇದೆ.

ಈ ಗೋರಿಯು ಯಮುನಾ ನದಿಯ ಪೂರ್ವ ತೀರದಲ್ಲಿ ಸುಮಾರು 23 ಚದರ ಮೀಟರ್ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ರಾ.ಹೆ- 2ರಲ್ಲಿ ಬರುವ ಇದು, ರಾಮ್ ಬಾಗ್‍ನಿಂದ ಕೇವಲ ಎರಡು ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.

ಈ ಗೋರಿಯು ಕೆಂಪು ಕಲ್ಲಿನಿಂದ ನಿರ್ಮಿಸಲಾಗಿರುವ ಕಂಬದ ಬುನಾದಿಯ ಮೇಲೆ ನೆಲೆಗೊಂಡಿದೆ. ಇಲ್ಲಿ ಚಾರ್ ಬಾಗ್ ಎನ್ನುವ ಪ್ರಸಿದ್ಧ ಪರ್ಷಿಯನ್ ಉದ್ಯಾನವನವನ್ನು ನಾವು ನೋಡಬಹುದು. ಈ ಉದ್ಯಾನವನದಲ್ಲಿ ಅಡ್ಡಡ್ಡ ಸೀಳಿಕೊಂಡು ಹೋಗಿರುವ ನೀರಿನ ಕಾಲುವೆಗಳು, ಕಾರಂಜಿಗಳು, ಕಲ್ಲು ಹಾಸು ಹಾಕಿದ ಕಾಲು ಹಾದಿಗಳು, ತೊಟ್ಟಿಗಳು ಮತ್ತು ಕೃತಕ ಜಲಪಾತಗಳು ನೋಡುಗರ ಕಣ್ಮನವನ್ನು ಸೂರೆಗೊಳ್ಳುತ್ತವೆ. ಇವುಗಳು ಈ ಉದ್ಯಾನವನವನ್ನು ನಾಲ್ಕು ಭಾಗಗಳಾಗಿ ವಿಭಜಿಸಿ ಒಂದು ಅನುಪಮವಾದ ಸ್ಪರ್ಶವನ್ನು ನೀಡಿವೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed