India
Search
 • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಜಾಮಾ ಮಸೀದಿ

ಜಾಮಾ ಮಸೀದಿ, ಆಗ್ರಾ

5

1648ರಲ್ಲಿ ಮೊಘಲ್ ಸಾಮ್ರಾಟ ಶಹ ಜಹಾನಿನಿಂದ ತನ್ನ ಪ್ರೀತಿ ಪಾತ್ರ ಮಗಳಾದ ಜಹನರ ಬೇಗಂಗಾಗಿ ನಿರ್ಮಿಸಲ್ಪಟ್ಟ ಮಸೀದಿಯೇ ಜಾಮಾ ಮಸೀದಿ. ಇದನ್ನುಜಾಮಿ ಮಸೀದಿ ಅಥವಾ ಶುಕ್ರವಾರದ ಮಸೀದಿಯೆಂದು ಸಹ ಕರೆಯುತ್ತಾರೆ.

ಕೆಂಪು ಮರಳುಗಲ್ಲಿನಲ್ಲಿ ನಿರ್ಮಿಸಲಾಗಿರುವ ಈ ಮಸೀದಿಯನ್ನು ಬಿಳಿಯ ಅಮೃತಶಿಲೆಯ ವಿನ್ಯಾಸಗಳಿಂದ ಅಲಂಕರಿಸಲಾಗಿದೆ. ಈ ಮಸೀದಿಯ ಗೋಡೆ ಮತ್ತು ಛಾವಣಿಗೆ ನೀಲಿ ಬಣ್ಣವನ್ನು ಬಳಿಯಲಾಗಿದೆ. ಆಗ್ರಾ ನಗರದ ಹೃದಯ ಭಾಗದಲ್ಲಿ, ಆಗ್ರಾ ಕೋಟೆ ರೈಲು ನಿಲ್ದಾಣದ ಎದುರು ನೆಲೆಗೊಂಡಿರುವ ಈ ಮಸೀದಿಯು ಭಾರತದ ಅತ್ಯಂತ ದೊಡ್ಡ ಮಸೀದಿಗಳಲ್ಲಿ ಒಂದೆಂಬ ಖ್ಯಾತಿಗೆ ಪಾತ್ರವಾಗಿದೆ.

ಈ ಮಸೀದಿಯು ಒಂದು ದೊಡ್ಡದಾದ ವೇದಿಕೆಯ ಮೇಲೆ ನಿರ್ಮಾಣಗೊಂಡಿದೆ. ಐದು ಕಮಾನಿನ ಪ್ರವೇಶ ದ್ವಾರದ ಮೂಲಕ ಇದರ ಒಳಗೆ ಪ್ರವೇಶಿಸಬೇಕು. ಕೆಂಪು ಮರಳುಗಲ್ಲುಗಳಿಂದ ನಿರ್ಮಿಸಲ್ಪಟ್ಟ ಮೂರು ದೊಡ್ಡ ಗುಮ್ಮಟಗಳು ಇದಕ್ಕೆ ಇದೆ. ಈ ಮಸೀದಿಯ ಗೋಡೆಗಳು ರೇಖಾ ಗಣಿತದ ವಿನ್ಯಾಸಗಳನ್ನು ಮತ್ತು ಸುಂದರವಾದ ಬರವಣಿಗೆಯ ಕೆತ್ತನೆಗಳನ್ನು ಹೊಂದಿದೆ.

ಜಾಮಾ ಮಸೀದಿಯ ಮುಖ್ಯ ಸಭಾಂಗಣದಲ್ಲಿ ಏಕಕಾಲದಲ್ಲಿ 10000 ಜನ ಪ್ರಾರ್ಥನೆಯನ್ನು ಸಲ್ಲಿಸಬಹುದಾಗಿದೆ. ಅಲ್ಲದೆ ಈ ಮಸೀದಿಯಲ್ಲಿ ಸೂಫಿ ಸಂತರಾದ ಶೇಖ್ ಸಲೀಮ್ ಚಿಸ್ತಿಯವರ ಗೋರಿಯನ್ನು ಸಹ ಇಡಲಾಗಿದೆ.

One Way
Return
From (Departure City)
To (Destination City)
Depart On
17 Aug,Wed
Return On
18 Aug,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Aug,Wed
Check Out
18 Aug,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Aug,Wed
Return On
18 Aug,Thu