Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಮೆಹ್ತಬ್ ಬಾಗ್

ಮೆಹ್ತಬ್ ಬಾಗ್, ಆಗ್ರಾ

2

ಮೆಹ್ತಬ್ ಬಾಗ್ ಅಥವಾ ಚಂದ್ರನ ಬೆಳಕಿನ ಉದ್ಯಾನವನವನ್ನು 1631 ರಿಂದ 1635ರೊಳಗೆ ನಿರ್ಮಾಣ ಮಾಡಲಾಯಿತು.ಯಮುನಾ ನದಿಯ ದಂಡೆಯ ಮೇಲೆ ನೆಲೆಗೊಂಡಿರುವ ಈ ಅತ್ಯಾಕರ್ಷಕವಾದ ಉದ್ಯಾನವನವು ಸುಮಾರು 25 ಎಕರೆಗಳಷ್ಟು ವಿಸ್ತಾರವನ್ನು ಹೊಂದಿದೆ. ಇದು ತಾಜ್ ಮಹಲಿನ ವಿನ್ಯಾಸಕ್ಕೆ ಸಮರೂಪವನ್ನು ಹೊಂದಿದೆ. ಏಕೆಂದರೆ ಇದರ ಅಗಲವು ತಾಜ್ ಮಹಲಿನ ಅಗಲಕ್ಕೆ ಅಕ್ಷರಶಃ ಸರಿಹೊಂದುವಂತೆ ಇದೆ.

ಈ ಉದ್ಯಾನವನದ ಕೇಂದ್ರಭಾಗದಲ್ಲಿ ಅಷ್ಟಭುಜಾಕೃತಿಯ ಕೊಳವಿದೆ. ಈ ಕೊಳವು ತಾಜ್ ಮಹಲಿನ ಬಿಂಬವನ್ನು ಪ್ರತಿಬಿಂಬಿಸುತ್ತದೆ. ಇದನ್ನು ನೋಡಲು ಯಾತ್ರಿಕರ ದಂಡೆ ನೆರೆದಿರುತ್ತದೆ. ಈ ಕೊಳಕ್ಕೆ ನೀರನ್ನು ಕೃತಕವಾಗಿ ನಿರ್ಮಿಸಲಾಗಿರುವ ಜಲಪಾತದ ಮೂಲಕ ಹಾಯಿಸಲಾಗುತ್ತದೆ.

ಈ ಉದ್ಯಾನವನವು ಯಮುನಾ ನದಿಯ ಪ್ರವಾಹಕ್ಕೆ ಸುಲಭವಾಗಿ ಸಿಕ್ಕಿಕೊಳ್ಳುವ ಸ್ಥಳದಲ್ಲಿ ನೆಲೆಗೊಂಡಿರುವುದರಿಂದಾಗಿ, ಮೊಘಲರ ಅವಧಿಯಿಂದ ಇಂದಿನವರೆಗು ಹಲವಾರು ಪ್ರವಾಹಗಳಲ್ಲಿ ಇದು ಮುಳುಗೆದ್ದಿದೆ. ಇದರ ಮೂಲ ಸ್ವರೂಪವು ಪ್ರವಾಹದ ಹೊಡೆತದಲ್ಲಿ ಕೊಚ್ಚಿ ಹೋಗಿದೆ. ಹಾಗಾಗಿ ಪ್ರಸ್ತುತ ಇದು ಶಿಥಿಲಾವಸ್ತೆಯನ್ನು ತಲುಪಿದೆ.

ಈ ಉದ್ಯಾನವನದ ಪ್ರತಿ ಮೂಲೆಯಲ್ಲಿ ನಾಲ್ಕು ಮರಳುಗಲ್ಲಿನ ಗೋಪುರಗಳು ಇದ್ದವು. ಆದರೆ ಪ್ರವಾಹದ ಹೊಡೆತಕ್ಕೆ ಸಿಕ್ಕಿ ಇಂದು ಕೇವಲ ಒಂದು ಗೋಪುರ ಮಾತ್ರ ಉಳಿದುಕೊಂಡಿದೆ.  ಕೊಳದ ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ನಾವು ಎರಡು ಕಟ್ಟಡಗಳ ಬುನಾದಿಯನ್ನು ಗಮನಿಸಬಹುದು. ಮೂಲತಃ ಇವು ಈ ಉದ್ಯಾನವನದ ಮೊಗಸಾಲೆಗಳಾಗಿದ್ದವು ಎಂದು ತಿಳಿದು ಬಂದಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu